More

    ಉತ್ತಮ ಶಿಕ್ಷಣ ಪಡೆದು ಗುರಿ ಸಾಧಿಸಿ

    ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಚಂಚಲತೆ ಬಿಟ್ಟು ಉತ್ತಮ ಶಿಕ್ಷಣದೊಂದಿಗೆ ತಮ್ಮ ಗುರಿ ಸಾಧಿಸಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಕಿವಿಮಾತು ಹೇಳಿದರು.

    ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ವೇದಿಕೆ 2022-2023 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ವಿದ್ಯಾರ್ಥಿನಿಯರು ಮನಸನ್ನು ಶಿಕ್ಷಣದತ್ತ ಕೇಂದ್ರಿಕರಿಸುವ ಮೂಲಕ ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಿ ನಡೆಸಬೇಕು. ಗುರುಗಳ ಸಲಹೆ ಪಡೆದು ತಮ್ಮ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆದು ಕಾಲೇಜು ಮತ್ತು ಪಾಲಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

    ಈ ಕಾಲೇಜಿನಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ಈಗಾಗಲೇ 89 ಕೋಟಿ ರೂ. ಮಂಜೂರು ಆಗಿದೆ. ಆದರೆ ತಾಂತ್ರಿಕ ಕಾರಣದಿಂದ ಅದನ್ನು ಬಳಸಿಕೊಳ್ಳಲು ಆಗಿಲ್ಲ. ಇದನ್ನು ಶೀಘ್ರ ಬಳಕೆಯಾದರೆ ಮೂಲಕ ಕಾಲೇಜು ಅಭಿವೃದ್ಧಿಯಾಗುತ್ತದೆ. ಹಾಸ್ಟೆಲ್ ಅಭಿವೃದ್ಧಿಯ ಬಗ್ಗೆ ಚಿಂತನೆ ಇದೆ. ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ಹಾಗೇ ಕಾಲೇಜು ಬಳಿಗೆ ಸಾರಿಗೆ ಬಸ್ ಬರುವ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗುವುದು ಎಂದು ಮಾಹಿತಿ ನೀಡಿದರು.

    ಚಿತ್ರನಟ ಧನ್‌ವೀರ್‌ಗೌಡ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಗುರಿ ಏನಿದೆಯೋ ಅದರತ್ತ ಗಮನ ಕೊಡಬೇಕು. ತಾವು ಸಾಗುವ ಮಾರ್ಗದಲ್ಲಿ ಯಾವುದೇ ಅಪಮಾನ, ಅಡ್ಡಿ-ಆತಂಕ ಬಂದರೂ ಕುಗ್ಗದೆ ಧೈರ್ಯವಾಗಿ ಸಾಧನೆ ಮಾಡಬೇಕು ಎಂದು ತಿಳಿಸಿದರು.

    ಇದೇ ವೇಳೆ ವಿವಿಧ ವಿಭಾಗ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಎಂ.ಆರ್.ಛಾಯಾ, ಪವಿತ್ರಾ(ಎಂ.ಕಾಂ), ಎನ್.ಎಲ್.ಸಿಂಚನಾ, ಎಚ್.ಎಲ್.ತೇಜಸ್ವಿನಿ(ಎಂಬಿಎ), ಜೆ.ರಕ್ಷಿತಾ, ಜೆ.ಅಲ್ಯೋ ಸೈ, ಸುಶ್ಮಿತಾ ಬಾಲಚಂದ್ರ ಹೆಗಡೆ(ಬಿ.ಕಾಂ), ಲಮಿಯಾ ಹುಡಾ, ಆರ್.ಪಿ.ಪ್ರೀತಿ (ಬಿಬಿಎ) ಮತ್ತು ಎನ್‌ಸಿಸಿ ಬೆಸ್ಟ್ ಕೆಡೆಟ್ ಚಂದ್ರಿಕಾ, ಅಮೃತಾ, ಅಶ್ವಿನಿ, ರಶ್ಮಿ ಅವರಿಗೆ ದತ್ತಿ ಬಹುಮಾನ ನೀಡಲಾಯಿತು. ಅಲ್ಲದೇ, ಕಾಲೇಜಿನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

    ಪ್ರಾಂಶುಪಾಲ ಪ್ರೊ.ಸೋಮಣ್ಣ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಬಿ.ರವಿಶಂಕರ್, ಖಜಾಂಚಿ ಪ್ರೊ.ಎಚ್.ಎಸ್.ಧನಲಕ್ಷ್ಮೀ, ಐಕ್ಯೂಎಸಿ ಸಂಚಾಲಕ ಡಾ.ವಿ.ಮಂಜುನಾಥ್, ವಿದ್ಯಾರ್ಥಿ ವೇದಿಕೆ ಅಧ್ಯಕ್ಷೆ ಎಂ.ಚಂದನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts