More

    ಕ್ರಿಕೆಟಿಗರ ಕೆಟ್ಟ ಆಟಕ್ಕೆ ಪತ್ನಿಯ ಮೇಲೇಕೆ ಕೋಪ? ಹರ್ಭಜನ್ ಪತ್ನಿ ಗೀತಾ ಬಾಸ್ರಾ ಹೇಳ್ತಾರೆ ಕಾರಣ!

    ನವದೆಹಲಿ: ಕ್ರಿಕೆಟಿಗರು ಉತ್ತಮ ನಿರ್ವಹಣೆ ತೋರಿದಾಗ ಅಭಿಮಾನಿಗಳು ಅವರನ್ನು ಹೊಗಳಿ ಕೊಂಡಾಡುತ್ತಾರೆ. ಅದೇ ಕ್ರಿಕೆಟಿಗರು ಕೆಟ್ಟ ನಿರ್ವಹಣೆ ತೋರಿದಾಗ ಅವರನ್ನು ದೂರುತ್ತಾರೆ. ಜತೆಗೆ ಕೆಲವೊಮ್ಮೆ ಕ್ರಿಕೆಟಿಗರ ಪತ್ನಿ-ಗೆಳತಿಯೂ ಟೀಕೆಗೆ ಗುರಿಯಾಗುತ್ತಾರೆ. ಈ ಹಿಂದೆ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮ ಮತ್ತಿತರರು ಇಂಥ ಟೀಕೆಗಳನ್ನು ಎದುರಿಸಿದ್ದು ಇದೆ. ಹಾಗಾದರೆ ಕ್ರಿಕೆಟಿಗರು ವೈಫಲ್ಯ ಕಂಡಾಗ ಅವರ ಪತ್ನಿಯನ್ನು ದೂರುವುದು ಯಾಕೆ ಎಂಬ ಬಗ್ಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ಹಾಗೂ ಬಾಲಿವುಡ್ ನಟಿ ಗೀತಾ ಬಾಸ್ರಾ ವಿವರಣೆ ನೀಡಿದ್ದಾರೆ.

    ‘ಕ್ರೀಡೆಯ ಕಟ್ಟಾ ಅಭಿಮಾನಿಗಳಾಗಿರುವ ಜನರಿಗೆ ಕೆಲವೊಂದು ನೆಪಗಳು ಬೇಕಾಗಿರುತ್ತವೆ ಅಥವಾ ಯಾರಾದರೂ ಬಲಿಪಶುಗಳು ಬೇಕಾಗುತ್ತಾರೆ. ಆಗ ಅವರಿಗೆ ಪತ್ನಿ ಅಥವಾ ಗೆಳತಿ ಸುಲಭವಾದ ಟಾರ್ಗೆಟ್ ಆಗಿರುತ್ತಾರೆ. ಹೀಗಾಗಿ ಅವರನ್ನೇ ಟಾರ್ಗೆಟ್ ಮಾಡುತ್ತಾರೆ ಮತ್ತು ಎಲ್ಲವೂ ಅವರಿಂದಲೇ ಆಯಿತು ಎನ್ನುತ್ತಾರೆ. ಅವರನ್ನೇ ಕೆಟ್ಟ ಶಕುನ ಎನ್ನುತ್ತಾರೆ. ಆದರೆ ಯಾರಾದರೂ ಆಟಗಾರರು ಉತ್ತಮ ನಿರ್ವಹಣೆ ತೋರಿದಾಗ ಅವರು ಇಂಥದ್ದನ್ನೇ ಹೇಳುವುದಿಲ್ಲ’ ಎಂದು ಗೀತಾ ಬಾಸ್ರಾ ವಿವರಿಸಿದ್ದಾರೆ.

    ‘ಧನಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಅಂಶಗಳು ಬೇಗನೆ ಸೆಳೆಯುತ್ತವೆ. ನಕಾರಾತ್ಮಕ ವಲಯಕ್ಕೆ ಹೋಗಿ ಯಾರಿಗಾದರೂ ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಹೀಗಾಗಿ ಆಕೆಯಿಂದಲೇ ಎಲ್ಲವೂ ಆಯಿತು, ಆ ಕೆಟ್ಟ ನಿರ್ವಹಣೆ ಬಂತು ಎನ್ನುತ್ತಾರೆ. ಆದರೆ ಪತ್ನಿ ತಂಡದ ಭಾಗವಾಗಿರುವುದಿಲ್ಲ, ಅವರು ಆಡಲು ಮೈದಾನಕ್ಕಿಳಿಯುವುದಿಲ್ಲ ಎಂಬುದನ್ನು ಮರೆತು ಬಿಡುತ್ತಾರೆ’ ಎಂದು ಗೀತಾ ಬಾಸ್ರಾ ಹೇಳಿದ್ದಾರೆ.

    ಹರ್ಭಜನ್ ಕೆಟ್ಟ ನಿರ್ವಹಣೆ ತೋರಿದಾಗಲೂ ಜನರು ನನ್ನನ್ನು ದೂರಿದ್ದು ಇದೆ. ಆದರೆ ಅಂಥ ಟೀಕೆಗಳಿಗೆ ನಾನೆಂದೂ ತಲೆಕೆಡಿಸಿಕೊಂಡಿಲ್ಲ. ಇವೆಲ್ಲವೂ ನಕಾರಾತ್ಮಕ ಅಂಶಗಳ ಭಾಗ. ಅವು ನನ್ನನ್ನು ಬಾಧಿಸುವುದಿಲ್ಲ. ನಾನು ಆಟವನ್ನು ಆನಂದಿಸುತ್ತೇನೆ ಮತ್ತು ನನ್ನ ಪತಿಯನ್ನು ಬೆಂಬಲಿಸುತ್ತೆನೆ ಎಂದು ಗೀತಾ ಬಾಸ್ರಾ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts