More

    ಸೇವಾಮನೋಭಾವದಿಂದ ಗ್ರಾಮಾಭಿವೃದ್ಧಿ ಸಾಧ್ಯ

    ಗಂಗಾವತಿ: ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಶಿಬಿರ ಸಹಕಾರಿಯಾಗಿದ್ದು, ಅಧ್ಯಯನದೊಂದಿಗೆ ಸೇವಾಮನೋಭಾವ ಕಲಿಸಲಿದೆ ಎಂದು ಎನ್ನೆಸ್ಸೆಸ್ ಬಳ್ಳಾರಿ ವಿಭಾಗಾಧಿಕಾರಿ ಬಸಪ್ಪ ನಾಗೋಲಿ ಹೇಳಿದರು.

    ತಾಲೂಕಿನ ಮಲಕನಮರಡಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆವರಣದಲ್ಲಿ ಬಾಲಕಿಯರ ಎಂಎನ್‌ಎಂ ಪ.ಪೂ. ಕಾಲೇಜಿನಿಂದ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ವಾರ್ಷಿಕ ಸೇವಾ ಶಿಬಿರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

    ಶಿಬಿರಗಳು ಜೀವನದಲ್ಲಿ ಸಹಬಾಳ್ವೆ, ವೈಚಾರಿಕತೆ ಮತ್ತು ಉತ್ತಮ ಬದುಕು ರೂಪಿಸುತ್ತಿದ್ದು, ಸಾಮರಸ್ಯ ಹೆಚ್ಚಿಸಲಿದೆ. ಸೇವಾಮನೋಭಾವದಿಂದ ಗ್ರಾಮಾಭಿವೃದ್ಧಿ ಸಾಧ್ಯ ಎಂದರು.

    ಕಾಲೇಜಿನ ಪ್ರಾಚಾರ್ಯ ಟಿ.ಸಿ.ಶಾಂತಪ್ಪ ಮಾತನಾಡಿ, ಗಾಂಧೀಜಿ ಕನಸಿನಂತೆ ಸ್ವಚ್ಛತೆ, ಶೈಕ್ಷಣಿಕ ಜಾಗತಿ ಎನ್ನೆಸ್ಸೆಸ್‌ನಿಂದ ಸಾಧ್ಯವಿದ್ದು, ಗ್ರಾಮಾಗಳ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.

    ಏಳು ದಿನಗಳ ಶಿಬಿರ ಕುರಿತು ಕಾರ್ಯಕ್ರಮ ಅಧಿಕಾರಿ ಡಿ.ಎಸ್.ಮಾಲಗೌಡರ್ ಮಾಹಿತಿ ನೀಡಿದರು. ಗ್ರಾಪಂ ಸದಸ್ಯ ಯಮನೂರಪ್ಪ ಕುರಿ, ವಸತಿ ಶಾಲೆ ಪ್ರಾಚಾರ್ಯ ಮಲ್ಲಿಕಾರ್ಜುನ ಪಾಟೀಲ್, ಉಪನ್ಯಾಸಕರಾದ ಎಸ್.ಎಚ್. ಪಾಟೀಲ್, ಡಿ.ಆರ್. ರಾಘವೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts