More

    ಕಾವ್ಯ ಕೇಳುಗರ ಹೃದಯ ಅರಳಿಸುವಂತಿರಲಿ

    ಗಂಗಾವತಿ: ವಾಸ್ತವಿಕತೆ ಬಿಂಬಿಸುವ ಮತ್ತು ಸಾಮರಸ್ಯ ಹೆಚ್ಚಿಸುವ ಕಾವ್ಯಗಳಿಗೆ ಮನ್ನಣೆಯಿದ್ದು, ಓಲೈಕೆ ಕಾವ್ಯಗಳ ರಚನೆ ಮಾಡುವುದು ಬೇಡ ಎಂದು ಸಾಹಿತಿ ನಿಜಲಿಂಗಪ್ಪ ಮೆಣಸಿಗಿ ಹೇಳಿದರು.

    ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕಾವ್ಯಲೋಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಸೋಮವಾರ ಹಮ್ಮಿಕೊಂಡಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಕಾವ್ಯ ಕೇಳುಗರ ಹದಯ ಅರಳಿಸಬೇಕು. ಕವಿ ಹದಯ ವೈಶಾಲ್ಯಕ್ಕೆ ಮಿತಿ ಇಲ್ಲ. ತಾಲೂಕಿನಲ್ಲಿ ಸಾಹಿತ್ಯ ಕಷಿ ಹೆಚ್ಚುತ್ತಿದ್ದು, ಹೊಸಮುಖಗಳು ಕಾವ್ಯ ರಚನೆಯತ್ತ ಗಮನಹರಿಸಬೇಕು ಎಂದರು.

    ಬ್ಯಾಂಕ್ ನಿವೃತ್ತ ಅಧಿಕಾರಿ ರಾಘವೇಂದ್ರ ಮಂಗಳೂರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ತಿಳಿವಳಿಕೆಯಿಲ್ಲದೇ ಸಾಹಿತ್ಯ ರಚನೆಯಾಗುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

    ಕವಿಗೋಷ್ಟಿಯಲ್ಲಿ ಬರಹಗಾರರಾದ ನರ್ಮದಾಬಾಯಿ ಕುಲಕರ್ಣಿ, ಶಕುಂತಲಾ ನಾಯಕ, ಯು.ಆರ್.ಶಿವರುದ್ರಪ್ಪ, ಶಿವನಗೌಡ ವಡ್ಡರಟ್ಟಿ, ಮಹ್ಮದ್‌ಮಿಯಾ, ಮೈಲಾರಪ್ಪ ಬೂದಿಹಾಳ, ಶರಣಪ್ಪ ವಿದ್ಯಾನಗರ, ಭೀಮನಗೌಡ ಕೇಸರಟ್ಟಿ, ಶರಣಪ್ಪ ಮೆಟ್ರಿ, ನೀಲಮ್ಮ, ಶ್ಯಾಮಿದ್ ಲಾಠಿ, ಜಿ.ಎಸ್.ಸುರೇಶ, ರಗಡಪ್ಪ ಹೊಸಳ್ಳಿ, ಬಸವರಾಜ ಹೇರೂರು, ಸೋಮಶೇಖರ್ ಹೆಬ್ಬಾಳ, ಗೋಪಿನಾಥ ದಿನ್ನಿ ಕವನ ವಾಚಿಸಿದರು.

    ಕಾನಿಪ ತಾಲೂಕು ಅಧ್ಯಕ್ಷ ನಾಗರಾಜ ಇಂಗಳಗಿ, ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಶರಣಪ್ಪ ಸಜ್ಜಿಹೊಲ, ಸಿಆರ್‌ಪಿ ಸುಂಕಪ್ಪ, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಕಾವ್ಯಲೋಕ ಗೌರವ ಅಧ್ಯಕ್ಷ ಡಾ. ಶಿವಕುಮಾರ ಮಾಲಿ ಪಾಟೀಲ್, ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts