More

    ಕಾರ್ಖಾನೆಯಿಂದ ಅನಿಲ ಸೋರಿಕೆ : ಸ್ಥಳೀಯರಲ್ಲಿ ಕವಿದ ಆತಂಕ

    ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ನಿನ್ನೆ ರಾತ್ರಿ ರಾಸಾಯನಿಕ ಕಾರ್ಖಾನೆಯಿಂದ ಗ್ಯಾಸ್​ ಲೀಕ್​ ಆದ ಪ್ರಸಂಗ ವರದಿಯಾಗಿದೆ. ಸ್ವಲ್ಪ ಸಮಯದವರೆಗೆ ಉಸಿರಾಡಲು ತೊಂದರೆ ಉಂಟಾಗಿ ಆತಂಕದ ವಾತಾವರಣ ಕವಿದಿತ್ತು. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ ಎನ್ನಲಾಗಿದೆ.

    “ಜೂನ್ 3 ರಂದು ರಾತ್ರಿ 10.22 ಕ್ಕೆ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆ ಕಂಡುಬಂತು. ಸಲ್ಫ್ಯೂರಿಕ್ ಆ್ಯಸಿಡ್ ಮತ್ತು ಬೆಂಜೈಲ್ ಆ್ಯಸಿಡ್ ಅತಿಯಾಗಿ ಬಿಸಿಯಾಗುವುದರಿಂದ ಉಂಟಾದ ರಾಸಾಯನಿಕ ಕ್ರಿಯೆಯು ಘಟನೆಗೆ ಕಾರಣವಾಯಿತು. 11.24 ರ ವೇಳೆಗೆ ಅಗ್ನಿ ಶಾಮಕ ದಳದವರು ಸೋರಿಕೆಯನ್ನು ನಿಲ್ಲಿಸಿದ್ದು, ತಕ್ಷಣ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು” ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಂತೋಷ್ ಕದಮ್ ಹೇಳಿದ್ದಾರೆ.

    ಅನಿಲ ಸೋರಿಕೆಯಿಂದಾಗಿ ಗಾಳಿಯಲ್ಲಿ ಹೊಗೆ ತುಂಬಿದ ಚಿತ್ರಣವನ್ನು ಎಎನ್‌ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕಾಣಬಹುದು. ಕಾರ್ಖಾನೆಯ ಸುತ್ತಲ 3 ಕಿಲೋಮೀಟರ್​ ಪ್ರದೇಶದ ನಿವಾಸಿಗಳು ಉಸಿರಾಟದಲ್ಲಿ ಕೊಂಚ ಸಮಸ್ಯೆಗೆ ಒಳಗಾಗಿದ್ದರು. ಕೆಲ ಸಮಯ ಕಣ್ಣು ಉರಿ ಕೂಡ ಅನುಭವಿಸಿದರು ಎನ್ನಲಾಗಿದೆ. (ಏಜೆನ್ಸೀಸ್)

    ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಎಲ್ಲರೂ ಪಾಸ್, ಯಾರೂ ಫೇಲ್​ ಇಲ್ಲ !

    ವುಹಾನ್ ಲ್ಯಾಬಿಂದ ವೈರಸ್​ ಲೀಕಾಗಿತ್ತೆಂದು ನಾನು ಸರಿಯಾಗೇ ಹೇಳಿದ್ದೆ : ಟ್ರಂಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts