More

    ಜಮ್ಮು-ಕಾಶ್ಮೀರ ಲೆಫ್ಟಿನೆಂಟ್​ ಗವರ್ನರ್​ ಗಿರೀಶ್​ ಚಂದ್ರ ಮುರ್ಮು ರಾಜೀನಾಮೆ ಕೊಟ್ಟಿದ್ದೇಕೆ?

    ಜಮ್ಮು-ಕಾಶ್ಮೀರದ ಆರ್ಟಿಕಲ್​ 370ನ್ನು ರದ್ದುಗೊಳಿಸಿ ಇಂದಿಗೆ ಒಂದು ವರ್ಷ ಆಗಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್​ ಗವರ್ನರ್​ ಗಿರೀಶ್​ ಚಂದ್ರ ಮುರ್ಮು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

    ನ್ಯಾಷನಲ್​ ಕಾನ್ಫರೆನ್ಸ್ ನಾಯಕ ಒಮರ್​ ಅಬ್ದುಲ್ಲಾ ಅವರೂ ಸಹ ಟ್ವೀಟ್ ಮಾಡಿದ್ದು, ಜಮ್ಮುಕಾಶ್ಮೀರದಾದ್ಯಂತ ವಾಟ್ಸ್​ಆ್ಯಪ್​ ಫೇಸ್​ಬುಕ್​ಗಳಲ್ಲಿ ಮುರ್ಮು ಅವರ ರಾಜೀನಾಮೆ ಬಗ್ಗೆಯೇ ಸುದ್ದಿ ಹರಿದಾಡುತ್ತಿದೆ. ಅಧಿಕೃತವಾಗಿ ಎಲ್ಲಿಯೂ ಹೊರಬಿದ್ದಿಲ್ಲ. ಆದರೆ ವಾಸ್ತವ ಏನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೆಚ್ಚುತ್ತಿದೆ ಕರೊನಾದಿಂದ ಮುಕ್ತರಾಗಿ ಡಿಸ್​ಚಾರ್ಜ್​ ಆಗುತ್ತಿರುವವರ ಸಂಖ್ಯೆ: ಇಂದು 100 ಸೋಂಕಿತರು ಸಾವು

    ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಆಗಸ್ಟ್​ 5ರ 2019ರಂದು ರದ್ದುಗೊಳಿಸಿದ ಬಳಿಕ ಆಕ್ಟೋಬರ್​​ನಲ್ಲಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಂಗಡಿಸಲಾಗಿತ್ತು. ಅಂದಿನ ಗವರ್ನರ್​ ಸತ್ಯಪಾಲ್​ ಮಲ್ಲಿಕ್​ ಅವರು ಮುರ್ಮು ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ಅಧಿಕಾರಕ್ಕೆ ಏರಿ 9 ತಿಂಗಳಲ್ಲಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಜಿ.ಸಿ.ಮುರ್ಮು ಅವರು ರಾಜೀನಾಮೆ ನೀಡಿರಲು ಕಾರಣ ಅವರು ಭಾರತದ ಮುಂದಿನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕಗೊಳ್ಳಲಿದ್ದಾರೆ. ಈ ಹಿಂದಿನ ಸಿಎಜಿ ಆಗಿರುವ ರಾಜೀವ್​ ಮಹರ್ಷಿ ಅವರು ಕಳೆದ ವಾರ ನಿವೃತ್ತರಾಗಿದ್ದು, ಅವರ ಜಾಗಕ್ಕೆ ಮುರ್ಮು ನೇಮಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ‘ಪ್ರಧಾನಿ ಮೋದಿಯವರ ಇಚ್ಛಾಶಕ್ತಿ…ಶ್ರೀರಾಮನ ಆಶೀರ್ವಾದವೇ ಮಂದಿರ ನಿರ್ಮಾಣಕ್ಕೆ ಕಾರಣ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts