More

    ನವೆಂಬರ್‌ ಅಂತ್ಯದವರೆಗೂ ಉಚಿತ ಪಡಿತರ- ಸಚಿವ ಸಂಪುಟ ಅನುಮೋದನೆ

    ನವದೆಹಲಿ: ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯನ್ನು ನವೆಂಬರ್‌ ಅಂತ್ಯದವರೆಗೆ ವಿಸ್ತರಣೆ ಮಾಡಲು ಇಂದು ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
    ಕಳೆದ ಏಪ್ರಿಲ್‌ನಲ್ಲಿ ಶುರುವಾಗಿರುವ ಈ ಯೋಜನೆಯನ್ನು ಸತತ ಎಂಟು ತಿಂಗಳು ಮುಂದುವರೆಸುವುದಾಗಿ ಕಳೆದ ತಿಂಗಳು ಪ್ರಧಾನಿ ಘೋಷಿಸಿದ್ದರು. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ.

    ಈ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಟ್ವೀಟ್‌ ಮೂಲಕ ಖಚಿತಪಡಿಸಿದ್ದಾರೆ.

    ಗರೀಬ್‌ ಕಲ್ಯಾಣ್ ಅನ್ನ ಯೋಜನೆಯಿಂದ ದೇಶದ 81.9 ಕೋಟಿ ಜನತೆ ಇದಾಗಲೇ ಈ ಯೋಜನೆ ಅಡಿ ಉಚಿತವಾಗಿ 5 ಕೆ.ಜಿ. ಪಡಿತರ ಪಡೆಯುತ್ತಿದ್ದಾರೆ. ಇದು ಮುಂದುವರೆಯಲಿದೆ ಎಂದು ಸಚಿವೆ ಹೇಳಿದ್ದಾರೆ. ಇದು ಅಕ್ಕಿ ಹಾಗೂ ಕೆಲವು ಬೇಳೆಕಾಳುಗಳನ್ನು ಒಳಗೊಂಡಿದೆ.

    ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅನೇಕ ಮಂದಿ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಯಾವುದೇ ಮನೆಯಲ್ಲಿ ಯಾವುದೇ ಸದಸ್ಯ ಹಸಿವಿನಿಂದ ಇರುವಂತೆ ಆಗಬಾರದು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಒಂದು ರಾಷ್ಟ್ರ ಒಂದು ರೇಷನ್‌ ಕಾರ್ಡ್‌ ಮಾದರಿಯಂತೆ, ದೇಶದ ಯಾವುದೇ ರಾಜ್ಯದಲ್ಲಿರುವ ವಲಸಿಗರಿಗೆ, ಆತನಿರುವ ರಾಜ್ಯದಲ್ಲೇ ಪಡಿತರ ನೀಡಲಾಗುವುದು ಎಂದು ಪ್ರಧಾನಿ ಕಳೆದ ತಿಂಗಳು ಹೇಳಿದ್ದರು.

    ಲಾಕ್‌ಡೌನ್‌ ಪರಿಣಾಮವಾಗ ಸ್ವಂತ ಊರುಗಳಿಗೆ ಹಿಂದಿರುಗಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಲೆಂದೇ ಪ್ರಧಾನಿ ನರೇಂದ್ರ ಮೋದಿ 50 ಸಾವಿರ ಕೋಟಿ ರೂಪಾಯಿ ಮೊತ್ತದ ‘ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್ (ಜಿಕೆಆರ್‌ಎ)’ ಉದ್ಯೋಗ ಯೋಜನೆಗೆ ಚಾಲನೆ ನೀಡಿದ್ದರು. ಅದಕ್ಕೆ ನಂತರ ‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್ ಅನ್ನ ಯೋಜನೆ’ ಎಂದು ನಾಮಕರಣ ಮಾಡಲಾಗಿದೆ.

    ಆಂಬ್ಯುಲೆನ್ಸ್‌ನಲ್ಲಿ ಶಾಸಕಿಯ ಚೆಲ್ಲಾಟ- ರೋಗಿಗಳಿಗೆ ಪ್ರಾಣ ಸಂಕಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts