More

    ಹೇಮಗುಡ್ಡದಲ್ಲಿ ವೈಭವದ ಜಂಬೂ ಸವಾರಿ

    ಗಂಗಾವತಿ: ಶರನ್ನವರಾತ್ರೋತ್ಸವ ನಿಮಿತ್ತ ತಾಲೂಕಿನ ಹೇಮಗುಡ್ಡದಲ್ಲಿ ಜಂಬೂ ಸವಾರಿ ಅದ್ದೂರಿಯಾಗಿ ಮಂಗಳವಾರ ನೆರವೇರಿದ್ದು, 9ದಿನದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಯಿತು.

    ಮೈಸೂರು ದಸರಾದ ಜಂಬೂ ಸವಾರಿಗೆ, ತಾಲೂಕಿನ ಗಡಿಭಾಗದ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮನೇ ಪ್ರೇರಣೆಯಾಗಿದ್ದು, ಇಲ್ಲಿನ ಹೇಮಗುಡ್ಡದಲ್ಲೂ 3 ದಶಕಗಳಿಂದಲೂ ಅಂಬಾರಿ ಮೆರವಣಿಗೆ ಆಯೋಜಿಸಲಾಗುತ್ತಿದೆ. ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ, ಚಂಡಿ ಹೋಮ, ಪೂರ್ಣಾಹುತಿ, ಶ್ರೀದೇವಿ ಪುರಾಣ ಮಹಾಮಂಗಲ, ಪಲ್ಲಕ್ಕಿ ಉತ್ಸವ ಮತ್ತು 40 ಜೋಡಿಗಳ ಸಾಮೂಹಿಕ ವಿವಾಹ ಜರುಗಿದವು. ಲಲಿತ ಸಹಸ್ರನಾಮ ಪಾರಾಯಣ, ಭಜನೆ ಮತ್ತು ಅನ್ನಸಂತರ್ಪಣೆ ನಂತರ ಸಂಜೆ ವೇಳೆ ಅಲಂಕೃತ ವಿಗ್ರಹವನ್ನು ಆನೆ ಮೇಲಿನ ಅಂಬಾರಿಯಲ್ಲಿಟ್ಟು ಪಾದಗಟ್ಟಿವರಿಗೂ ಅದ್ದೂರಿಯಾಗಿ ನೆರವೇರಿಸಲಾಯಿತು. ನಾದಸ್ವರ, ಕಹಳೆ, ಡೊಳ್ಳು ಸೇರಿ ವಿವಿಧ ವಾದ್ಯಮೇಳಗಳು ಭಾಗವಹಿಸಿದ್ದು, ಮೂರ್ತಿಗೆ ಮಾಜಿ ಸಂಸದ ಎಚ್.ಜಿ.ರಾಮುಲು, ಪುರ್ಷ್ಪಾಣೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. 9 ದಿನಗಳ ಕಠಿಣವ್ರತದೊಂದಿಗೆ ನವರಾತ್ರಿ ಆಚರಿಸಿದ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥರನ್ನು ದೇವಾಲಯ ಸುತ್ತಮುತ್ತಲಿನ ಗ್ರಾಮಸ್ಥರು ಸನ್ಮಾನಿಸಿದರು.

    ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣಮುನವಳ್ಳಿ, ಎಂಎಲ್ಸಿ ಹೇಮಲತಾನಾಯಕ, ಮಾಜಿ ಸಚಿವ ಶಿವರಾಜ ತಂಗಡಗಿ, ಜಿಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿರಾಮಕೃಷ್ಣ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ, ಬಿಜೆಪಿ ವಿಜಯನಗರ ಜಿಲ್ಲೆ ಪ್ರಭಾರ ಸಿಂಗನಾಳ ವಿರೂಪಾಕ್ಷಪ್ಪ, ಕಾಂಗ್ರೆಸ್ ಮುಖಂಡರಾದ ರೆಡ್ಡಿ ಶ್ರೀನಿವಾಸ, ಇಲಿಯಾಸ್‌ಬಾಬಾ, ಎಚ್.ಎಸ್.ಭರತ್ ಇತರರಿದ್ದರು.

    ವಾಲಿಕಿಲ್ಲಾಮ್ಯಾಗೋಟ
    ತಾಲೂಕಿನ ಆನೆಗೊಂದಿಯ ವಾಲಿಕಿಲ್ಲಾ ಮ್ಯಾಗೋದ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ವಿಗ್ರಹ ಮೆರವಣಿಗೆ ಬುಧವಾರ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಮೂರ್ತಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ, ಲಲಿತಸಹಸ್ರನಾಮ ಪಾರಾಯಣ, ಚಂಡಿ ಹೋಮ, ಕನ್ನಿಕಾ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ದೇವಾಲಯದ ಮುಖ್ಯಸ್ಥ ಬ್ರಹ್ಮನಂದಯ್ಯಸ್ವಾಮೀಜಿ ನೇತೃತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿಗ್ರಹವನ್ನು ಅನೆಗೊಂದಿ ರಂಗನಾಥ ದೇವಾಲಯದವರಿಗೂ ಅದ್ದೂರಿಯಾಗಿ ನೆರವೇರಿಸಲಾಯಿತು.ಕೋಲಾಟ ಮತ್ತು ವಾದ್ಯ ಮೇಳ ಭಾಗವಹಿಸಿದ್ದವು. ರಾಜವಂಶಸ್ಥ ರಾಜಾಶ್ರೀಕೃಷ್ಣದೇವರಾಯ,ನಗರಸಭೆ ಸದಸ್ಯೆ ಅರ್ಚನಾ ಶ್ರೇಷ್ಠಿ, ಮಾಜಿ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಠಿ, ನಯೋಪ್ರಾ ಮಾಜಿ ಸದಸ್ಯ ಚಂದ್ರಪ್ಪ ಉಪ್ಪಾರ, ದೇವಾಲಯದ ಮುಖ್ಯಸ್ಥ ರಾಜಣ್ಣ ಸ್ವಾಮಿ ಇತರರಿದ್ದರು.

    ಶಾರದಾಂಬಾ ದೇವಾಲಯ
    ನಗರದ ಶಾರದಾ ನಗರದಲ್ಲಿ ಶ್ರೀಶಾರದಾಂಬ ದೇಗುಲದಲ್ಲಿ ಶ್ರೀ ಶಂಕರ ಮಠದಿಂದ ನವಚಂಡಿ ಹೋಮ ಹಮ್ಮಿಕೊಳ್ಳಲಾಗಿತ್ತು. ಮೂರ್ತಿಯನ್ನು ಹೂವಿನಿಂದ ಅಲಂಕಾರ ಮಾಡಿದ್ದು, ವಿವಿಧ ಭಜನೆ ಮಂಡಳಿಗಳಿಂದ ಲಲಿತಸಹಸ್ರನಾಮ ಪಾರಾಯಣ ಹಮ್ಮಿಕೊಳ್ಳಲಾಗಿತ್ತು. ನವರಾತ್ರಿ ಹಬ್ಬದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಮುಖ್ಯಸ್ಥ ನಾರಾಯಣರಾವ್ ವೈದ್ಯ ಮಾತನಾಡಿದರು.ಮಹೇಶ್‌ಭಟ್ ಜೋಶಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮುಖಂಡರಾದ ವಿಶ್ವನಾಥ ಅಳವಂಡಿ, ಪವನ್‌ದೇಸಾಯಿ, ಶ್ರೀನಿವಾಸ ಅಳವಂಡಿ, ಸಂದೀಪಜೋಶಿ, ಶೇಷಗಿರಿ,ರಾಘವೇಂದ್ರ, ದತ್ತಾತ್ರೇಯ ವೈದ್ಯ, ಶ್ರೀಪಾದಮುಧೋಳ್ಕರ್ ಇತರರಿದ್ದರು.

    ವೆಂಕಟರಮಣ ದೇವಾಲಯ
    ನಗರದ ಕಿಲ್ಲಾ ಏರಿಯಾದ ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ಗರುಡೋತ್ಸವ ಹಮ್ಮಿಕೊಳ್ಳಲಾಗಿತ್ತು. ಸುಂಕದಕಟ್ಟೆ ಪ್ರಾಣದೇವರ ದೇವಾಲಯದವರಿಗೂ ಜರುಗಿದ ಕಾರ್ಯಕ್ರಮದಲ್ಲಿ ಶಾಸಕ ಪರಣ್ಣಮುನವಳ್ಳಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ನಗರಸಭೆ ಸದಸ್ಯರಾದ ಸುಚೇತಾಶಿರಿಗೇರಿ, ನವಲಿವಾಸುದೇವ, ಮಾಜಿ ಸದಸ್ಯ ಕೆ.ಶ್ಯಾಮಾಚಾರ ಜೋಶಿ, ಮುಖಂಡರಾದ ಅಪ್ಪಣ್ಣದೇಶಪಾಂಡೆ, ಪವನ ಜೋಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts