More

    ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ

    ಪಿರಿಯಾಪಟ್ಟಣ: ನಿವೃತ್ತ ಶಿಕ್ಷಕರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಋಣ ತೀರಿಸಲು ಮುಂದಾಗಬೇಕಿದೆ ಎಂದು ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ ತಿಳಿಸಿದರು.

    ಪಟ್ಟಣದ ಶಿಕ್ಷಕರ ಸಭಾಂಗಣದಲ್ಲಿ ಸೋಮವಾರ ಹಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರಿಗೆ ವಿಶೇಷ ಗೌರವವಿದ್ದು ಅವರು ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕವೂ ಶಿಕ್ಷಕರಾಗಿಯೇ ಇರುತ್ತಾರೆ. ನಿವೃತ್ತಿಯ ನಂತರ ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕು ಎಂಬ ಮನೋಭಾವನೆ ಪ್ರತಿಯೊಬ್ಬ ಶಿಕ್ಷಕರಲ್ಲೂ ಬರಬೇಕು. ಸಾಮಾನ್ಯ ಶಿಕ್ಷಕರು ಸಹ ಉನ್ನತ ಸ್ಥಾನ ಅಲಂಕರಿಸಬಹುದು ಎಂಬುದಕ್ಕೆ ನಾನೇ ಒಂದು ಉದಾಹರಣೆ ಎಂದರು.

    ನಿವೃತ್ತ ಶಿಕ್ಷಕರ ಸಂಘ ರಚನೆ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಈ ಮೂಲಕ ನಿವೃತ್ತ ಶಿಕ್ಷಕರ ಕಲ್ಯಾಣವಾಗಲಿ, ಇದಕ್ಕೆ ನನ್ನ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

    ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಬಿ.ಕೆ.ಬಸವರಾಜು ಮಾತನಾಡಿ, ನಿವೃತ್ತ ಶಿಕ್ಷಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯದ ಸುಧಾರಣೆಯಾಗಲಿದೆ ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಮಾತನಾಡಿ, ಎಲ್ಲ ನಿವೃತ್ತ ಶಿಕ್ಷಕರನ್ನು ಸಂಘದ ಸದಸ್ಯರನ್ನಾಗಿ ಮಾಡಬೇಕು. ನಿವೃತ್ತ ಶಿಕ್ಷಕರ ಕುಂದಕೊರತೆಗಳನ್ನು ನೀಗಿಸಲು ಶಿಕ್ಷಣ ಇಲಾಖೆ ಸದಾ ಸಿದ್ಧವಿದ್ದು, ಯಾವುದೇ ಸಮಸ್ಯೆಗಳು ಬಂದರೂ ಅದನ್ನು ಕೂಡಲೇ ತಿಳಿಸಿದರೆ ಸಮಸ್ಯೆಗೆ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

    ಸನ್ಮಾನ: 80 ವರ್ಷ ಪೂರೈಸಿರುವ ನಿವೃತ್ತ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಬಿ.ಜಿ.ಜಗದೀಶ್ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿವೃತ್ತ ಅಧ್ಯಕ್ಷ ಕೆ.ಪಿ.ಚಂದ್ರಪ್ಪ, ಕಾರ್ಯದರ್ಶಿ ಎಂ.ಎನ್.ಮಲ್ಲಪ್ಪ, ಉಪಾಧ್ಯಕ್ಷ ಎಂ.ರಾಮೇಗೌಡ, ಖಜಾಂಚಿ ಶಿವಸ್ವಾಮಿ, ನಿರ್ದೇಶಕರಾದ ಎಚ್.ಆರ್.ಕುಮಾರಸ್ವಾಮಿ, ಶಿವಪ್ಪ, ಎಂ.ಪಿ.ನಾಗರಾಜು, ಕೃಷ್ಣನಾಯಕ, ಸೋಮಶೇಖರ್, ಸಣ್ಣಸ್ವಾಮಿಗೌಡ, ಅನ್ನಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಎಸ್.ಮಹಾದೇವಪ್ಪ, ಮುಖ್ಯಶಿಕ್ಷಕ ಎಂ.ಮಲ್ಲೇಶ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts