More

    ಭಟ್ಟರ ‘ಗರಡಿ’ಯಲ್ಲಿ ಕಸರತ್ತು ಮುಕ್ತಾಯ; ಮಾರ್ಚ್​ನಲ್ಲಿ ಬಿಡುಗಡೆ ಸಾಧ್ಯತೆ

    ಬೆಂಗಳೂರು: ಸುಮಾರು 10 ತಿಂಗಳ ಹಿಂದೆ ಜಿ.ವಿ.ಅಯ್ಯರ್ ಅವರ ಸ್ಟುಡಿಯೋದಲ್ಲಿ ಸೆಟ್​ ಹಾಕಿ ‘ಗರಡಿ’ ಚಿತ್ರದ ಚಿತ್ರೀಕರಣ ಮಾಡಿದ್ದರು ಯೋಗರಾಜ್​ ಭಟ್​. ಈಗ ಅದೇ ಜಾಗದಲ್ಲಿ ಚಿತ್ರೀಕರಣ ಮುಕ್ತಾಯವಾಗಿದ್ದು, ಕುಂಬಳಕಾಯಿ ಒಡೆಯಲಾಗಿದೆ.

    ಇದನ್ನೂ ಓದಿ: ಐಎಂಡಿಬಿ 2023ರ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಒಂದೇ ಚಿತ್ರ … ಯಾವುದದು?

    ಸುಮಾರು ಎಪ್ಪತ್ತು ದಿನಗಳ ಚಿತ್ರೀಕರಣದ ನಂತರ ಈಗ ‘ಗರಡಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಮಾತು ಶುರು ಮಾಡುವ ಯೋಗರಾಜ್ ಭಟ್​, “ಗರಡಿ’ ಹಳೇ ಮೈಸೂರು ಭಾಗದಲ್ಲಿ ನಡೆಯುವ ಕಥೆ. ದೇಸಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಈ ವಿಭಿನ್ನ ಯಶಸ್ ಸೂರ್ಯ, ಸೋನಾಲ್ ‍ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು’ ಎಂದು ಮಾಹಿತಿ ಕೊಡುತ್ತಾರೆ.

    ‘ಗರಡಿ’ ಚಿತ್ರದ ಆಡಿಯೋ ಹಕ್ಕುಗಳು ಸರಿಗಮಪ ಸಂಸ್ಥೆಗೆ ಮಾರಾಟವಾಗಿದೆಯಂತೆ. ‘ಡಬ್ಬಿಂಗ್, ರಿಮೇಕ್ ರೈಟ್ಸ್​ಗೂ ಸಾಕಷ್ಟು ಬೇಡಿಕೆ ಇದೆ. ನಮ್ಮ ಸಂಸ್ಥೆಯ ನಿರ್ಮಾಣದ ಹದಿನಾರನೇ ಚಿತ್ರ ಇದು. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ ನಿರ್ಮಾಪಕ ಮತ್ತು ಸಚಿವ ಬಿ.ಸಿ. ಪಾಟೀಲ್​.

    ನಾಯಕ ಯಶಸ್​ ಸೂರ್ಯ ಚಿತ್ರದಲ್ಲಿ ಪೈಲ್ವಾನ್​ ಆಗಿ ಕಾಣಿಸಿಕೊಂಡಿದ್ದಾರಂತೆ. ‘ನಾನು ಪೈಲ್ವಾನ್ ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಅನುಭವಿ ಕಲಾವಿದರೊಂದಿಗೆ ‌ನಟಿಸಿರುವ ಖುಷಿಯಿದೆ’ ಎನ್ನುತ್ತಾರೆ ಯಶಸ್ ಸೂರ್ಯ.

    ಇದನ್ನೂ ಓದಿ: 100 ಜನ ಅಭಿಮಾನಿಗಳನ್ನು ಮನಾಲಿಗೆ ಕಳಿಸಲಿರುವ ವಿಜಯ್​ ದೇವರಕೊಂಡ..!

    ‘ಗರಡಿ’ ಚಿತ್ರದ ವಿಶೇಷವೆಂದರೆ, ಸಚಿವ ಎಸ್​.ಟಿ. ಸೋಮಶೇಖರ್​ ಚಿತ್ರದಲ್ಲೊಂದು ಪ್ರಮುಖ ಕಂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ನಾಯಕನ ತಂದೆ ಪಾತ್ರದಲ್ಲಿ ನಟಿಸಿದ್ದಾರೆ.

    ಅತಿಥಿಯಾಗಿ ಬಂದು ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಲಿದ್ದಾರೆ ರಮೇಶ್​ ಅರವಿಂದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts