More

    ಅತಿಥಿಯಾಗಿ ಬಂದು ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಲಿದ್ದಾರೆ ರಮೇಶ್​ ಅರವಿಂದ್​

    ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಪಾರ್ಟಿ ಹಾಡುಗಳನ್ನು ಬಿಡುಗಡೆ ಮಾಡುವುದು ವಿಶೇಷವೇನಲ್ಲ. ಈಗ ಸಂಕ್ರಾಂತಿ ಸಂಭ್ರಮಕ್ಕೆ ಒಂದು ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ. ಒಂದಿಷ್ಟು ಸಂಗೀತಪ್ರಿಯರು ಸೇರಿ ಈ ಹಾಡನ್ನು ರೂಪಿಸಿದ್ದಾರೆ.

    ಇದನ್ನೂ ಓದಿ: ಐಎಂಡಿಬಿ 2023ರ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಒಂದೇ ಚಿತ್ರ … ಯಾವುದದು?

    ಅತಿಥಿಯಾಗಿ ಬಂದು ಸಂಕ್ರಾಂತಿ ಸಂಭ್ರಮವನ್ನು ಹೆಚ್ಚಿಸಲಿದ್ದಾರೆ ರಮೇಶ್​ ಅರವಿಂದ್​ಸಂಕ್ರಾಂತಿ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಾದ ಈ ಹಾಡೇ ‘ಸಂಕ್ರಾಂತಿ ತಕಥೈ’. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಹರ್ಷಿಕಾ ಪೂಣಚ್ಚ, ರಾಧಿಕಾ ನಾರಾಯಣ್, ಪೃಥ್ವಿ ಅಂಬರ್ ಹಾಗೂ ತೆಲುಗಿನ ಮಾನಸ್ ನಗುಲಪಲ್ಲಿ, ಕೀರ್ತಿ ಭಟ್, ನಿಖಿಲ್ ಮಲಿಯಕ್ಕಳ್ ಹೆಜ್ಜೆ ಹಾಕಿದ್ದಾರೆ. ರಮೇಶ್ ಅರವಿಂದ್ ಅತಿಥಿಯಾಗಿ ಕಾಣಿಸಿಕೊಂಡಿರುವ ಈ ಹಾಡು, ಈಗಾಗಲೇ ಯೂಟ್ಯೂಬ್​ ರೆಡ್ ಸೀಡರ್ ಎಂಟಟೈನ್ಮೆಂಟ್ ಚಾನೆಲ್​ನಲ್ಲಿ ಹಾಡು ಬಿಡುಗಡೆಯಾಗಿದೆ.

    ಇದನ್ನೂ ಓದಿ: ‘ಜೈಲರ್​’ ಚಿತ್ರದಲ್ಲಿ ಹೀಗೆ ಕಾಣ್ತಾರೆ ಮೋಹನ್​ ಲಾಲ್​; ಪಾತ್ರ ಮಾತ್ರ ನಿಗೂಢ …

    ತೆಲುಗಿನ ಹಿರಿಯ ನೃತ್ಯ ನಿರ್ದೇಶಕಿ ಆನಿ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ‘ಸಂಕ್ರಾಂತಿ ತಕಥೈ’ ಹಾಡು ಮೂಡಿ ಬಂದಿದೆ. ಗಾಯಕಿ ಹಾಗೂ ‘ಎದೆ ತುಂಬಿ ಹಾಡುವೆನು’ ಖ್ಯಾತಿಯ ಲಕ್ಷ್ಮೀ ಹೊಯ್ಸಳ ಹಾಗೂ ಶ್ರೀನಿವಾಸ್ ನಾಯಕ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಮಲಯಾಳಂ ಸಂಗೀತ ನಿರ್ದೇಶಕ ಅನೂಪ್ ಮೆನನ್ ಸಂಗೀತ ಸಂಯೋಜಿಸಿದ್ದು, ಅನೂಪ್ ಮೆನನ್ ಹಾಗೂ ಲಕ್ಷ್ಮೀ ಹೊಯ್ಸಳ ಹಾಡಿಗೆ ದನಿಯಾಗಿದ್ದಾರೆ.

    100 ಜನ ಅಭಿಮಾನಿಗಳನ್ನು ಮನಾಲಿಗೆ ಕಳಿಸಲಿರುವ ವಿಜಯ್​ ದೇವರಕೊಂಡ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts