More

    ಕರೊನಾ ಸಾವಿನ ನಿಜವಾದ ಲೆಕ್ಕ ಕೊಡಿ: ರಾಮಲಿಂಗಾರೆಡ್ಡಿ ಆಗ್ರಹ

    ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಕರೊನಾದಿಂದ ಉಂಟಾಗಿರುವ ಸಾವಿನ ಸಂಖ್ಯೆಯನ್ನು ವ್ಯವಸ್ಥಿತವಾಗಿ ಮುಚ್ಚಿಟ್ಟಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಸಾವಿನ ಲೆಕ್ಕದ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಉತ್ತರ ನೀಡಬೇಕು ಎಂದಿದ್ದಾರೆ.

    ಜನನ ಮತ್ತು ಮರಣ ನೋಂದಣಿ ಕಚೇರಿಯಿಂದ ಮಾಹಿತಿ ಪಡೆದಿದ್ದೇವೆ. 2018 ರಲ್ಲಿ 4,83,511 ಜನರ ಮರಣವಾಗಿದೆ, 2019 ರಲ್ಲಿ 5,08,584 ಮರಣವಾಗಿದೆ, 2020 ರಲ್ಲಿ 5,51,808 ಮರಣವಾಗಿದೆ. ಆದರೆ, 2021 ರಲ್ಲಿ ಜುಲೈವರೆಗೆ ಏಳೇ ತಿಂಗಳಲ್ಲೇ 4,26,790 ಜನರ ಮರಣವಾಗಿದೆ. ಪ್ರತಿ ವರ್ಷ ಸರಾಸರಿ ಮರಣದ ಸಂಖ್ಯೆ ಗಮನಿಸಿದರೆ ಕರೊನಾದಿಂದ ಮರಣ ಹೊಂದಿರುವ ಜನರ ನಿಜವಾದ ಲೆಕ್ಕ ಸಿಗಲಿದೆ. ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

    ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿದರೆ 7 ತಿಂಗಳಲ್ಲಿ 1 ಲಕ್ಷ 62 ಸಾವಿರ ಜನ ಹೆಚ್ಚಾಗಿ ಸತ್ತಿದ್ದಾರೆ. ಸರ್ಕಾರಿ ಲೆಕ್ಕದ ಪ್ರಕಾರ ಕರೊನಾದಿಂದ 37 ಸಾವಿರದ 18 ಮಂದಿ ಮಾತ್ರ ಸತ್ತಿರುವುದು. ಹಾಗಾದ್ರೆ ಹೆಚ್ಚುವರಿಯಾಗಿ ಇಷ್ಟು ಜನ ಹೇಗೆ ಸತ್ತಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಮಾಜಿ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.

    ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನ ಕೊಲೆ

    ಕಾಮುಕನಿಂದ ಕ್ರೂರ ಹಿಂಸೆ ಅನುಭವಿಸಿದ ಮುಂಬೈ ಮಹಿಳೆ ಸಾವು

    ಗಣಪ ಮೂರ್ತಿ ಎತ್ತರ: ಸರ್ಕಾರಿ ಆದೇಶಕ್ಕೆ ಸೆಡ್ಡು ಹೊಡೆದ ವಿಶ್ವ ಹಿಂದೂ ಪರಿಷತ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts