More

    ಅನಗತ್ಯವಾಗಿ ತಿರುಗಾಡಿದವನಿಗೆ ಕಸ ಹೆಕ್ಕುವ ಶಿಕ್ಷೆ; ರಸ್ತೆ ಬದಿಯ ಕಸ ಹೆಕ್ಕಿ ತನ್ನದೇ ವಾಹನದಲ್ಲಿ ಡಂಪಿಂಗ್ ಯಾರ್ಡ್​ಗೆ ಸಾಗಿಸಿದ ಚಾಲಕ

    ಉಡುಪಿ: ಲಾಕ್​ಡೌನ್​ ಇದ್ದರೂ ಅನಗತ್ಯವಾಗಿ ಗೂಡ್ಸ್​ ವಾಹನದೊಂದಿಗೆ ರಸ್ತೆಗಿಳಿದ ಚಾಲಕನೊಬ್ಬ ಬೀದಿಬದಿಯ ಕಸ ಹೆಕ್ಕಿ ತನ್ನದೇ ವಾಹನದಲ್ಲಿ ಡಂಪಿಂಗ್ ಯಾರ್ಡ್​ಗೆ ಸಾಗಿಸುವ ಶಿಕ್ಷೆ ಎದುರಿಸಿದ್ದಾನೆ. ಉಡುಪಿಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಈ ಶಿಕ್ಷೆ ವಿಧಿಸಿದ್ದಾರೆ.

    ಗೂಡ್ಸ್​ ವಾಹನ ಚಾಲಕನೊಬ್ಬ ಉಡುಪಿಯ ನಿಟ್ಟೂರು ಪ್ರದೇಶದಲ್ಲಿ ಅನಗತ್ಯವಾಗಿ ಓಡಾಟ ನಡೆಸುವಾಗ ಅಪರ ಜಿಲ್ಲಾಧಿಕಾರಿಯವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ತರಾಟೆಗೆ ತೆಗೆದುಕೊಂಡ ಅಪರ ಜಿಲ್ಲಾಧಿಕಾರಿ ದಂಡ ಕಟ್ಟುವ ಅಥವಾ ಕಸ ಹೆಕ್ಕುವ ಆಯ್ಕೆ ಕೊಟ್ಟಿದ್ದಾರೆ. ಆದರೆ ದಂಡದ ಬದಲು ಕಸ ಹೆಕ್ಕುವುದಾಗಿ ವ್ಯಕ್ತಿ ಹೇಳಿಕೊಂಡಿದ್ದಾನೆ.

    ಬಳಿಕ ಅಲ್ಲಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಕಸವನ್ನು ಹೆಕ್ಕಿಸಲಾಯಿತು. ನಂತರ ಆ ಕಸವನ್ನು ಆತನದೇ ಗೂಡ್ಸ್​ ವಾಹನದಲ್ಲಿ ಡಂಪಿಂಗ್ ಯಾರ್ಡ್​ಗೆ ಕಳುಹಿಸಿಕೊಡಲಾಯಿತು. ಹೀಗೆ ವ್ಯಕ್ತಿಯೊಬ್ಬ ಅನಗತ್ಯವಾಗಿ ಹೊರಗಡೆ ಓಡಾಡಿದ್ದಕ್ಕೆ ತಕ್ಕಶಾಸ್ತಿ ಅನುಭವಿಸಿದಂತಾಗಿದೆ.

    ಅನಗತ್ಯವಾಗಿ ತಿರುಗಾಡಿದವನಿಗೆ ಕಸ ಹೆಕ್ಕುವ ಶಿಕ್ಷೆ; ರಸ್ತೆ ಬದಿಯ ಕಸ ಹೆಕ್ಕಿ ತನ್ನದೇ ವಾಹನದಲ್ಲಿ ಡಂಪಿಂಗ್ ಯಾರ್ಡ್​ಗೆ ಸಾಗಿಸಿದ ಚಾಲಕ
    ಕಸ ತುಂಬಿದ ಗೂಡ್ಸ್​ ವಾಹನ

    ಅಪ್ಪನ ಹೆಣ ಬೇಡ, ಅವರ ಹಣ ಬೇಕು; ಅನಾಥ ಶವ ಎಂದರೂ ಸರಿ ಎಂದ, 6 ಲಕ್ಷ ಇದೆ ಎಂದಾಗ 5 ನಿಮಿಷ ಎಂದು ಹೇಳಿದ ಮಗ!

    ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts