More

    ಸದಸ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ: ಗಂಗಾವತಿ ಪೊಲೀಸ್ ಠಾಣೆ ಮುಂದೆ ನಗರಸಭೆ ಸಿಬ್ಬಂದಿ ಪ್ರತಿಭಟನೆ

    ಗಂಗಾವತಿ: ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿರುವ ಸದಸ್ಯ ಎ್.ರಾಘವೇಂದ್ರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಗರಸಭೆ ಸಿಬ್ಬಂದಿ ಮಂಗಳವಾರ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

    ತುರ್ತು ಸಾಮಾನ್ಯ ಸಭೆಯಲ್ಲಿ ಚರ್ಚಿತ ವಿಷಯ ಬಿಟ್ಟು ಸಂಬಂಧವಿಲ್ಲದ ವಿಷಯ ಮುಂದಿಟ್ಟುಕೊಂಡು ಪೌರಾಯುಕ್ತ ವಿರೂಪಾಕ್ಷಮೂರ್ತಿ ವಿರುದ್ಧ ಅವಹೇಳನ ಮಾಡಿದ ನಗರಸಭೆ ಸದಸ್ಯ ಎ್.ರಾಘವೇಂದ್ರ ವರ್ತನೆ ಖಂಡನೀಯವಾಗಿದ್ದು, ಹಕ್ಕುಚುತಿ ಮಾಡಿದ್ದಾರೆ. ಮಾತು ಕೇಳದಿದ್ದರೆ ಸಿಬ್ಬಂದಿಗೆ ಬೆದರಿಕೆ ಹಾಕುವುದು ಸಾಮಾನ್ಯವಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಸಿರುವ ಸದಸ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ಸುಳ್ಳು ಪ್ರಕರಣಕ್ಕೆ ಅವಕಾಶ ನೀಡಬಾರದು. ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಸಿಬ್ಬಂದಿ ರಗಡಪ್ಪ ಹುಲಿಹೈದರ್, ರಮೇಶ, ಎಸ್.ಶಂಕ್ರಗೌಡ, ಎ.ನಾಗರಾಜ್, ಬಸವರಾಜ ಛಲವಾದಿ, ಕಾಂತಮ್ಮ, ಎಸ್.ಎಂ.ಖತೀಬ್ ಇತರರಿದ್ದರು.

    ಜಾತಿ ನಿಂದನೆ ಪ್ರಕರಣ ದಾಖಲು: ತಾಪಂ ಮಂಥನ ಸಭಾಂಗಣದಲ್ಲಿ ಅಯೋಜಿಸಿದ್ದ ನಗರಸಭೆ ತುರ್ತು ಸಭೆಯಲ್ಲಿ ನಡೆದ ಜಟಾಪಟಿಗೆ ಸಂಬಂಧಿಸಿದಂತೆ ಸದಸ್ಯ ಎ್.ರಾಘವೇಂದ್ರ ನೀಡಿದ ದೂರಿನನ್ವಯ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ವಿರುದ್ಧ ಜಾತಿನಿಂದನೆ ಪ್ರಕರಣ ಸೋಮವಾರ ದಾಖಲಾಗಿದೆ. ಆಟೋನಗರ ಕುರಿತು ಚರ್ಚಿಸುತ್ತಿದ್ದಾಗ ಪೌರಾಯುಕ್ತರ ವಿರುದ್ಧ ರಾಘವೇಂದ್ರ ಭ್ರಷ್ಟಾಚಾರದ ಆರೋಪ ಮಾಡಿದ್ದು ಗದ್ದಲಕ್ಕೆ ಕಾರಣವಾಗಿತ್ತು. ಇಬ್ಬರು ಏರು ಧ್ವನಿಯಲ್ಲಿ ಮಾತನಾಡಿದ್ದು, ಆಡಳಿತ ಮಂಡಳಿ ಸದಸ್ಯರು ರಾಘವೇಂದ್ರ ಪರ, ವಿಪಕ್ಷ ಸದಸ್ಯರು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಬೆಂಬಲಕ್ಕೆ ನಿಂತಿದ್ದರಿಂದ ವಿಕೋಪಕ್ಕೆ ಹೋಗಿತ್ತು. ಇದೇ ಘಟನೆ ಮುಂದಿಟ್ಟುಕೊಂಡು ದೂರು ನೀಡಿದ್ದು, ಪೊಲೀಸರಿಗೆ ಒತ್ತಡ ಹೇರಿದ್ದರಿಂದ ಪ್ರಕರಣ ದಾಖಲಿಸಲಾಗಿದೆ ಎಂಬುದು ಸಿಬ್ಬಂದಿ ಆರೋಪವಾಗಿದೆ. ಸೂಕ್ತ ರಕ್ಷಣೆಗಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts