More

    ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿ: ಸಿಬ್ಬಂದಿಗೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಸೂಚನೆ

    ಗಂಗಾವತಿ: ವಾರ್ಡ್‌ನಲ್ಲಿ ಬೀದಿ ದೀಪ ಮತ್ತು ನೈರ್ಮಲೀಕರಣ ವ್ಯವಸ್ಥೆ ಸರಿಪಡಿಸದಿದ್ದರೆ ನಿರ್ವಹಣೆ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಅಲ್ಲದೆ, ವಿದ್ಯುತ್ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಎಚ್ಚರಿಕೆ ನೀಡಿದರು.

    ನಗರದ 29ನೇ ವಾರ್ಡ್ ಬಳಿಗಾರ್ ಓಣಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ನಗರಸಭೆ ನಡೆ ವಾರ್ಡ್ ಕಡೆ’ ಸಭೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ನಿವಾಸಿಗಳು ದೂರು ನೀಡಿದ ತಕ್ಷಣವೇ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದು, ಬೀದಿ ದೀಪ ನಿರ್ವಹಣೆಯಲ್ಲಿ ಲೋಪವಾಗಬಾರದು. ತಾಂತ್ರಿಕ ಮತ್ತು ಅನುದಾನ ಸಮಸ್ಯೆ ಇದ್ದರೆ ಸಂಬಂಧಪಟ್ಟ ನಿರ್ವಹಣೆ ಸಿಬ್ಬಂದಿ ಗಮನಕ್ಕೆ ತರಬೇಕು. ಅತ್ಯಂತ ಹಳೆಯದಾದ ಬೀದಿದೀಪದ ಲೈಟ್‌ಸೆಟ್‌ಗಳನ್ನು ಕೂಡಲೇ ಬದಲಿಸಬೇಕು. ರಸ್ತೆ ದುರಸ್ತಿಗೆ ಎಸ್‌ಎ್ಸಿ ಅನುದಾನವಿದ್ದು, ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗದಿದ್ದರೆ ಉಳಿತಾಯದ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಸಿಡಿ ಮತ್ತು ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿದವರೂ ಸಂಬಂಧಪಟ್ಟ ಸಿಬ್ಬಂದಿ ಸಂಪರ್ಕಿಸಿ ಇತ್ಯರ್ಥಪಡಿಸಿಕೊಳ್ಳಬೇಕು. ವಾರ್ಡ್‌ನತ್ತ ಸಿಬ್ಬಂದಿ ಬರುತ್ತಿದ್ದು, ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸಿಕೊಳ್ಳಬೇಕು ಎಂದರು.

    ನಗರಸಭೆ ಸದಸ್ಯರಾದ ಸಿ.ವೆಂಕಟರಮಣ, ಉಮೇಶ ಸಿಂಗನಾಳ್, ಪರಶುರಾಮ್ ಮಡ್ಡೇರ್, ಮಾಜಿ ಅಧ್ಯಕ್ಷ ಐಲಿ ನಾರಾಯಣಪ್ಪ, ಮಾಜಿ ಸದಸ್ಯ ಚಂದ್ರಪ್ಪ ಐಲಿ, ವ್ಯವಸ್ಥಾಪಕ ಷಣ್ಮುಖಪ್ಪ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಜೆಇ ದಾಸನಾಳ ಗುರುರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts