More

  ಬೇಡಿಕೆ ಈಡೇರಿಸುವವರೆಗೂ ಧರಣಿ ಕೈಬಿಡಲ್ಲ; ಹೊಟ್ಟಿಗೌಡ್ರ

  ರಾಣೆಬೆನ್ನೂರ: ಎಪಿಎಂಸಿ ಮೇಗಾ ಮಾರುಕಟ್ಟೆಯ ನಿವೇಶನ ಹಂಚಿಕೆ ಕುರಿತು ವರ್ತಕರು ಇಟ್ಟಿರುವ ಬೇಡಿಕೆಗಳಲ್ಲಿ ಕೆಲವೊಂದನ್ನು ಈಡೇರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ, ನಮ್ಮ ಪ್ರಮುಖ ಬೇಡಿಕೆ ಈಡೇರಿಸುವವರೆಗೂ ಧರಣಿ ಮುಂದುವರಿಸಲಾಗುವುದು ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ತಿಳಿಸಿದರು.
  ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶದ ಮೇರೆಗೆ ಹೆಚ್ಚುವರಿ ಭೂ ಪರಿಹಾರವನ್ನು ವರ್ತಕರೇ ನೀಡಬೇಕೆಂಬ ಬೇಡಿಕೆಯನ್ನು ತೆಗೆಯಲಾಗಿದೆ. ದಂದ್ವ ರೀತಿಯ ಕಾನೂನು ರೂಪಿಸಲಾಗುತ್ತಿದೆ. ಎಪಿಎಂಸಿಗೆ ಭೂಮಿಯನ್ನು ಯಾತಕ್ಕಾಗಿ ಖರೀದಿ ಮಾಡಿದ್ದೀರಿ. ಸ್ಥಳೀಯ ವರ್ತಕರು ನೀಡಿದ ಸೆಸ್ ಹಣದಿಂದಲೇ ಭೂಮಿ ಖರೀದಿ ಮಾಡಲಾಗಿದೆ. ಪರಸ್ಥಳ ವರ್ತಕರಿಗೆ ನಿವೇಶನ ನೀಡುವುದಕ್ಕೆ ನಮ್ಮ ಸಮ್ಮತಿಯಿಲ್ಲ. ಸ್ಥಳೀಯರಿಗೆ ಕೊಟ್ಟು ಉಳಿದರೆ ಮಾತ್ರ ಬೇರೆಯವರಿಗೆ ನಿವೇಶನ ಹಂಚಿಕೆ ಮಾಡಬೇಕು. ಈ ಎಲ್ಲ ವರ್ತಕರ ಬೇಡಿಕೆಗಳಿಗೆ ಒಪ್ಪಿದರೆ ಮಾತ್ರ ಧರಣಿ ಹಿಂತೆಗೆದುಕೊಳ್ಳಲಾಗುವುದು. ಇಲ್ಲವಾದರೆ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸಲಾಗುವುದು ಎಂದರು.
  ಪ್ರಮುಖರಾದ ವಿ.ಪಿ. ಲಿಂಗನಗೌಡ್ರ, ಗುರುಪ್ರಕಾಶ ಜಂಬಗಿ, ವೀರೇಶ ಮೊಟಗಿ, ಎಸ್.ಕೆ. ಉಪ್ಪಿನ, ನಾಗರಾಜ ಮೊಟಗಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts