More

    ನವವೃಂದಾವನ ಗಡ್ಡಿ ಬಳಿಯ ಶಿಲಾಮಂಟಪ ಮುಳುಗಡೆ

    ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿ ಪಾತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ಎರಡನೇ ಬಾರಿ ನೀರು ಹರಿಬಿಟ್ಟಿದ್ದರಿಂದ ಸ್ಮಾರಕಗಳು ಜಲಾವೃತಗೊಂಡಿದ್ದು, ತಾಲೂಕಿನ ಚಿಕ್ಕಜಂತಕಲ್ ಬಳಿ ಸೇತುವೆ ಮುಳುಗಲು 2 ಅಡಿ ಬಾಕಿಯಿದೆ.

    ಪಶ್ಚಿಮ ಘಟ್ಟದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚುವರಿ ನೀರು ಹರಿದು ಬರುತ್ತಿದೆ. ಅಪಾಯಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ನದಿಗೆ 1.10ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ನಗರ ನವವೃಂದಾವನ ಗಡ್ಡಿಯ ಬಳಿಯ 63 ಕಂಬಗಳ ಶಿಲಾಮಂಟಪ, ಚಿಂತಾಮಣಿಯ ಖೂಳಮಂಟಪ ಜಲಾವೃತಗೊಂಡಿವೆ.

    ಹನುಮನಹಳ್ಳಿ ಬಳಿಯ ಋಷ್ಯಮುಖ ಪರ್ವತ, ಹಂಪಿ ಸಂಪರ್ಕದ ವಿರುಪಾಪುರಗಡ್ಡಿ ಸಂಪರ್ಕ ರಸ್ತೆ ಕಡಿತಗೊಂಡಿದ್ದು, ಸಣಾಪುರದ ಾಲ್ಸ್‌ಗೆ ಕಳೆ ಬಂದಿದೆ. ಕಂಪ್ಲಿ ಸೇತುವೆ ಮುಳುಗಲು ಕೆಲ ಅಡಿಗಳು ಬಾಕಿಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಚೆಕ್‌ಪೋಸ್ಟ್ ಹಾಕಲಾಗಿದೆ.ಸಣಾಪುರದ ಾಲ್ಸ್ ತಳವಾರ ಘಟ್ಟ, ನವವೃಂದಾವನ ಗಡ್ಡಿ ಸಂಪರ್ಕದ ಯಾಂತ್ರಿ ದೋಣಿ ಹಾಕುವುದನ್ನು ನಿಷೇಧಿಸಲಾಗಿದ್ದು, ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts