More

    ನೀರಿನ ಸಮಸ್ಯಗೆ ಶಾಶ್ವತ ಪರಿಹಾರ ನೀಡಿ

    ಮೈಸೂರು: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಕೆಆರ್‌ಎಸ್ ಸೇರಿದಂತೆ ಕಾವೇರಿ ಕಣಿವೆಯ ಜಲಾಶಯಗಳು ಬರಿದಾಗುತ್ತಿದ್ದು, ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಈಗಾಗಲೇ ತೊಂದರೆ ಎದುರಾಗಿದೆ. ಮುಂದೆ ಮೈಸೂರಲ್ಲೂ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಸಾಂಸ್ಕೃತಿಕ ನಗರಿಯ ಪ್ರತಿಯೊಂದು ಬಡಾವಣೆಯಲ್ಲೂ ಇದೀಗ ಕುಡಿಯುವ ನೀರಿನದ್ದೇ ಚರ್ಚೆಯ ವಿಷಯ.

    ನೀರಿನ ಸಮಸ್ಯೆ ಪ್ರತಿವರ್ಷ ಕಾಣಿಸಿಕೊಂಡರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಯಾರೂ ಆಸಕ್ತಿ ತೋರದ ಪರಿಣಾಮ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ.

    ನಗರದಲ್ಲಿ ಪ್ರಸ್ತುತ 14 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದೆ. ನಿತ್ಯ 250 ಎಂಎಲ್‌ಡಿಗೂ ಹೆಚ್ಚು ನೀರು ಪೂರೈಕೆಯಾಗುತ್ತಿದೆ. ಸದ್ಯ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳು ಬರಿದಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಎದುರಾಗುವ ಲಕ್ಷಣಗಳು ಕಾಣುತ್ತಿವೆ.

    ಇನ್ನು ನಗರದಲ್ಲಿ ನೂರಾರು ಬೋರ್‌ಗಳಿವೆ. ಈ ಪೈಕಿ ಅನೇಕ ಬೋರ್‌ಗಳು ಆಗಾಗ್ಗೆ ಕೆಟ್ಟುಹೋಗುತ್ತಿರುತ್ತವೆ. ಅವುಗಳನ್ನು ರಿಪೇರಿ ಮಾಡುವ ಕೆಲಸವೂ ಪಾಲಿಕೆ ವತಿಯಿಂದ ಪ್ರತಿದಿನ ನಡೆಯುತ್ತಿರುತ್ತದೆ. ಈ ಎಲ್ಲದರ ಹಿನ್ನೆಲೆಯಲ್ಲಿ ನಗರದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸರ್ಕಾರ ಹಾಗೂ ನಾಗರಿಕರು ಯಾವ ರೀತಿಯ ಹೆಜ್ಜೆಗಳನ್ನಿರಿಸಬೇಕೆಂಬ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts