More

    ಗುಣಮಟ್ಟದ ಶೂ, ಸಾಕ್ಸ್ ಕೊಡಿ

    ಮುಂಡಗೋಡ: ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೂ ಹಾಗೂ ಸಾಕ್ಸ್​ಗಳನ್ನು ವಿತರಿಸಬೇಕು ಎಂಬುದು ಬಹುತೇಕ ಪಾಲಕರು ಆಗ್ರಹವಾಗಿದೆ.

    ಸರ್ಕಾರಿ ಶಾಲೆಗಳಿಗೆ ಬರುವ ಬಡ ಮಕ್ಕಳಿಗೆ ಅನುಕೂಲವಾಗಲೆಂದು ಪ್ರತಿವರ್ಷವೂ ಸರ್ಕಾರ ಉಚಿತವಾಗಿ ಶೂ ಹಾಗೂ ಸಾಕ್ಸ್​ಗಳನ್ನು ವಿತರಿಸುತ್ತದೆ.

    ಶೂ ಹಾಗೂ ಸಾಕ್ಸ್್ಸಳನ್ನು ಖರೀದಿಸಲು ಸರ್ಕಾರ ಶಿಕ್ಷಣ ಇಲಾಖೆ ಮೂಲಕ ನೇರವಾಗಿ ಶಾಲೆಗಳು ಹಾಗೂ ಶಿಕ್ಷಣಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ, ಕೆಲವೆಡೆ ಗುಣಮಟ್ಟದ ಶೂಗಳ ವಿತರಣೆ ಆಗುವುದಿಲ್ಲ ಎಂಬ ಕೂಗು ಪ್ರತಿವರ್ಷವೂ ಕೇಳುತ್ತಲೆ ಬಂದಿದೆ.

    ಸರ್ಕಾರದ ನಿಯಮ

    ರಾಜ್ಯ ಸರ್ಕಾರವೂ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಒಂದರಿಂದ ಹತ್ತನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್್ಸಳನ್ನು ವಿತರಿಸಲು ನಿಯಮ ಮಾಡಿದೆ. ಶೂ ಹಾಗೂ ಸಾಕ್ಸ್ ವಿತರಿಸುವ ಗುತ್ತಿಗೆದಾರರಿಂದ ಟೆಂಡರ್ ಕರೆದು ಉತ್ತಮ ಕಂಪನಿಯ ಹಾಗೂ ಗುಣಮಟ್ಟದ ಶೂ ಹಾಗೂ ಎರಡು ಜೊತೆ ಸಾಕ್ಸ್ (ಕಾಲುಚೀಲ)ಗಳನ್ನು ವಿತರಿಸಲು ಸೂಚಿಸಬೇಕು.

    ಕೆಲ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಮತ್ತು ಬಿಸಿಲು ಇರುವುದರಿಂದ ವಾತಾವರಣಕ್ಕೆ ಅನುಗುಣವಾಗಿ ಚಪ್ಪಲಿ ಅಥವಾ ಶೂ ಗಳನ್ನು ಖರೀದಿಸಿ ಜು. 31ರ ಒಳಗಾಗಿ ವಿತರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

    ಸರ್ಕಾರದ ಅನುದಾನ

    1ರಿಂದ 6ನೇ ತರಗತಿ ವಿದ್ಯಾರ್ಥಿಗಳ ಶೂ ಹಾಗೂ ಸಾಕ್ಸ್​ಗಳನ್ನು ಖರೀದಿಸಲು 265 ರೂ. ಹಾಗೂ 6 ರಿಂದ 8ನೇ ತರಗತಿ ಶೂ ಹಾಗೂ ಸಾಕ್ಸ್​ಗೆ 295 ರೂ. ಹಾಗೂ 9 ಹಾಗೂ 10ನೇ ತರಗತಿಗೆ 325 ರೂ.ಗಳನ್ನು ಸರ್ಕಾರ ನೀಡುತ್ತದೆ. ಈ ಹಣದಲ್ಲಿ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್​ಗಳನ್ನು ಖರೀದಿಸಬೇಕು.

    ಈ ಕುರಿತು ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಿ ತಾಲೂಕಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ವಾಕ್ಮೆಟ್, ಲೂನಾರ್ಸ್, ಬಾಟಾ, ಪ್ಯಾರೆಗಾನ್ ಸೇರಿ ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆಯಾಗುವಂತಹ ಗುಣಮಟ್ಟದ ಶೂಗಳನ್ನು ವಿತರಿಸಲು ಕಟ್ಟುನಿಟ್ಟಿನ ಕ್ರಮ ವಹಿಸುವ ಅವಶ್ಯವಿದೆ ಎಂಬುದು ಪಾಲಕರ ಆಗ್ರಹವಾಗಿದೆ.

    ಕೆಲವು ಶಾಲೆಯವರು ಕಳಪೆ ಶೂಗಳನ್ನು ಖರೀದಿಸಿ ನೀಡುತ್ತಾರೆ. ಎರಡ್ಮೂರು ತಿಂಗಳಲ್ಲಿ ಶೂ ಹಾಳಾಗುತ್ತವೆ. ತಾಲೂಕಿನ ಎಲ್ಲ ಶಾಲೆಗಳಿಗೆ ಉತ್ತಮ ಕಂಪನಿಯ ಗುಣಮಟ್ಟದ ಶೂಗಳನ್ನು ವಿತರಿಸುವಂತಾಗಬೇಕು.
    | ಬಸವರಾಜ ಬಳಿಗೇರ ಪಾಲಕ

    ಕಳಪೆ ಗುಣಮಟ್ಟದ ಶೂಗಳನ್ನು ಖರೀದಿಸಿ ಯಾವುದೆ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಿದರೆ ಅಂತವರ ಮೇಲೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ವಿಶೇಷವಾಗಿ ಶಾಸಕರ ಮಾದರಿ ಶಾಲೆಯ ಶಿಕ್ಷಕರಿಗೆ ಎಚ್ಚರಿಕೆ ನೀಡುತ್ತೇವೆ. ಈ ಕುರಿತು ಗಮನ ಹರಿಸುವಂತೆ ಡಿಡಿಪಿಐ ಹಾಗೂ ಬಿಇಒಗೆ ಸೂಚಿಸುತ್ತೇನೆ.
    | ಶಿವರಾಮ ಹೆಬ್ಬಾರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts