More

    ಸಂಘಟಿತರಾಗಿ ರೈತರ ಹಿತ ಕಾಯಲು ಶ್ರಮಿಸಿ

    ಆನವಟ್ಟಿ: ರೈತ ಸಂಘದಿಂದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಬೆಂಬಲಿಸಲು ತೀರ್ಮಾನವಾಗಿಲ್ಲ. ಚುನಾವಣೆ ಘೋಷಣೆ ನಂತರ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ ಕವಡಿ ತಿಳಿಸಿದರು.
    ಸೋಮವಾರ ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕೆ.ಟಿ.ಗಂಗಾಧರ ಬಣದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಮಟ್ಟದ ಪದಾಧಿಕಾರಿಗಳ ನೇಮಕಾತಿ ಸಭೆಯಲ್ಲಿ ಮಾತನಾಡಿದರು.
    ಪ್ರತಿ ಐದು ವರ್ಷಕ್ಕೊಮ್ಮೆ ಜಿಲ್ಲಾ ಹಾಗೂ ತಾಲೂಕು ಸಂಘಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಈ ಬಾರಿ ಆನವಟ್ಟಿಯಲ್ಲಿ ಸೊರಬ ತಾಲೂಕು ಮಟ್ಟದ ಪದಾಧಿಕಾರಿಗಳ ಪ್ರಕ್ರಿಯೆ ನಡೆಸಲಾಯಿತು. ಎಲ್ಲ ಪದಾಧಿಕಾರಿಗಳು ಒಮ್ಮತದಿಂದ ಸಂಘವನ್ನು ಸಂಘಟಿಸಿ ರೈತರ ಹಿತಕಾಯಲು ಬದ್ಧರಾಗಿರುವುದಾಗಿ ಘೋಷಿಸಲಾಯಿತು.

    ವೀರಪ್ಪಗೌಡ್ರು ಕತವಾಯಿ(ತಾಲೂಕು ಸಮಿತಿ ಗೌರವಾಧ್ಯಕ್ಷ), ಚಂದ್ರಶೇಖರ್ ಬಾಪಟ್ ಶಿಂಡ್ಲಿ(ಅಧ್ಯಕ್ಷ), ರಾಜು ಎಸ್.ಅಗಸನಹಳ್ಳಿ(ಹಸಿರು ಸೇನೆ ಅಧ್ಯಕ್ಷ), ಶಾರದಮ್ಮ ಕಾತುವಳ್ಳಿ(ತಾಲೂಕು ಮಹಿಳಾ ಅಧ್ಯಕ್ಷೆ), ದೇವರಾಜ, ಶೇಖರ್ ಗೌಡ, ನಾಗರಾಜ ಗೌಡ, ಸುರೇಶ್ ಗೌಡ, ರಾಮಚಂದ್ರಪ್ಪ(ಉಪಾಧ್ಯಕ್ಷರು), ವಿಕ್ರಮ್ ಪಾಟೀಲ್ ಗೇರುಕೊಪ್ಪ(ಪ್ರಧಾನ ಕಾರ್ಯದರ್ಶಿ), ಪ್ರಕಾಶ್ ತೊರವಂದ(ಖಜಾಂಚಿ), ಲೋಕೇಶ್ ಅಗಸನಹಳ್ಳಿ, ಯೋಗೇಶ್ ಚಿಕ್ಕಸವಿ(ಸಹ ಕಾರ್ಯದರ್ಶಿಗಳು), ಯೋಗೇಶ್ ಚಿಕ್ಕಸವಿ(ಸಂಘಟನಾ ಕಾರ್ಯದರ್ಶಿ), ಚಂದ್ರಪ್ಪ ತೊರವಂದ, ಲೋಕೆಶಪ್ಪ ಅಗಸನಹಳ್ಳಿ, ಚನ್ನಬಸಪ್ಪ, ಪ್ರಭು, ವಿರುಪಾಕ್ಷಪ್ಪ, ಮಾಲತೇಶ ಕವಡಿ (ಸಂಚಾಲಕರು) ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಈರಪ್ಪ ಪ್ಯಾಟಿ, ಯಶವಂತ ರಾವ್ ಘೋರ್ಪಡೆ, ಪಟ್ಟನ ಗೌಡ, ಹಿರಣ್ಣಯ್ಯ ಭದ್ರಾವತಿ, ಕೆ.ಜಿ.ಕೊಟ್ರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts