More

    ದಿಢೀರ್ ದರ ಕುಸಿತ: ರಾಣೆಬೆನ್ನೂರು ಎಪಿಎಂಸಿಯಲ್ಲಿ ರಸ್ತೆ ಮೇಲೆ ಬೆಳ್ಳುಳ್ಳಿ ಸುರಿದು ಪ್ರತಿಭಟಿಸಿದ ರೈತರು

    ಹಾವೇರಿ: ಖರೀದಿ ದರದಲ್ಲಿ ದಿಢೀರ್ ಆಗಿ 2,000 ರೂಪಾಯಿ ಕುಸಿದ ಕಾರಣ ರಾಣೆಬೆನ್ನೂರು ಎಪಿಎಂಸಿಯಲ್ಲಿ ರೈತರು ಬೆಳ್ಳುಳ್ಳಿಯನ್ನು ರಸ್ತೆ ಮೇಲೆ ಸುರಿದು ಪ್ರತಿಭಟನೆ ನಡೆಸಿದರು.

    ಜಿಲ್ಲೆಯ ರಾಣೆಬೆನ್ನೂರಿನ ಎಪಿಎಂಸಿಯಲ್ಲಿ ಕಳೆದವಾರ ಕ್ವಿಂಟಾಲ್​ಗೆ 12,000 ರೂಪಾಯಿ ದರದಲ್ಲಿ ರೈತರಿಂದ ವರ್ತಕರು ಬೆಳ್ಳುಳ್ಳಿ ಖರೀದಿಸಿದ್ದರು. ಆದರೆ, ಭಾನುವಾರ ದಿಢೀರ್ ಆಗಿ ಕ್ವಿಂಟಾಲ್ ಮೇಲಿನ ಖರೀದಿ ದರ 2,000 ರೂಪಾಯಿ ಕುಸಿದ ಕಾರಣ ರೈತರು ಆಘಾತಕ್ಕೆ ಒಳಗಾದರು. ಅಲ್ಲದೆ, ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದರು. ಹತಾಶರಾಗಿ ಎಪಿಎಂಸಿ ಮಾರುಕಟ್ಟೆಯಲ್ಲೇ ಕೆಲವರು ಬೆಳ್ಳುಳ್ಳಿ ಸುರಿದರೆ, ಇನ್ನು ಕೆಲವರು ರಸ್ತೆ ಮೇಲೆ ಬೆಳ್ಳುಳ್ಳಿ ಸುರಿದು ಪ್ರತಿಭಟನೆ ವ್ಯಕ್ತಪಡಿಸಿದರು.

    ರೈತರು ಆಘಾತಕ್ಕೆ ಒಳಗಾಗಿ ನಡೆಸಿದ ಈ ಪ್ರತಿಭಟನೆಯ ಸಂದರ್ಭದಲ್ಲಿ ರೈತ ಸುರೇಶ್ ನಂದಿ ಹಳ್ಳಿ ಎಂಬುವವರ ತಾಯಿ ಅಸ್ವಸ್ಥರಾಗಿ ಬಿದ್ದರು. ಕೂಡಲೇ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯನ್ನೂ ಕೊಡಿಸಿದ್ದಾರೆ. ಈ ನಡುವೆ, ಸೂಕ್ತದರವನ್ನು ಕೊಡುವಂತೆ ವರ್ತಕರ ಜತೆಗೆ ಕೃಷಿಕರು ವಾಕ್ಸಮರ ನಡೆಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ರಾಣೆಬೆನ್ನೂರು ನಗರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ರೈತರ ಜತೆಗೆ ಮಾತುಕತೆ ನಡೆಸಿ, ಸೌಹಾರ್ದಯುತವಾಗಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts