More

    ಗಿನ್ನೆಸ್ ವಿಶ್ವ ದಾಖಲೆಗೆ ಬಾಲಕಿ ಪ್ರಯತ್ನ

    ಹುಬ್ಬಳ್ಳಿ: 3 ಹುಲಾಹೂಪ್ಸ್ (ರಿಂಗ್) ಶರೀರದ ಮೇಲೆ ತಿರುಗಿಸುತ್ತ ಇನ್​ಲೈನ್ ಸ್ಕೇಟಿಂಗ್​ನಲ್ಲಿ 100 ಮೀ. ದೂರವನ್ನು ಅತ್ಯಂತ ವೇಗವಾಗಿ ಕ್ರಮಿಸುವ ಮೂಲಕ ನಗರದ 10 ವರ್ಷದ ಬಾಲಕಿ ಸ್ತುತಿ ಕುಲಕರ್ಣಿ ಗಿನ್ನೆಸ್ ವಿಶ್ವದಾಖಲೆಗೆ ಪ್ರಯತ್ನ ಮಾಡಿದ್ದಾಳೆ.

    ಶಿರೂರು ಪಾರ್ಕ್ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ 3 ಸುತ್ತುಗಳಲ್ಲಿ ಸ್ಕೇಟಿಂಗ್ ಮಾಡಿದ ಬಾಲಕಿ 23.35 ಸೆಕೆಂಡ್​ನಲ್ಲಿ 100 ಮೀ. ಕ್ರಮಿಸಿದ್ದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಅದನ್ನೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್​ಗೆ ಕಳುಹಿಸುವ ಬಗ್ಗೆ ತೀರ್ವನಿಸಲಾಯಿತು.

    ಈ ಹಿಂದೆ ಆಸ್ಟ್ರೇಲಿಯನ್ ಲೇಡಿ ಮಾರ್ವಾ ಎಂಬುವವರು 27 ಸೆಕೆಂಡ್​ನಲ್ಲಿ 100 ಮೀ. ಸ್ಕೇಟಿಂಗ್ ಮಾಡಿರುವುದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಸ್ತುತಿ ಕುಲಕರ್ಣಿ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ್ದಾಳೆ. ಹಾಗಾಗಿ ಇದು ವಿಶ್ವದಾಖಲೆಯಾಗಲಿದೆ ಎಂದು ಸ್ಕೇಟಿಂಗ್ ತರಬೇತುದಾರ ಅಕ್ಷಯ ಸೂರ್ಯವಂಶಿ ವಿಶ್ವಾಸ ವ್ಯಕ್ತಪಡಿಸಿದರು.

    ನಿತ್ಯ ಒಂದು ತಾಸು ಸ್ಕೇಟಿಂಗ್ ಮಾಡುತ್ತ 2 ವರ್ಷದಿಂದ ಇದಕ್ಕಾಗಿ ಪ್ರಯತ್ನ ಪಟ್ಟಿದ್ದೇನೆ. ಇದೀಗ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಧನೆ ಮಾಡಿರುವುದು ಖುಷಿ ತಂದಿದೆ. ಇನ್ನಷ್ಟು ಸಾಧನೆ ಮಾಡುವ ಆಸೆ ಇದೆ ಎಂದು ಬಾಲಕಿ ಸ್ತುತಿ ತಿಳಿಸಿದಳು.

    ಮಗಳಿಗಾಗಿ ಉತ್ತಮ ಕೋಚ್ ಕೊಡಿಸಿ ಎಲ್ಲ ಪ್ರಯತ್ನ ಮಾಡಿದ್ದೇವೆ. ಇದೀಗ ಗಿನ್ನೆಸ್ ರೆಕಾರ್ಡ್​ಗೆ ಅವಳ ಸಾಧನೆ ಕಳುಹಿಸುತ್ತಿದ್ದೇವೆ. ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ತಂದೆ ಕಿಶೋರ ಹಾಗೂ ತಾಯಿ ರಶ್ಮಿ ತಿಳಿಸಿದರು.

    ಮಳೆಯಿಂದ ತೊಂದರೆ: ಶುಕ್ರವಾರ ಬೆಳಗ್ಗೆ 6.30ಕ್ಕೆ ಹುಬ್ಬಳ್ಳಿಯ ಶಿರೂರ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಬಾಲಕಿಯ ಸ್ಕೇಟಿಂಗ್ ಏರ್ಪಡಿಸಲಾಗಿತ್ತು. ಆಯೋಜಕರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಬೆಳಗ್ಗೆ ಒಂದಿಷ್ಟು ಮಳೆಯಾಗಿದ್ದರಿಂದ ಒಂದೂವರೆ ತಾಸು ವಿಳಂಬವಾಯಿತು. ಮಳೆಯಿಂದಾಗಿ ಸ್ಕಿಡ್ ಆಗಬಾರದು ಎಂದು ರಸ್ತೆ ಒರೆಸಿ ಪುನರಾರಂಭ ಮಾಡಲಾಯಿತು.

    ಟೈಮರ್ ಆಗಿ ಕೆಲಸ ಮಾಡಿದ ಬಸವರಾಜ, ಮಂಜುನಾಥ, ಇತರ ಸಂಘಟಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts