More

    ಹಕ್ಕು, ಕರ್ತವ್ಯ ಅರಿತು ಮಾದರಿ ಆಡಳಿತ ನೀಡಿ

    ಹಾವೇರಿ: ಗ್ರಾಪಂಗಳಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಲ್ಲಿ ಶೇ. 60ರಷ್ಟು ಯುವಕರಿದ್ದೀರಿ. ಎಲ್ಲರಲ್ಲಿಯೂ ಉತ್ತಮ ಕೆಲಸ ಮಾಡುವ ಹುಮ್ಮಸಿದೆ. ನಿಮ್ಮ ಅಧಿಕಾರದ ಕರ್ತವ್ಯ ಮತ್ತು ಹಕ್ಕುಗಳನ್ನು ಅರಿತುಕೊಂಡರೆ ಮಾದರಿ ಆಡಳಿತ ನೀಡಬಹುದು ಎಂದು ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಹೇಳಿದರು.

    ಬ್ಯಾಡಗಿ ತಾಲೂಕು ಕಾಗಿನೆಲೆಯ ಕನಕ ಕಲಾಭವನದಲ್ಲಿ ಜಿಪಂ ವತಿಯಿಂದ ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯಡಿ ಶನಿವಾರ ಆಯೋಜಿಸಿದ್ದ ನಮ್ಮ ನಡಿಗೆ-ತ್ಯಾಜ್ಯ ಮುಕ್ತ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ನೂತನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಘನತ್ಯಾಜ್ಯ ನಿರ್ವಹಣೆ ಅನುಷ್ಠಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ನೀವು ಮನಸ್ಸು ಮಾಡಿದರೆ ಗ್ರಾಮಗಳನ್ನು ಸ್ವಚ್ಛ, ಸುಂದರವಾಗಿ ಅಭಿವೃದ್ಧಿಪಡಿಸಬಹುದು. ಗ್ರಾಮೀಣ ಭಾಗದಲ್ಲಿ ತಿಪ್ಪೆಗುಂಡಿ ಹಾಗೂ ಸುತ್ತಮುತ್ತಲೂ ಗಿಡಗಂಟಿ ಬೆಳೆದು ಗ್ರಾಮಗಳ ಅಂದ ಕೆಡಲು ಕಾರಣವಾಗಿದೆ. ಮೊದಲು ತಿಪ್ಪೆಗುಂಡಿಗಳನ್ನು ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸವಾಗಬೇಕು. ಗಿಡಗಂಟಿಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿದರೆ ಶೇ. 30ರಷ್ಟು ಸ್ಚಚ್ಛತೆಯಾಗುತ್ತದೆ ಎಂದರು.

    ಬಯಲು ಬಹಿರ್ದೆಸೆ ತಡೆಯಲು ವೈಯಕ್ತಿಕ ಶೌಚಗೃಹ ನಿರ್ವಣಕ್ಕೆ ಸ್ಥಳದ ಕೊರತೆ ಕಂಡುಬಂದರೆ ಸಾಮೂಹಿಕ ಶೌಚಗೃಹಕ್ಕೆ ಆದ್ಯತೆ ನೀಡಬೇಕು. ವ್ಯರ್ಥವಾಗಿ ಹರಿದು ಹೋಗುವ ನೀರಿನ ನಿರ್ವಹಣೆ ಕುರಿತು ಜಾಗೃತಿ ಮೂಡಿಸಿದರೆ ಗ್ರಾಮದಲ್ಲಿ ಶೇ. 50ರಷ್ಟು ಶುಚಿತ್ವವನ್ನು ಕಾಪಾಡಿಕೊಳ್ಳಬಹುದು. 15ನೇ ಹಣಕಾಸು ಯೋಜನೆಯಡಿ ವಾಹನ ಖರೀದಿಸಲು ಅವಕಾಶವಿದೆ. ಈ ಅವಕಾಶ ಬಳಸಿಕೊಂಡು ಗ್ರಾಮಗಳ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದರು.

    ಜಿಪಂ ಸಿಇಒ ಮಹಮ್ಮದ್ ರೋಷನ್ ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರು ಗ್ರಾಮದ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ, ಕಟ್ಟಡ ಕಾಮಗಾರಿಗಳಲ್ಲ. ಕುಡಿಯುವ ನೀರು, ನೈರ್ಮಲ್ಯ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು. ನಿಮ್ಮ ವ್ಯಾಪ್ತಿಯಲ್ಲಿ ಶಿಕ್ಷಣ, ಕೃಷಿ, ರೇಷ್ಮೆ, ಕೈಗಾರಿಕೆ ಸೇರಿ 32 ಇಲಾಖೆಗಳ ಮೇಲೆ ನಿಮ್ಮ ಜವಾಬ್ದಾರಿಯಿದೆ. ನಿಮ್ಮ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಕಾಲೇಜ್​ಗಳ ಬೆಳವಣಿಗೆಯ ಮೇಲೆ ನಿಗಾ ವಹಿಸುವ ಅಧಿಕಾರ ನಿಮಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಇಂದಿನ ವ್ಯವಸ್ಥೆಯಲ್ಲಿ ಜಿಪಂ ಅಧ್ಯಕ್ಷರಿಗಿಲ್ಲದ ಅಧಿಕಾರ ಗ್ರಾಪಂ ಅಧ್ಯಕ್ಷರಿಗಿದೆ. ಗ್ರಾಪಂಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ತ್ಯಾಜ್ಯ, ಹೊಗೆ ಮುಕ್ತ ಹಾಗೂ ಬಹಿರ್ದೆಸೆ ಮುಕ್ತ ಗ್ರಾಮಕ್ಕೆ ಸಂಕಲ್ಪ ಮಾಡಬೇಕು ಎಂದರು.

    ಸ್ವಚ್ಛೋತ್ಸವ, ಜಲೋತ್ಸವ ದಿನದರ್ಶಿಕೆ ಹಾಗೂ ಸ್ವಚ್ಛತಾ ಜಾಗೃತಿ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆ ಕುರಿತು ಕಿರು ನಾಟಕ ಪ್ರದರ್ಶನ ಹಾಗೂ ಹಸಿ ಕಸ, ಒಣ ಕಸ ವಿಂಗಡಣೆ ಡಸ್ಟ್ ಬಿನ್​ಗಳನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು. ಜಿಪಂ ಸಹಾಯಕ ಕಾರ್ಯದರ್ಶಿ ಜಾಫರ ಸುತಾರ ಸ್ವಚ್ಛತಾ ಪ್ರತಿಜಾ ್ಞ ವಿಧಿ ಬೋಧಿಸಿದರು.

    ಜಿಪಂ ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ, ಅಬ್ದುಲ್​ವುುನಾಫ್ ಯಲಿಗಾರ, ಮಾಲತೇಶ ಸೊಪ್ಪಿನ, ಸುಮಿತ್ರಾ ಪಾಟೀಲ, ತಾಪಂ ಅಧ್ಯಕ್ಷರಾದ ರಾಜು ಬಣಕಾರ, ಸವಿತಾ ಸುತ್ತಕೋಟಿ, ಸದಸ್ಯ ಜಗದೀಶ ಪೂಜಾರ, ಕಾಗಿನೆಲೆ ಗ್ರಾಪಂ ಅಧ್ಯಕ್ಷೆ ಹಯಾತ್​ಬಿ ಮತ್ತಿಹಳ್ಳಿ ಉಪಸ್ಥಿತರಿದ್ದರು. ಇಒ ಎ.ಟಿ. ಜಯಕುಮಾರ ಸ್ವಾಗತಿಸಿದರು. ಜಿಪಂ ಸ್ವಚ್ಛ ಭಾರತ ನೋಡಲ್ ಅಧಿಕಾರಿ ಲೋಕೇಶ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts