More

    ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಾಲಕಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಮೃತಪಟ್ಟ ದುರ್ಘಟನೆಯಿದು…

    ಬೆತುಲ್​: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 14 ವರ್ಷದ ಬಾಲಕಿಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಮಧ್ಯಪ್ರದೇಶದ ಬೆತುಲ್​ನಲ್ಲಿ ನಡೆದಿದೆ.

    ಈ ಬಾಲಕಿ ಬುಡಕಟ್ಟು ಜನಾಂಗದವಳು. ಸಾಯುವುದಕ್ಕೂ ಮೊದಲು ತನ್ನ ಮೇಲೆ ಅತ್ಯಾಚಾರ ಮಾಡಿದ ಮೂವರ ಹೆಸರನ್ನು ಹೇಳಿದ್ದು, ಅವರೆಲ್ಲರೂ ಕೂಡ ವಿದ್ಯಾರ್ಥಿಗಳು ಎನ್ನಲಾಗಿದೆ.

    ಬೆಂಕಿ ಹಚ್ಚಿಕೊಂಡು ಸುಮಾರು ಶೇ.95ರಷ್ಟು ಸುಟ್ಟುಹೋಗಿದ್ದ ಬಾಲಕಿಯನ್ನು ನಾಗಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಮೃತಪಟ್ಟಿದ್ದಾಳೆ. ಅವಳು ಸೂಸೈಡ್​ ನೋಟ್​ನಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ ಮೂವರ ಹೆಸರನ್ನು ಬರೆದಿಟ್ಟಿದ್ದಳು. ಅವರಲ್ಲಿ ಇಬ್ಬರನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಆ ಮೂವರಲ್ಲಿ ಓರ್ವ ಬಾಲಕಿಗೆ ಪರಿಚಯದವನೇ ಆಗಿದ್ದ. ಸಿಕ್ಕಿಬಿದ್ದಿರುವ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts