More

    ದೋಸ್ತ…ನಿನ್ನ ಟ್ವಿಟರ್ ಯಾರ ಹ್ಯಾಂಡಲ್ ಮಾಡ್ತಾರ…

    ನಮ್ಮ ದೋಸ್ತ ಒಬ್ಬೊಂವ ಇತ್ತೀಚಿಗೆ ಟ್ವಿಟರ್ ಅಕೌಂಟ್ ಓಪನ್ ಮಾಡಿ ಭಾರಿ ಯಾಕ್ಟೀವ್ ಆಗ್ಯಾನ, ಅಗದಿ ಖತರನಾಕ ಟ್ವೀಟ್ ಮಾಡೊದ, ಸಂಬಂಧ ಇದ್ದೋರಿಗೆ ಇಲ್ಲದವರಿಗೆ ಎಲ್ಲಾರಿಗೂ ಟ್ಯಾಗ ಮಾಡೋದ, ಮೆನ್ಶನ್ ಮಾಡೋದ ಎಲ್ಲಾ ಮಾಡ್ಲಿಕತ್ತಾನ. ಅವಂದ ಇಂಗ್ಲಿಷರ ಫ್ರೆಂಚ್ ಮತ್ ಗ್ರೀಕ್ ಇದ್ದಂಗ ಇತ್ತ ಆದರು ಹೆಂಗ ಈ ಪರಿ ಟ್ವೀಟ್ ಮಾಡ್ಲಿಕತ್ತಾನ ಅಂತ ನಮಗೇಲ್ಲಾ ಆಶ್ಚರ್ಯ ಆಗೋದ.

    ಅಲ್ಲಾ ಅವನ ಟ್ವೀಟ್ ಹೆಂತಾ ಮಜಾ ಮಜಾ ಇರ್ತಿದ್ವ ಅಂದರ ಮನಿಗೆ ಗ್ಯಾಸ್ ಸಿಲೆಂಡರ್ ಬಂದರ ್ಕ್ಚReceived LPG cylinder in time, thanks to @NarendraModi ji for #Ujjwala ಅಂತ ಟ್ವೀಟ್ ಮಾಡಿ ಅದನ್ನ @BPCLimitedಗೆ ಟ್ಯಾಗ್ ಮಾಡ್ತಿದ್ದಾ.

    ಕಸದವರ ಬರೋದ ಸ್ವಲ್ಪ ಲೇಟ ಆದರೂ ’’Nobody to collect house to house Dust today, No #SwachchaBharat in @HDMC @NarendraModi’ ಅಂತ ಮೋದಿಯವರನ್ನ ಮೆನ್ಶನ್ ಮಾಡೋದು, ನಳಾ ಬರೋ ಪಾಳೆ ಇದ್ದ ದಿವಸ ನಳಾ ಬರಲಿಲ್ಲಾ ಅಂದರ ಅದಕ್ಕೊಂದ ಟ್ವೀಟ್ ಮಾಡಿ ಲೋಕಲ್ ಎಂಪಿ, ಎಂಎಲ್​ಎ ಕಡಿಕೆ ಜಲ ನಿರ್ವಹಣಾ ಮಂತ್ರಿಗೆ ಸಹಿತ ಟ್ವೀಟ್ ಮಾಡ್ತಿದ್ದಾ.

    ದೋಸ್ತ...ನಿನ್ನ ಟ್ವಿಟರ್ ಯಾರ ಹ್ಯಾಂಡಲ್ ಮಾಡ್ತಾರ...

    ಅದರಾಗ ಒಮ್ಮೊಮ್ಮೆ ಇವನ್ನ ಟ್ವೀಟ್ ಅಪ್ಪಿ ತಪ್ಪಿ ಕಾಪೋರೇಶನ್ನವರೋ ಇಲ್ಲಾ ಮಿನಿಸ್ಟರ್ ನೋಡಿ ರಿಪ್ಲೈ ಮಾಡಿ ಇವರ ಮನಿಗೆ ಒಂದ ಟ್ಯಾಂಕರ್ ನೀರ ಕಳಸಿ ಬಿಟ್ಟರ ಇಂವಾ ಫುಲ್ ಖುಶ್ ಆಗಿ ನಮಗೇಲ್ಲಾ, ‘ನಾ ಒಂದ ಟ್ವೀಟ್ ಮಾಡಿದರ ನಮ್ಮ ಮನಿಗೆ ನೀರ ಬರ್ತದ ಮಗನ’ ಅಂತ ಹೇಳೊಂವಾ. ಒಂದ ಸರತೆ ಇಂವಾ ರಾಣಿ ಚೆನ್ನಮ್ಮಾದಾಗ ಬೆಂಗಳೂರಿಗೆ ಹೋಗಬೇಕಾರ ಟಾಯ್ಲಟ್​ಗೆ ಹೋಗಿದ್ದ ನಂತ, ಟಾಯ್ಲಟ್ ಒಳಗ ನೀರ ಒಮ್ಮಿಂದೊಮ್ಮಿಲೇ ಖಾಲಿ ಆಗಿ ಮ್ಯಾಲೆ ಲೈಟ್ ಬ್ಯಾರೆ ಹೋದ್ವಂತ. ಇಂವಾ ತಲಿಕೆಟ್ಟ ಅಲ್ಲಿಂದ ‘No water, no light in train no 16590 #IndianRailwaysProblems ಅಂತ ಟ್ವೀಟ್ ಮಾಡಿ ರೈಲ್ವೆ ಮಿನಿಸ್ಟರಗೆ, ಡಿಜಿಎಂ, ಜಿಎಂ @SWRRLY ಎಲ್ಲಾರಿಗೂ ಟ್ಯಾಗ್ ಮಾಡಿ ಬಿಟ್ಟನಂತ. ಅಲ್ಲಾ ಟಾಯ್ಲೆಟ್ ಒಳಗ ನೀರ ಇದ್ದಿದ್ದಿಲ್ಲಾ, ಮ್ಯಾಲೆ ಕರೆಂಟ ಇದ್ದಿದ್ದಿಲ್ಲಾ ಹಿಂಗಾಗಿ ಇವಂಗ ಬ್ಯಾರೆ ಕೆಲಸ ಇದ್ದಿದ್ದಿಲ್ಲಾ, ಇನ್ನ ಮೊಬೈಲ್ ಅಂತೂ ಎಲ್ಲಾ ಕಡೇ ಇರೋದ ಭಡಾ ಭಡಾ ಎಲ್ಲಾರಿಗೂ ಟ್ಯಾಗ್ ಮಾಡಿ ಟ್ವೀಟ್ ಮಾಡಿದಾ. ತೊಗೊ ಇವನ ನಸೀಬಕ್ಕ ಆ ಟ್ವೀಟ್ ಆವಾಗಿನ ರೈಲ್ವೆ ಮಿನಿಸ್ಟರ್ ನೋಡಿ’Take immediate action’ ಅಂತ ಅವರೊಂದ ಹತ್ತ ್ಚconcerned personsಗೆ ಟ್ಯಾಗ್ ಮಾಡಿ ರಿಪ್ಲೈ ಕೊಟ್ಟರಂತ. ಕಡಿಕೆ ಒಬ್ಬ ಡಿಆರ್​ಎಂ,please provide your coach and seat No’ ಅಂತ ಕೇಳಿದರ ಅದಕ್ಕ ಈ ಶಾಣ್ಯಾ ನನ್ನ ಮಗಾ Coach No. S 13, Western Toilet Seat, leftside of right door’’ ಅಂತ ರಿಪ್ಲೈ ಮಾಡಿದನಂತ. ಮುಂದ ಏನಾತ ಅದನ್ನೇಲ್ಲಾ ಇಲ್ಲ ಬರಿಲಿಕ್ಕೆ ಬರಂಗಿಲ್ಲಾ. ಒಟ್ಟ ಅವನ ಪ್ರಾಬ್ಲೇಮ್ ಬಗಿಹರಿತ. ಇದನ್ನ ಅಂತೂ ಅಂವಾ ನಮ್ಮ ಮುಂದ ಒಂದ ಹತ್ತ ಸರತೆ ‘ನನ್ನ ಟ್ವೀಟ್​ಗೆ ರೈಲ್ವೆ ಮಿನಿಸ್ಟರ್ ರಿಸ್ಪಾಂಡ್ ಮಾಡಿದರು’ ಅಂತ ಹೇಳಿದ್ದ ಹೇಳಿದ್ದ.

    ಅಲ್ಲಾ ಇವತ್ತ ಸೋಷಿಯಲ್ ಮೀಡಿಯಾ ಅದರಾಗು Specifically twitter ಒಳಗ ಒಂದಿಷ್ಟ ಮಂದಿ ಇದ್ದಾರ. ಅವರದ ಬೆಳಗ್ಗೆ ಎದ್ದ ಕೂಡ್ಲೇ ಏನ ಕೆಲಸಪಾ ಅಂದರ ಒಂದ ಯಾವದರ ಸಮಸ್ಯೆ ಪೇಪರನಾಗ ಓದೋದು. ಅದನ್ನ ಸಂಬಂಧ ಇದ್ದವರಿಗೆ ಇರಲಾರದವರಿಗೆ ಎಲ್ಲಾರಿಗೂ ಮೆನ್ಶನ್ ಮಾಡಿ ಟ್ವೀಟ್ ಮಾಡೊದು. ಇವರಿಗೆ ಯಾವ ಸಮಸ್ಯೆ ಕಾಪೋರೇಟರಗೆ ಕೇಳಬೇಕು, ಯಾವದು ಎಂಪಿಗೆ ಕೇಳಬೇಕ ಗೊತ್ತಿರಂಗಿಲ್ಲಾ. ನಮ್ಮ ಓಣ್ಯಾಗಿನ ಗಟಾರ ನಮ್ಮಂತಾವರ ಕಸಾ ಹಾಕಿ ಹಾಕಿ ಬ್ಲಾಕ್ ಆದಾಗ ಮೋದಿಗೆ ಟ್ಯಾಗ್ ಮಾಡಿ look at #HubliDharwad #SmartCity ಅಂತ ಟ್ವೀಟ್ ಮಾಡಿದರ ಗಟಾರ ಸ್ವಚ್ಛ ಆಗ್ತದೇನ್ರಿ? ಇವರಿಗೆ ಪ್ರಾಬ್ಲೇಮ್ ಸಾಲ್ವ ಆಗೋದಕಿಂತಾ ತಮ್ಮ ಟ್ವೀಟ್ ಟ್ರೇಂಡ್ ಆಗಬೇಕ ಇಷ್ಟ.

    ಹೋಗ್ಲಿ ಬಿಡ್ರಿ ಇದ ಟಾಪಿಕ್ ಪಾಲಿಟಿಕಲ್ ಆಗಲಿಕತ್ತ. ನಾ ವಾಪಸ್ ನಮ್ಮ ದೋಸ್ತನ ವಿಷಯಕ್ಕ ಬರ್ತೆನಿ. ಹಿಂಗ ನಮ್ಮ ದೋಸ್ತ ಟ್ವಿಟರ್ ಒಳಗ ಯಾಕ್ಟಿವ್ ಆಗಿದ್ದ ನೋಡಿ ನಮಗೇಲ್ಲಾ ಭಾರಿ ಅಜೀಬ ಅನಸಿದರು ಡೌಟ್ ಅಂತು ಇತ್ತ. ಅಲ್ಲಾ ಈ ಮಗಾ, ಮೆನ್ಶನ್, ಹ್ಯಾಶ್​ಟ್ಯಾಗ್, ಟ್ರೇಂಡ್, ಇಂಪ್ರೇಶನ್ಸ್ ಇವನ್ನೇಲ್ಲಾ ಹೆಂಗ ಅರ್ಥಾ ಮಾಡ್ಕೊಳೊಷ್ಟ ಶಾಣ್ಯಾ ಆದ ಅಂತ ಅನಸಲಿಕತ್ತ.

    ಅದ ‘3 ಈಡಿಯಟ್ಸ್’ ಪಿಕ್ಚರ್ ಒಳಗ ಒಂದ ಡೈಲಾಗ್ ಅದ ಅಲಾ, ‘ದೋಸ್ತ ಫೇಲ್ ಆದರ ದುಃಖ ಆಗ್ತದ ಆದರ ದೋಸ್ತ ಶಾಣ್ಯಾ ಆಗಿ ಫಸ್ಟ್ ಬಂದರ ಇನ್ನೂ ಜಾಸ್ತಿ ದುಃಖ ಆಗ್ತದ’ ಅಂತ ಹಂಗ ನಮಗೇಲ್ಲಾ ಆಗಿತ್ತ.

    ಈಗ ರಿಯಲ್ ಕ್ಲೈಮ್ಯಾಕ್ಸ ಕೇಳ್ರಿ, ಒಂದ ಆರ ತಿಂಗಳ ಹಿಂದ ನಾನೂ ಅಂವಾ ಕೂಡಿ ಮಧ್ಯಾಹ್ನ ‘ಚಿಚೋರೆ’ ಅಂತ ಹಿಂದಿ ಫಿಲ್ಮಗೆ ಹೋಗಿದ್ವಿ. ಪಿಕ್ಚರ್ ಸ್ಟಾರ್ಟ್ ಆಗಿ ಒಂದ ಹತ್ತ ನಿಮಿಷಕ್ಕ ನನಗ ಸಡನ್ ಆಗಿ ಟ್ವಿಟರ್ ನೋಟಿಫಿಕೇಶನ್ ಬಂತ,

    ನಾ ನೋಡಿದರ ಅಷ್ಟ ಟ್ವಿಟರ್ ಒಳಗ ಯಾಕ್ಟೀವ್ ಇಲ್ಲಾ, ಯಾರದ ಅಂತ ನೋಡಿದರ ಈ ಮಗಂದ ಟ್ವೀಟ್

    ‘Attending shri @Satyanarayan pooja at @prashantadur residence’ ಅಂತ ಇತ್ತ. ಅಲ್ಲಾ ಡೈರೆಕ್ಟ್ ಸತ್ಯನಾರಾಯಣಗ ಟ್ಯಾಗ್ ಮಾಡಿದ್ದಾ. ಇವಂಗ ಸತ್ಯನಾರಾಯಣನ ಟ್ವಿಟರ್ ಹ್ಯಾಂಡಲ್ ಹೆಂಗ ಗೊತ್ತಾತಪಾ ಅಂತ ನಾ ಗಾಬರಿ ಆದೆ. ಅದ ಇರಲಿ, ಇಂವಾ ನೋಡಿದರ ಇಲ್ಲೆ ಮೊಬೈಲ್ ಸ್ವಿಚ್ ಆಫ್ ಮಾಡಿ ಬಾಯಿ ತಕ್ಕೊಂಡ ಶ್ರದ್ಧಾ ಕಪೂರನ ನೋಡ್ಕೋತ ಕೂತಾನ, ಇಂವಾ ಹೆಂಗ ಟ್ವೀಟ್ ಮಾಡಿದಾ ಅಂತ ಆಶ್ಚರ್ಯ ಆತ. ನಾ ಪಿಕ್ಚರ್ ಮುಗಿಯೋದ ತಡಾ ಅವಂಗ ಹಿಡದ ‘ಮಗನ ಈ ಟ್ವೀಟ್ ಯಾರ ಮಾಡಿದ್ದ’ ಅಂತ ಕೇಳಿದೆ. ಅಂವಾ ಭಾಳ ತಲಿಗೆಡಸಿಕೊಳ್ಳಿಲ್ಲಾ.

    ‘ಏ, ನಾ ಪಿಕ್ಚರ್​ಗೆ ಹೋಗ್ತೇನಿ ಅಂದರ ನನ್ನ ಹೆಂಡ್ತಿ ಬಿಡ್ತಿದ್ದಿಲ್ಲಾ, ಅದಕ್ಕ ಸುಳ್ಳ ನಿಮ್ಮ ಮನ್ಯಾಗ ಸತ್ಯನಾರಾಯಣ ಪೂಜಾ ಅದ ಅಂತ ಹೇಳಿ ಬಂದೇನಿ ತೊಗೊ’ ಅಂದಾ. ‘ಲೇ..ಮಗನ ಅದ ಇರಲಿ..ನೀ ಇಲ್ಲಿದ್ದಾಗ ನಿನ್ನ ಈ ಟ್ವೀಟ್ ಮಾಡಿದವರ ಯಾರ’ ಹೇಳ ಅಂದೆ. ‘ದೋಸ್ತ…ನೀ ಯಾರ ಮುಂದು ಹೇಳಬ್ಯಾಡ ಮತ್ತ…ನನ್ನ ಟ್ವಿಟರ್ ಹ್ಯಾಂಡಲ್ ಮಾಡೊದ ನನ್ನ ಹೆಂಡ್ತಿಲೇಪಾ…ನನಗೇಲ್ಲೆ ಸುಡಗಾಡ ಆ ಪರಿ ಇಂಗ್ಲಿಷ್ ಬರೆôತಿ’ ಅಂದ ಸೀದಾ ಗಾಡಿ ಕಿಕ್ ಹೊಡದ ತಮ್ಮ ಮನಿಗೆ ಹೋದಾ. ನಾ ಇದನ್ನ ಯಾವ ದೋಸ್ತರಿಗೂ ಇವತ್ತಿನ ತನಕ ಹೇಳಿಲ್ಲಾ, ನೀವು ಯಾರಿಗೂ ಹೇಳಬ್ಯಾಡ್ರಿ.

    ನಾ ನಿಮಗ ಮೊದ್ಲ ಹೇಳಲಿಲ್ಲಾ, ನಮಗ್ಯಾಕೋ ಈ ಮಗಾ ಹೆಂಗ ಟ್ವೀಟ್ ಮಾಡೋ ಅಷ್ಟ ಒಮ್ಮಿಂದೊಮ್ಮಿಲೇ ಶಾಣ್ಯಾ ಆದಾ ಅಂತ ಡೌಟ್ ಬಂದಿತ್ತ ಅಂತ. ಈಗ ಎಲ್ಲಾ ಕ್ಲೀಯರ್ ಆತ. ಅವನ ಟ್ವೀಟರ್ ಹ್ಯಾಂಡಲ್ ಹ್ಯಾಂಡಲ್ ಮಾಡೋಕಿ ಅವನ ಹೆಂಡ್ತಿ ಅಂತ. ಅಲ್ಲಾ ಅದರಾಗ ಏನ ತಪ್ಪಿಲ್ಲ ಬಿಡ್ರಿ, ಹೆಂಗಿದ್ದರೂ ಅರ್ಧಾಂಗಿನಿ, ಸಂಸಾರದ ಹ್ಯಾಂಡಲನ್ ಅಕಿ ಕಡೆ ಇದ್ದ ಮ್ಯಾಲೆ ಟ್ವೀಟರ್ ಹ್ಯಾಂಡಲ್ ಏನ ದೊಡ್ಡದ ಅಂತೇನಿ.

    ಅಲ್ಲಾ ಹಂಗ ಈ ಸೋಷಿಯಲ್ ಮೀಡಿಯಾದಾಗ ಯಾರದೋ ಟ್ವಿಟರ್ ಯಾರೋ ಹ್ಯಾಂಡಲ್ ಮಾಡ್ತಿರ್ತಾರ. ಇಲ್ಲೇ ನಾವ ನೋಡಿದರ ನಮ್ಮ ಟ್ವೀಟ್ ಅವರ ಲೈಕ್ ಮಾಡಿದರು, ಇವರ ರಿಟ್ವೀಟ್ ಮಾಡಿದ್ರು ಅಂತ ಹಾರಾಡ್ತಿರ್ತೆವಿ. ಹಂಗ ಅವನ್ನೇಲ್ಲಾ ಹ್ಯಾಂಡಲ್ ಮಾಡೊರ ಬ್ಯಾರೆನ ಇರ್ತಾರ.

    ಇನ್ನೊಂದ ಹೇಳೋದ ಮರತೆ. ಮೊನ್ನಿಗ ಕರೆಕ್ಟ್ ಹದಿನಾಲ್ಕ ವರ್ಷದ ಹಿಂದ ಜಗತ್ತಿನ ಮೊಟ್ಟ ಮೊದಲ ಟ್ವೀಟ್ ಜ್ಯಾಕ್ ಡೊರ್ಸೆ ಮಾಡಿದ್ದಾ. (On 21 March 2006, Jack Dorsey shared the first tweet ever & ‘just setting up my twitter’) ಹಂಗ ಅಂವಾ ಟ್ವಿಟರ್ ಸ್ವಂತ ತಾನ ಹ್ಯಾಂಡಲ್ ಮಾಡ್ತಿದ್ದನ ಮತ್ತ ಅವನ ಹೆಂಡ್ತಿ ಏನ ಅಲ್ಲಾ. ಒಂದ ಸರತೆ ಟ್ವಿಟರ್ ಕಂಡ ಹಿಡದ ಆ ಪುಣ್ಯಾತ್ಮಗ ನೆನಸಿಕೊಂಡ ನನ್ನ @prashantadur ಟ್ವಿಟರ್ ಅಕೌಂಟ್ ಒಳಗ ಇರೋ ಇವತ್ತಿನ ಆರ್ಟಿಕಲ್ ರಿಟ್ವೀಟ್ ಮಾಡ್ರಿ ಮತ್ತ.

    ವಿದೇಶದಿಂದ ಶೂಟಿಂಗ್​ ಮುಗಿಸಿ ಮರಳಿದ ನಟ ಪ್ರಭಾಸ್​ಗೆ ಮನೆಯಲ್ಲೇ ದಿಗ್ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts