ಪರೋಟ ಜತೆ ಗಾಂಜಾ ಮಾರುತ್ತಿದ್ದ ಖದೀಮ‌ ಪಸಿಕ್ಕಿಬಿದ್ದ !

Ganja
Published on

ತುಮಕೂರು: ಪರೋಟಾ ಜತೆಗೆ ಗಾಂಜಾನು ಉಣಬಡಿಸುತ್ತಿದ್ದ ಖದೀಮ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನಗರದ ತಿಲಕ್‌ಪಾರ್ಕ್ ಠಾಣೆ ವ್ಯಾಪ್ತಿಯ ಸದಾಶಿವನಗರದ ಮನೆಯೊಂದರ ಮೇಲೆ ಖಚಿತ ಮಾಹಿತಿ ಮೇರೆಗೆ ಗುರುವಾರ ದಾಳಿ ನಡೆಸಿದ ಪೊಲೀಸರು ಮನೆಯಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 30 ಲಕ್ಷ ರೂ., ಮೌಲ್ಯದ 59.32 0ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು ರಿಯಾಜ್(38) ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ರಿಯಾಜ್ ಪಿ.ಎಚ್.ಕಾಲೋನಿಯಲ್ಲಿ ಪರೋಟಾ ಮಾರುತ್ತಿದ್ದು ಜತೆಗೆ ನಗರದ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ರಿಯಾಜ್ ಜತೆ ಶಾಮೀಲಾಗಿದ್ದಾರೆ ಎನ್ನಲಾದ ಮೊಹಮ್ಮದ್ ತನ್ವೀರ್, ಇರ್ಷಾದ್, ಆಸಿಮ್ ತಲೆ ಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ನಗರದ ಪ್ರತಿಷ್ಠಿಯ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳೇ ಗುರಿಯಾಗಿಸಿಕೊಂಡು ದುಬಾರಿ ಬೆಲೆಗೆ ಗಾಂಜಾ ಮಾರಾಟವನ್ನು ಈ ಜಾಲ ವ್ಯವಸ್ಥಿತಿವಾಗಿ ಮಾಡುತ್ತಿತ್ತು ಎನ್ನಲಾಗಿದೆ.

ಪಿಎಸ್ಸೈ ನವೀನ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಎನ್‌ಡಿಪಿ ಆಕ್ಟ್ ಅಡಿ ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net