More

    ತಂದೆ ಹೋದ ಮೇಲೆ ಸೊರಬ ಜನರು ನಮ್ಮ ಕೈಬಿಟ್ಟರಾ ಅನಿಸಿತ್ತು: ಭಾವುಕರಾದ ಗೀತಾ ಶಿವರಾಜಕುಮಾರ್

    ಶಿವಮೊಗ್ಗ: ಸೊರಬ ವಿಧಾನಸಭಾ ಕೇತ್ರದಿಂದ ಸ್ಪರ್ಧಿಸಿ ಗೆದ್ದು ಸಚಿವರಾಗಿಯೂ ಅಧಿಕಾರ ಸ್ವೀಕರಿಸಿರುವ ಮಧು ಬಂಗಾರಪ್ಪ ಕುರಿತು ಸಹೋದರಿ ಗೀತಾ ಶಿವರಾಜಕುಮಾರ್ ಇಂದು ಭಾವುಕರಾಗಿ ಮಾತನಾಡಿದ್ದಾರೆ. ಸಹೋದರನ ಗೆಲುವಿನ ಜತೆಗೆ ತಂದೆಯ ಕಾಲವನ್ನು ಸ್ಮರಿಸಿಕೊಂಡ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

    ಮಧು ಬಂಗಾರಪ್ಪ ಸಚಿವ ಆಗಿದ್ದು ತುಂಬಾ ಸಂತಸ ಆಗಿದೆ. ನನಗಿಂತ ಅಗಲಿದ ತಂದೆ-ತಾಯಿಗೆ ಹೆಚ್ಚು ಖುಷಿ ಆಗಿದೆ. ಚುನಾವಣೆ ಸಮಯದಲ್ಲಿ ಎಲ್ಲರೂ ಸೇರಿ ಪ್ರಚಾರ ಮಾಡಿದ್ದೆವು. ಈಗ ಮಧು ಗೆದ್ದು ಸಚಿವ ಆಗಿದ್ದಾನೆ. ಮಧು ಮತ್ತು ಅವರ ಪತ್ನಿ ಅನಿತಾ ನಮಗೆ ತಂದೆ-ತಾಯಿ ಸ್ಥಾನ ತುಂಬಿದ್ದಾರೆ ಎಂದು ಗೀತಾ ಹೇಳಿದರು.

    ಸೋತ ಮತ್ತು ಗೆದ್ದ ಎರಡೂ ಸಂದರ್ಭದಲ್ಲಿ ಮಧು ಸೊರಬ ಜನರ ಜೊತೆ ಇದ್ದಾನೆ. ಸೋತ ಸಂದರ್ಭದಲ್ಲಿ ಮಧುಗೆ ತುಂಬಾ ದುಃಖ ಆಗಿತ್ತು. ತಂದೆ ಹೋದ ಮೇಲೆ ಸೊರಬ ಜನರು ನಮ್ಮನ್ನು ಕೈಬಿಟ್ಟರಾ ಅನಿಸಿತ್ತು. ಆದರೆ ಜನರು ಈಗ ಮಧು ಕೈ ಹಿಡಿದಿದ್ದಾರೆ. ಇದೇ ಸಮಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ತಂದೆಗೆ ಮಧು ಶಾಸಕ ಸಚಿವ ಆಗಬೇಕೆಂದು ಆಸೆ ಇತ್ತು. ಮಧು ಶಾಸಕ ಆದಾಗ ತಾಯಿ ತುಂಬಾ ಖುಷಿ ಆಗಿದ್ದರು. ಈಗ ಮಧುವನ್ನು ನೋಡಲು ತಂದೆ ತಾಯಿ ಇಲ್ಲ. ಅದಾಗ್ಯೂ ತಂದೆ-ತಾಯಿ ಆಶೀರ್ವಾದ ಮಧು ಮತ್ತು ನಮ್ಮೆಲ್ಲರ ಮೇಲೆ ಇದ್ದೇ ಇರುತ್ತದೆ ಎಂದ ಗೀತಾ, ಸೊರಬ ಕ್ಷೇತ್ರದ ಜನರಿಗೆ ಧನ್ಯವಾದ ತಿಳಿಸಿದರು.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಮಧು ಕ್ಷೇತ್ರದ ಎಲ್ಲ ಕೆಲಸ ಮಾಡುತ್ತಾನೆ‌. ಜನರು ಮಧುವಿನಿಂದ ಎಲ್ಲ ಕೆಲಸ ಮಾಡಿಸಿಕೊಳ್ಳಬೇಕು. ಈ ಸ್ಥಾನಕ್ಕೆ ಬರಲು ಕ್ಷೇತ್ರದ ಜನರೇ ಕಾರಣ. ನಾನು ಇನ್ನು ಮುಂದೆಯೂ ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತೇನೆ. ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದು ಎಲ್ಲವನ್ನೂ ಮುಂದುವರಿಸಿಕೊಂಡು ಹೋಗುತ್ತೇನೆ. ಮಧು ಗೆದ್ದರೆ ಶಿವಣ್ಣ ಸೊರಬಕ್ಕೆ ಬರುವುದಾಗಿ ಹೇಳಿದ್ದರು. ಅವರು ಬರುತ್ತಾರೆ. ಬಂದು ಒಂದು ಸಂಗೀತ ರಾತ್ರಿ ಕಾರ್ಯಕ್ರಮ ಮಾಡುತ್ತಾರೆ ಎಂಬುದನ್ನು ಜನರಿಗೆ ತಿಳಿಸಲು ಅವರು ಹೇಳಿದ್ದಾರೆ ಎಂಬ ಮಾಹಿತಿಯನ್ನೂ ಗೀತಾ ತಿಳಿಸಿದರು.

    ಬೆಂಗಳೂರು ವ್ಯಾಪ್ತಿಯ ಸಂಸದರು-ಶಾಸಕರ ಸಭೆ ಕರೆದ ಡಿಸಿಎಂ: ಯಾವಾಗ ಸಭೆ, ಉದ್ದೇಶವೇನು?

    ಅನ್ನಭಾಗ್ಯ ಯೋಜನೆ: 10 ಕೆ.ಜಿ. ಆಹಾರಧಾನ್ಯ ಉಚಿತವಾಗಿ ವಿತರಿಸಲು ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts