More

    ವೇತನ ಪ್ರಮಾಣ ಪತ್ರಕ್ಕೆ ಆಗ್ರಹ

    ಗಂಗಾವತಿ: ನೇರ ಪಾವತಿ ಕಾರ್ಮಿಕರಿಗೆ ಸೇವಾ ದೃಢೀಕರಣ ಮತ್ತು ವೇತನ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಕಾರ್ಮಿಕರ ಸಂಘದ ಸದಸ್ಯರು ನಗರಸಭೆ ಕಚೇರಿಯಲ್ಲಿ ಪರಿಸರ ಇಂಜಿನಿಯರ್ ಚೇತನ್‌ಕುಮಾರಗೆ ಬುಧವಾರ ಮನವಿ ಮಾಡಿದರು.

    ದೈನಂದಿನ ನೈರ್ಮಲೀಕರಣ ಕೆಲಸ ಮುಗಿಸಿದ ನಂತರ ನಗರಸಭೆ ಕಚೇರಿಯಲ್ಲಿ ಜಮಾಯಿಸಿದ ಪೌರ ಕಾರ್ಮಿಕರು, ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ನೇತೃತ್ವವಹಿಸಿದ್ದ ಜಿಲ್ಲಾಧ್ಯಕ್ಷ ಪರಶುರಾಂ ಮಾತನಾಡಿ, ರಾಜ್ಯ ಸರ್ಕಾರ ಸೂಚಿಸಿರುವ ಪೌರ ಕಾರ್ಮಿಕರ ನೇರನೇಮಕಾತಿ ಪ್ರಕ್ರಿಯೆಯಲ್ಲಿ ನೇರ ಪಾವತಿದಾರರನ್ನು ನೇಮಿಸಿಕೊಳ್ಳುವಂತೆ ಕಾಯ್ದೆಯಲ್ಲಿದ್ದು, ಅಗತ್ಯ ಪ್ರಮಾಣ ಪತ್ರ ಒದಗಿಸಬೇಕಿದೆ. 2011ರಿಂದ ಕರ್ತವ್ಯ ನಿರ್ವಹಿಸುತ್ತಿರುವ 77 ಕಾರ್ಮಿಕರಿಗೆ ಸೇವಾ ದೃಢೀಕರಣ, ವೇತನ ಪ್ರಮಾಣ ಪತ್ರ, ಇಎಸ್‌ಐ, ಭವಿಷ್ಯ ನಿಧಿ ಪಾವತಿಸಿರುವ ಬಗ್ಗೆ ದಾಖಲೆಗಳನ್ನು ನೇಮಕ ಅರ್ಜಿಯೊಂದಿಗೆ ಲಗತ್ತಿಸಬೇಕಿದೆ. ಪ್ರಮಾಣಪತ್ರಕ್ಕಾಗಿ ಹಲವು ದಿನಗಳಿಂದ ಮನವಿ ಮಾಡುತ್ತಿದ್ದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

    ಈ ಬಗ್ಗೆ ಪರಿಸರ ಇಂಜಿನಿಯರ್ ಚೇತನಕುಮಾರ ಮಾತನಾಡಿ, ಪೌರಾಡಳಿತ ಕಾಯ್ದೆ ಅನ್ವಯ ಪೌರ ಕಾರ್ಮಿಕರಿಗೆ ಬರಬೇಕಾದ ಎಲ್ಲ ದಾಖಲೆಗಳನ್ನು ನೀಡಲು ಸಿದ್ಧವಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ ಅವಧಿಯಲ್ಲಿ ದಾಖಲೆಗಳನ್ನು ನೀಡಲು ಬರಲ್ಲ ಎಂದರು. ಸಂಘದ ತಾಲೂಕು ಅಧ್ಯಕ್ಷ ಗಿಡ್ಡಪ್ಪ, ಪದಾಧಿಕಾರಿಗಳಾದ ಶಾಂತಮ್ಮ, ಶಂಕ್ರಮ್ಮ,ಉಮೇಶ, ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts