More

    ಈಕೆ ತಿನ್ನೋದೆಲ್ಲ ಪ್ಲಾಸ್ಟರ್, ಹತ್ತಿ! ಅಪಾಯಕಾರಿ ವಸ್ತುಗಳೇ ಪುತ್ರಿಗೆ ಆಹಾರ ಎಂದ ತಾಯಿ

    ವೇಲ್ಸ್: ಮಹಿಳೆಯೊಬ್ಬರು ತನ್ನ ಮೂರು ವರ್ಷದ ಮಗಳ ಅಪರೂಪದ ಸ್ಥಿತಿಯನ್ನು ಕಂಡು ಕಂಗಾಲಾಗಿದ್ದು, ಅನ್ನ, ಆಹಾರಗಳ ಬದಲಿಗೆ ಮನೆಯಲ್ಲಿರುವ ಸೋಫಾ, ಹತ್ತಿ, ಪ್ಲಾಸ್ಟರ್​ ಸೇರಿದಂತೆ ಇತರೆ ವಸ್ತುಗಳನ್ನೇ ಊಟವಾಗಿ ಮಾಡುತ್ತಾಳೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಇದನ್ನೂ ಓದಿ: ಎಚ್ಕೆಇ ನೂತನ ಉಪಾಧ್ಯಕ್ಷ ರಾಜಾ ಭೀಮಳ್ಳಿ ಅವರನ್ನು ಸನ್ಮಾನಿಸಿದ ನ್ಯಾಯವಾದಿ ಬಸವರಾಜ ಬಿರಾದಾರ

    ವೇಲ್ಸ್‌ನ ಬ್ಲ್ಯಾಕ್‌ವುಡ್‌ನಿಂದ ಸ್ಟೇಸಿ ಎ’ಹರ್ನೆ ಎಂಬುವರು ತಮ್ಮ ಮಗಳು ವೈಂಟರ್‌ ಗೋಡೆಗಳ ಮೇಲಿನ ಪ್ಲ್ಯಾಸ್ಟರ್, ಸೋಫಾದ ಫೋಮ್ ಮತ್ತು ಎತ್ತರದ ಕುರ್ಚಿಯ ತುದಿಯಲ್ಲಿರುವ ಅಪಾಯಕಾರಿ ವಸ್ತುಗಳನ್ನು ತಿನ್ನುವುದನ್ನು ರೂಢಿಸಿಕೊಂಡಿದ್ದಾಳೆ. ಇದನ್ನು ಹೇಗೆ ತಡೆಯಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

    ವೈಂಟರ್ ಸ್ವಲೀನತೆಯಿಂದ ಬಳಲುತ್ತಿದ್ದು, ಪಿಕಾ ಎಂಬ ಅಸಾಮಾನ್ಯ ಆಹಾರ ಅಸ್ವಸ್ಥತೆಯಿಂದ ನರಳುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಖಾಯಿಲೆ ವಸ್ತುಗಳನ್ನು ತಿನ್ನುವಂತೆ ಮಾಡುತ್ತದೆ ಹೊರೆತು ಅನ್ನ, ಧಾನ್ಯಗಳನಲ್ಲ. ತಿನ್ನಲು ಸುರಕ್ಷಿತವಲ್ಲದ ವಸ್ತುಗಳಿಗೆ ಕಡುಬಯಕೆಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಜೆಸ್ನಾ ನಾಪತ್ತೆ ಪ್ರಕರಣ: ತನಿಖೆಯ ಗೋಲ್ಡನ್ ಅವರ್‌ನಲ್ಲಿ ಪೊಲೀಸರ ಲೋಪ..ಸಿಬಿಐ ವರದಿಯಲ್ಲಿ ಉಲ್ಲೇಖ!

    “ಅವಳು ಇಡೀ ಮನೆಯನ್ನೇ ತಿನ್ನುತ್ತಿದ್ದಾಳೆ. ನಾನು ಇತ್ತೀಚೆಗಷ್ಟೇ ಹೊಚ್ಚ ಹೊಸ ಸೋಫಾ ಖರೀದಿಸಿದ್ದೆ, ಅವಳು ಅದರಲ್ಲಿ ತುಂಡುಗಳನ್ನು ಹೊರತೆಗೆದು, ಸೇವಿಸುತ್ತಾಳೆ. ಕುಳಿತು ಸ್ಪಾಂಜ್ ತಿನ್ನುತ್ತಾಳೆ. ಸುಮಾರು ಎಂಟು ಫೋಟೋ ಫ್ರೇಮ್‌ಗಳನ್ನು ಒಡೆದು ಗಾಜನ್ನು ತಿನ್ನಲು ಪ್ರಯತ್ನಿಸಿದ್ದಾಳೆ” ಎಂದು ಮಹಿಳೆ ಹೇಳಿದ್ದಾರೆ.

    “ಮಗಳು ತಿನ್ನಬಾರದ ವಸ್ತುಗಳನ್ನು ತಿನ್ನುತ್ತಿದ್ದಾಳೆ. ಅದೃಷ್ಟವಶಾತ್, ನಾನು ಅವಳನ್ನು ಸೂಕ್ಷ್ಮವಾಗಿ ಗಮನಿಸುವುದರಿಂದ ಯಾವ ತೊಂದರೆಗೂ ಸಿಲುಕಿಲ್ಲ. ಈಗ ಅವಳನ್ನು ನೋಡಿಕೊಳ್ಳುವುದೇ ನನ್ನ ಪೂರ್ಣ ಸಮಯದ ಕೆಲಸವಾಗಿಬಿಟ್ಟಿದೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

    ಸೀರಿಯಲ್​ನಲ್ಲಿ ಕುಮಾರಿ ಆಂಟಿ ಮಿಂಚು! ನಿಮ್ಮ ಅದೃಷ್ಟ ಬದಲಾಯಿತು ಎಂದ್ರು ನೆಟ್ಟಿಗರು

    ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts