More

    ದೇಶದಲ್ಲಿ ಅತಿಯಾದ ಲಿಂಗ ತಾರತಮ್ಯ; ಏಷ್ಯಾ-ಪೆಸಿಫಿಕ್ ವಲಯದಲ್ಲಿ ಭಾರತದಲ್ಲೇ ಹೆಚ್ಚು ಪಕ್ಷಪಾತ

    ನವದೆಹಲಿ: ಏಷ್ಯಾ-ಪೆಸಿಫಿಕ್ ವಲಯದ ರಾಷ್ಟ್ರಗಳ ಪೈಕಿ ಭಾರತದಲ್ಲಿ ಕಚೇರಿಗಳ ಸಹಿತ ಕೆಲಸದ ಸ್ಥಳಗಳಲ್ಲಿ ಅತಿ ಹೆಚ್ಚಿನ ಲಿಂಗ ತಾರತಮ್ಯವಿದೆ ಎಂದು ಮಂಗಳವಾರ ಬಿಡುಗಡೆಯಾದ ಲಿಂಕ್ಡ್​ಇನ್ ಸಂಸ್ಥೆಯ ‘ಅವಕಾಶಗಳ ಸೂಚ್ಯಂಕ 2021’ ವರದಿ ಹೇಳಿದೆ. ತಮ್ಮ ಹೆತ್ತವರ ಕಾಲದಲ್ಲಿದ್ದ ಲಿಂಗ ತಾರತಮ್ಯಕ್ಕೆ ಹೋಲಿಸಿದರೆ ಈಗ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆಯಾಗಿದೆ ಎಂಬುದನ್ನು ಶೇಕಡ 66ರಷ್ಟು ಮಹಿಳೆಯರು ಒಪು್ಪತ್ತಾರಾದರೂ ದುಡಿಯುವ ಸ್ಥಳದಲ್ಲಿನ ಪಕ್ಷಪಾತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವೃತ್ತಿಯಲ್ಲಿ ಮುನ್ನಡೆ ಸಾಧಿಸಲು ಹೆಚ್ಚಿನ ಅವಕಾಶಗಳು ಇಲ್ಲದಿರುವುದಕ್ಕೆ ಮಹಿಳೆಯರು ತೀವ್ರ ಅತೃಪ್ತಿ ದಾಖಲಿಸಿದ್ದಾರೆ. ಕಂಪನಿಗಳು ಪುರುಷರ ಬಗ್ಗೆ ಒಲವು ತೋರುವುದೇ ಇದಕ್ಕೆ ಕಾರಣ ಎಂಬುದು ಐವರು ದುಡಿಯುವ ಮಹಿಳೆಯ ಪೈಕಿ ಒಬ್ಬರ ಅಭಿಪ್ರಾಯವಾಗಿದೆ. ಏಷ್ಯಾ-ಪೆಸಿಫಿಕ್ ವಲಯದ ಈ ಪ್ರಮಾಣ ಸರಾಸರಿ ಶೇ. 16 ಆಗಿದೆ. ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ಅವಕಾಶಗಳು ಸಿಗುತ್ತಿವೆ ಎನ್ನುವುದು ಭಾರತದ ದುಡಿಯುವ ಮಹಿಳೆಯರ ಶೇ. 37ರಷ್ಟು ಮಂದಿಯ ಅಭಿಪ್ರಾಯ. ಇದನ್ನು ಶೇ. 25ರಷ್ಟು ಪುರುಷರು ಇದನ್ನು ಒಪು್ಪತ್ತಾರೆ.

    ವೇತನ ತಾರತಮ್ಯ: ಸಮಾನ ವೇತನ ವಿಚಾರದಲ್ಲೂ ತಾರತಮ್ಯ ಕಾಣುತ್ತಿದೆ. ಪುರುಷರಿಗಿಂತ ತಮಗೆ ಕಡಿಮೆ ಸಂಬಳ ದೊರೆಯುತ್ತದೆ ಎನ್ನುವುದು ಶೇ. 37 ಮಹಿಳೆಯರ ಅಭಿಮತ. ಶೇ. 21 ಪುರುಷರಿಗಷ್ಟೆ ಈ ವಿಚಾರದಲ್ಲಿ ಸಹಮತವಿದೆ. ವೇತನ ಹೆಚ್ಚಳ, ಬಡ್ತಿ ಅಥವಾ ಕೆಲಸದ ಆಫರ್ ವಿಚಾರಗಳಲ್ಲಿ ಮಹಿಳೆಯರು ಅವಕಾಶ ವಂಚಿತರು ಎನ್ನುವುದು ಶೇ. 85 ದುಡಿಯುವ ಮಹಿಳೆಯರ ಅಭಿಪ್ರಾಯವಾಗಿದೆ. ಏಷ್ಯಾ-ಪೆಸಿಫಿಕ್ ವಲಯದಲ್ಲಿ ಇದು ಸರಾಸರಿ ಶೇ. 60 ಆಗಿದೆ. ಉದ್ಯೋಗ ಭದ್ರತೆ, ಇಷ್ಟವಾದ ಉದ್ಯೋಗ, ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ- ಇವು ಪುರುಷರು ಮತ್ತು ಮಹಿಳೆಯರು ವೃತ್ತಿ ವಿಚಾರದಲ್ಲಿ ಸಮಾನವಾಗಿ ಬಯಸುವ 3 ಅಂಶಗಳಾಗಿವೆ.

    ಯಾವ್ಯಾವ ದೇಶಗಳು?: ಏಷ್ಯಾ-ಪೆಸಿಫಿಕ್ ವಲಯದ ಆಸ್ಟ್ರೇಲಿಯಾ, ಚೀನಾ, ಭಾರತ, ಜಪಾನ್, ಮಲೇಷ್ಯಾ, ಫಿಲಿಪ್ಪೀನ್ಸ್ ಮತ್ತು ಸಿಂಗಾಪುರದ 10,000ಕ್ಕೂ ಅಧಿಕ ಮಂದಿ ಸಮೀಕ್ಷೆಗೆ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ 2,285 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ 1,223 ಪುರುಷರು ಹಾಗೂ 1,053 ಮಹಿಳೆಯರು. 18ರಿಂದ 65 ವರ್ಷದೊಳಗಿನ ದುಡಿಯುವ ಮಹಿಳೆಯರು ಆನ್​ಲೈನ್ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಲಿಂಕ್ಡ್​ಇನ್ ಜಗತ್ತಿನ ಅತಿ ದೊಡ್ಡ ಆನ್​ಲೈನ್ ವೃತ್ತಿಪರ ನೆಟ್​ವರ್ಕ್ ಆಗಿದೆ. ಜನವರಿ 26ರಿಂದ 31ರ ನಡುವೆ ಈ ಸಂಶೋಧನೆ ನಡೆಸಲು ಅದು ಸ್ವತಂತ್ರ ಮಾರುಕಟ್ಟೆ ಸಂಸ್ಥೆ ‘ಜಿಎಫ್​ಕೆ’ಯನ್ನು ನಿಯೋಜಿಸಿತ್ತು.

    ಅವಳಿಗೆ ಈಗ ತಾನು ಹೆಂಗಸಂತಲೇ ಅನಿಸುತ್ತಿಲ್ಲವಂತೆ!; ಉಲ್ಟಾ ಹೊಡೆಯಿತು ಸೌಂದರ್ಯಚಿಕಿತ್ಸೆ…

    ಇದಿನ್ನೂ ಟ್ರೇಲರ್​​, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ರಿಲೀಸ್​!? ಈ ಭಾಗದ ಸಚಿವರ ಸಿಡಿ ರಿಲೀಸ್​ ಆಗೋ ಸಾಧ್ಯತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts