More

    ‘ಹುಡುಗಿಯರೇ ರಾಹುಲ್ ಗಾಂಧಿ ಹತ್ತಿರ ಹೋಗಬೇಡಿ, ಆತನಿಗೆ ಮದುವೆಯಾಗಿಲ್ಲ’ ಎಂದ ಕೇರಳದ ಮಾಜಿ ಸಂಸದ!

    ತಿರುವನಂತಪುರ: ಹುಡುಗಿಯರೇ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿ ಹೋಗಬೇಡಿ. ಏಕೆಂದರೆ ಆತನಿಗೆ ಮದುವೆಯಾಗಿಲ್ಲ ಎಂದು ಕೇರಳದ ಮಾಜಿ ಸಂಸದ ಜಾಯ್ಸ್​ ಜಾರ್ಜ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇಡುಕ್ಕಿಯಲ್ಲಿ ನಡೆದ ಸಿಪಿಎಂ ಅಭ್ಯರ್ಥಿ ಎಂಎಂ ಮಣಿ ಅವರ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕಾರ್ಯಕ್ರಮಗಳು ಬರೀ ಮಹಿಳಾ ಕಾಲೇಜ್​ನಲ್ಲಿರುತ್ತವೆ. ಅವರು ಅಲ್ಲಿ ಹೋಗಿ ಹುಡುಗಿಯರು ಹೇಗೆ ನಿಲ್ಲಬೇಕು, ಹೇಗೆ ಬಾಗಬೇಕು ಎಂದು ಹೇಳಿ ಕೊಡುತ್ತಾರೆ ಎಂದು​ ಹೇಳಿದ್ದಾರೆ.

    ಇದನ್ನೂ ಓದಿ: ಸರ್ಕಾರಕ್ಕೆ ಎರಡು ದಿನಗಳ ಗಡುವು- ಇಲ್ಲದಿದ್ದರೆ ಸಾರಿಗೆಯಲ್ಲಿ ವ್ಯತ್ಯ: ಪ್ರಯಾಣಿಕರಿಗೆ ತಟ್ಟಲಿದೆ ಬಸ್‌ ಬಿಸಿ

    ಅಲ್ಲದೇ ಹೀಗಾಗಿ ಆತನ ಬಳಿ ಹುಡುಗಿಯರು ಹೋಗಬಾರದು. ಮದುವೆಯಾಗದ ಆತನ ಬಳಿ ಯುವತಿಯರು ಹೋಗುವುದು ಸರಿಯಲ್ಲ. ಆತ ಹೇಳಿದಂತೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

    ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇರಳ ಕಾಂಗ್ರೆಸ್, ಚುನಾವಣೆಯಲ್ಲಿ ಸೋಲುವ ಭಯದಿಂದ ಎಲ್​ಡಿಎಪ್ ಒಕ್ಕೂಟ ರಾಹುಲ್ ವಿರುದ್ಧ ಅಪ ಪ್ರಚಾರ ಮಾಡುತ್ತಿದೆ. ಎಡ ಒಕ್ಕೂಟ ಇಷ್ಟೊಂದು ಹೀನಾಯ ಮಟ್ಟಕ್ಕೆ ಇಳಿಯುತ್ತದೆ ಎಂದು ಸಾಬೀತಾಗಿದೆ ಎಂದು ಹೇಳಿದೆ.

    ಕೋರ್ಟ್​ಗೆ ಬಂದು ಹೇಳಿಕೆ ದಾಖಲಿಸಲು ಸಿಡಿ ಲೇಡಿಗೆ ಸೂಚಿಸಿದ ಜಡ್ಜ್: ಮಧ್ಯಾಹ್ನ 3 ಕ್ಕೆ ಯುವತಿ ಹಾಜರು

    ಗೂಗಲ್‌ ಸರ್ಚ್‌ ಮಾಡುವಾಗ ಬಯಲಾಯ್ತು ಹೆಂಡತಿ ಅಕ್ರಮ ಸಂಬಂಧ! ಬಯಲು ಶೌಚಕ್ಕೆ ಹೋದವನೂ ಸೆರೆಸಿಕ್ಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts