More

    ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆ

    ಅಳವಂಡಿ; ಇಲ್ಲಿನ ಗ್ರಾಮ ಪಂಚಾಯತ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ನೇತೃತ್ವದಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು.

    ಇದನ್ನೂ ಓದಿ: ಪಂಚರಾಜ್ಯ ಚುನಾವಣೆಯಲ್ಲಿ ಸೋಲು; ಇಂಡಿಯಾ ಮೈತ್ರಿಕೂಟ ಸಭೆ ರದ್ದು

    ಪ್ರಭಾರಿ ಪಿಡಿಓ ಕೊಟ್ರಪ್ಪ ಅಂಗಡಿ ಮಾತನಾಡಿ, ಗ್ರಾಮದ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲೆ ವಿಭಾಗಕ್ಕೆ ಅಡುಗೆ ಕೊಠಡಿ, ಶುದ್ಧ ಕುಡಿಯುವ ನೀರು, ಶ್ರೀಮುದಕನಗೌಡ ಗಾಳಿ ಬಾಲಕಿಯರ ಪ್ರೌಢಶಾಲೆಗೆ ಅಡುಗೆ ಕೊಠಡಿ, ಆಟದ ಮೈದಾನ,

    ಸಿಪಿಎಸ್ ಶಾಲೆಯ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ, ಸಿದ್ದೇಶ್ವರ ನಗರದ ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಮನವಿ ನೀಡಿದ್ದಾರೆ. ಗ್ರಾಪಂಗೆ ಪಿಎಮ್‌ಜಿಎಸ್‌ವೈ ಅಡಿ 14 ಮನೆಗಳು ಮಂಜೂರ ಆಗಿವೆ, ಜನತಾ ಕಾಲೋನಿಯಲ್ಲಿ ಪೈಪಲೈನ ಕಾಮಗಾರಿಗೆ ಹಾಗೂ ಡಿ.13 ರಂದು ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಸಲು ಒಪ್ಪಿಗೆ ಸೂಚಿಸಿದರು.

    ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಚಿದಾನಂದ ನಗರದವರೆಗೆ ರಸ್ತೆಯನ್ನು ಅಗಲೀಕರಣ ಮಾಡುವ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ಸದಸ್ಯರೆಲ್ಲರೂ ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರು.

    ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಕಾರ್ಯದರ್ಶಿ ಬಸವರಾಜ, ಸದಸ್ಯರಾದ ಅನ್ವರ ಗಡಾದ, ಗುರುಬಸವರಾಜ ಹಳ್ಳಿಕೇರಿ, ಹನುಮಂತ ಮೋರನಾಳ, ವಿಶ್ವನಾಥ ದೋತರಗಾವಿ, ಹನುಮಂತ ಮೂಲಿಮನಿ, ಗವಿಸಿದ್ದಪ್ಪ, ಶಶಿಕಲಾ ನಾಗರಳ್ಳಿ, ಗೌಸಬೀ ತಟಗಾರ, ರೇಣುಕಾ ರಡ್ಡಿ, ಸುವರ್ಣಾ ಅರಳೆಲೆಮಠ, ನಾಗರಾಜ ನವನಳ್ಳಿ, ಪ್ರಶಾಂತಗೌಡ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts