More

    ಎಸ್ಸಿಗೆ ಸೇರಿಸದಿದ್ದರೆ ನಿರಂತರ ಹೋರಾಟ: ಉಪ್ಪಾರ ಸಮುದಾಯದ ಪೀಠಾಧಿಪತಿ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಎಚ್ಚರಿಕೆ

    ಗಂಗಾವತಿ: ಸಮುದಾಯದ ಅಭಿವೃದ್ಧಿಗೆ ಸರ್ಕಾರ ಎಸ್ಸಿ ಮೀಸಲು ೋಷಿಸಬೇಕು. ನಿರ್ಲಕ್ಷಿಸಿದರೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಉಪ್ಪಾರ ಸಮುದಾಯದ ಪೀಠಾಧಿಪತಿ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಎಚ್ಚರಿಸಿದರು.

    ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಲ್ಯಾಣ ಮತ್ತು ಉತ್ತರ ಕರ್ನಾಟಕ ಭಾಗದ ಉಪ್ಪಾರ ಸಮುದಾಯದ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಸಮುದಾಯದ ಜನಸಂಖ್ಯೆ 30 ಲಕ್ಷಕ್ಕಿಂತ ಹೆಚ್ಚಿದ್ದು, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. ಸಮುದಾಯವನ್ನು ಎಸ್ಸಿಗೆ ಸೇರ್ಪಡೆಗೊಳಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು ಸರ್ಕಾರ ಸ್ಪಂದಿಸಿಲ್ಲ. ಮಾಜಿ ಸಿಎಂ ದೇವರಾಜ ಅರಸು ಆಡಳಿತಾವಧಿಯಲ್ಲೂ ಸಮುದಾಯವನ್ನು ಮೀಸಲು ಜಾರಿಗೆ ಸೇರ್ಪಡೆಗೊಳಿಸುವ ಕುರಿತಂತೆ ಚರ್ಚೆಯಾಗಿತ್ತು. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವ ಸಮುದಾಯವನ್ನು ಮೀಸಲು ಜಾತಿಗೆ ಸೇರಿಸುವ ಕುರಿತಂತೆ ಹಾವನೂರ, ವೆಂಕಟಸ್ವಾಮಿ ಮತ್ತು ಚಿನ್ನಪ್ಪರೆಡ್ಡಿ ಆಯೋಗ ವರದಿ ನೀಡಿದ್ದು, ಕುಲಶಾಸೀಯ ಅಧ್ಯಯನ ವರದಿ ಸಲ್ಲಿಸುವ ಹಂತದಲ್ಲಿದೆ ಎಂದರು.

    ಶಾಸಕ ಪರಣ್ಣ ಮುನವಳ್ಳಿ ಶ್ರೀಗಳನ್ನು ಸನ್ಮಾನಿಸಿ, ಸಮುದಾಯದ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದರು. ಉಪ್ಪಾರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಿರೀಶ್ ಉಪ್ಪಾರ್, ನಗರಸಭೆ ಮಾಜಿ ಅಧ್ಯಕ್ಷ ಅಮರಜ್ಯೋತಿ ದುರುಗಪ್ಪ, ಸಮುದಾಯದ ಪ್ರಧಾನ ಕಾರ್ಯದರ್ಶಿ ವೆಂಕೋಬ ಉಪ್ಪಾರ್, ಕಾರ್ಯದರ್ಶಿ ಲೋಕೇಶ ಉಪ್ಪಾರ್, ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ಉಪ್ಪಾರ್, ಸಂಪನ್ಮೂಲ ವ್ಯಕ್ತಿಗಳಾದ ಸೋಮೇಶ ಉಪ್ಪಾರ್, ಡಾ.ವೀರೇಶ ಜಾನೆಕಲ್, ಪದಾಧಿಕಾರಿಗಳಾದ ಕಮಲಾಜೇಡರ್, ಬಸವರಾಜ ಯಲಬುರ್ಗಾ, ನೇಮಣ್ಣ ಮೇಲಸಕ್ರಿ, ನರಸಪ್ಪ ಅಮರಜ್ಯೋತಿ, ಮುದ್ದಾಪ್ಪ ಆರಾಳ್, ವೆಂಕಟೇಶ ಉಪ್ಪಾರ್, ಯಂಕಪ್ಪ ಕಟ್ಟಿಮನಿ, ವೆಂಕಟೇಶ ಅಮರಜ್ಯೋತಿ, ಡಾ.ಹೊನ್ನಪ್ಪ ಬಂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts