ಆಸೆ-ಆಮಿಷಕ್ಕೆ ಒಳಗಾಗದಿರಿ

1 Min Read
Untitled design (4)
ಬಸಾಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ತಾಪಂ ಇಒ ಲಕ್ಷ್ಮಿದೇವಿ ಯಾದವ್, ಗ್ರಾಪಂ ಪಿಡಿಒ ವಿದ್ಯಾವತಿ, ಕಾರ್ಯದರ್ಶಿ ನಾಗೇಶ ಸಜ್ಜನ್ ಇತರರಿದ್ದರು.

ಗಂಗಾವತಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಬ್ಬವಿದ್ದಂತೆ, ಶೇ.100 ಮತದಾನ ಮಾಡುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಪಂ ಇಒ ಲಕ್ಷ್ಮಿದೇವಿ ಯಾದವ್ ಹೇಳಿದರು. ಬಸಾಪಟ್ಟಣ ಗ್ರಾಪಂ ಕಚೇರಿ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಶುಕ್ರವಾರ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಆಸೆ-ಆಮಿಷಕ್ಕೊಳಗಾಗದೆ ಮತದಾನದಲ್ಲಿ ಪಾಲ್ಗೊಳ್ಳಬೇಕಿದೆ ಎಂದರು. ಮತದಾನ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ದೀಪ ಪ್ರಜ್ವಂಲನ ಮೂಲಕ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದು, ರಂಗೋಲಿಯಲ್ಲಿ ಮೂಡಿ ಬಂದ ವಿವಿ ಪ್ಯಾಟ್ ಚಿತ್ರ ಗಮನಸೆಳೆಯಿತು. ನನ್ನ ಮತ, ನನ್ನ ಹಕ್ಕು ಚುನಾವಣೆ ಘೋಷವಾಕ್ಯವನ್ನು ಗ್ರಾಪಂ ಚುನಾವಣೆ ರಾಯಭಾರಿ ತೃತೀಯ ಲಿಂಗಿಗಳಾದ ಶರಣಮ್ಮ ಮತ್ತು ರಾಜಶೇಖರ ಪ್ರಸ್ತುತಪಡಿಸಿದರು.

ಪಿಡಿಒ ವಿದ್ಯಾವತಿ, ಕಾರ್ಯದರ್ಶಿ ನಾಗೇಶ ಸಜ್ಜನ್, ಎಸ್‌ಡಿಎ ಶ್ರೀನಿವಾಸ, ತಾಲೂಕು ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ ಸೇರಿ ಗ್ರಾಪಂ ಸಿಬ್ಬಂದಿ, ಎನ್‌ಆರ್‌ಎಲ್‌ಎಂ, ಎಂಬಿಕೆ, ಸ್ವಸಹಾಯ ಗುಂಪಿನ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರಿದ್ದರು.

See also  ಬನಶಂಕರಿ ದೇವಿಗೆ ವಿಶೇಷ ಪೂಜೆ
Share This Article