More

    ಸಚಿವ ತಿಮ್ಮಾಪುರಗೆ ಡಿಸಿಎಂ ಸ್ಥಾನ ನೀಡಿ

    ಬಾಗಲಕೋಟೆ: ಕಾಂಗ್ರೆಸ್ ಪಕ್ಷಕ್ಕೆ ದಲಿತ ಎಡಗೈ ಸಮುದಾಯ ಎಲ್ಲ ಚುನಾವಣೆಗಳಲ್ಲಿ ಬೆಂಬಲಿಸುತ್ತಾ ಬಂದಿದೆ. ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡುವಲ್ಲಿ ನಿರ್ಲಕ್ಷೃ ಧೋರಣೆ ಮಾಡಬಾರದು. ಪಕ್ಷದ ಹೈಕಮಾಂಡ್ ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸಲು ಮುಂದಾದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ನೀಡಬೇಕು ಎಂದು ಮಾದಿಗ ಸಮಾಜದ ಮುಖಂಡ ಪೀರಪ್ಪ ಮ್ಯಾಗೇರಿ ಹೇಳಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಬಿ. ತಿಮ್ಮಾಪುರ ದಲಿತ ಎರಡೈ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಯಶಸ್ವಿಯಾಗಿ ಖಾತೆಗಳನ್ನು ನಿಭಾಯಿಸಿದ್ದಾರೆ. ಸಾಮಾಜಿಕ ಬದ್ಧತೆ ಇರುವ ನಾಯಕರಾಗಿದ್ದಾರೆ ಎಂದರು.

    ಕಾಂಗ್ರೆಸ್ ಪಕ್ಷವು ಈ ಹಿಂದೆ ಅನೇಕ ಸಮುದಾಯದ ನಾಯಕರಿಗೆ ಡಿಸಿಎಂ ಸ್ಥಾನ ನೀಡಿದೆ. ಈ ವರೆಗೆ ಮಾದಿಗ ಸಮಾಜಕ್ಕೆ ನೀಡಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಮಾದಿಗ ಸಮಾಜವು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕಾದರೇ ಡಿಸಿಎಂ ಸ್ಥಾನ ನೀಡಬೇಕು. ಇಂದಿರಾ ಗಾಂಧಿ ಕಾಲದಿಂದ ಮಾದಿಗ ಸಮಾಜವು ಕಾಂಗ್ರೆಸ್ ಪಕ್ಷವನ್ನು ಕೈ ಬಿಟ್ಟಿಲ್ಲ. ದಲಿತ ಎಡಗೈ ಸಮುದಾಯ ಬೆನ್ನೆಲುಬಾಗಿ ನಿಂತಿದೆ. ಸಮಾಜಕ್ಕೆ ಡಿಸಿಎಂ ಸ್ಥಾನ ನೀಡುವ ಮೂಲಕ ಗೌರವಿಸಬೇಕು. ಸಚಿವ ತಿಮ್ಮಾಪುರ ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
    ಮುಖಂಡರಾದ ದಶರಥ ಚಿಕ್ಕಸಂಶಿ, ಶಿವಾನಂದ ಮಾದರ, ನಾಗೇಶ ಶಿಡ್ಲನ್ನರ್ವ, ಮಂಜುನಾಥ ಮಾದರ, ವೀರುಪಾಕ್ಷಿ ಪೂಜಾರ, ರಂಗನಾಥ ಎಸ್., ಮುತ್ತಪ್ಪ ಛಬ್ಬಿ, ರಮೇಶ ಮಾದರ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts