More

    ಗಂಗಾವತಿ ಆರಾಧ್ಯ ದೈವ ಚನ್ನಬಸವ ತಾತನ ಜಾತ್ರೆಗೆ ಚಾಲನೆ: . ಜ.4ರಂದು ಸರ್ವಾಲಂಕೃತ ಜೋಡು ರಥೋತ್ಸವ

    ಗಂಗಾವತಿ: ನಗರದ ಆರಾಧ್ಯ ದೈವ ಶ್ರೀ ಗುರು ಚನ್ನಬಸವ ಶಿವಯೋಗಿಗಳ 77ನೇ ಜಾತ್ರೋತ್ಸವ ನಿಮಿತ್ತ ಶನಿವಾರ ಬೆಳ್ಳಿ ರಥೋತ್ಸವ ನೆರವೇರಿಸುವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

    ಬೆಳಗ್ಗೆ ಶ್ರೀಸ್ವಾಮಿ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ ಮತ್ತು ಜೋಡು ರಥೋತ್ಸವಗಳಿಗೆ ಕಲಶಾರೋಹಣ ಮಾಡಲಾಯಿತು. ಜ.1ರಂದು ದಶಮಿ ದಿಂಡಿನ ಉತ್ಸವ, 2ಕ್ಕೆ ಮುತ್ತಿನ ಪಲ್ಲಕ್ಕಿ, 3ರಂದು ಪುರಾಣ ಮಹಾಮಂಗಲ, ಅಡ್ಡಪಲ್ಲಕ್ಕಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಜ.4ರಂದು ಸರ್ವಾಲಂಕೃತ ಜೋಡು ರಥೋತ್ಸವ ಪಾದಗಟ್ಟೆವರೆಗೂ ನೆರವೇರಲಿದೆ ಎಂದು ಮಠದ ಟ್ರಸ್ಟಿ ಚಂದ್ರೇಗೌಡ ಪೊ.ಪಾಟೀಲ್ ಮಾಹಿತಿ ನೀಡಿದರು.

    ರಥೋತ್ಸವ ಹಿನ್ನೆಲೆಯಲ್ಲಿ 20 ಕ್ವಿಂಟಾಲ್ ಲಡ್ಡುಗಳನ್ನು ತಯಾರಿಸುತ್ತಿದ್ದು, ರೊಟ್ಟಿಗಳನ್ನು ಸಂಗ್ರಹಿಸಲಾಗಿದೆ. ಭಕ್ತರು ಸ್ವಯಂಪ್ರೇರಣೆಯಿಂದ ಜಾತ್ರೆ ಸಿದ್ಧತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಸಿಬಿಎಸ್ ಕಲ್ಯಾಣ ಮಂಟಪದ ಬಳಿ ಸಾಮೂಹಿಕ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ರುದ್ರಯ್ಯ ಸ್ವಾಮೀಜಿ, ಶಾಂತಮಲ್ಲಯ್ಯ ಸ್ವಾಮೀಜಿ, ಗಾಳಿ ರುದ್ರಪ್ಪ, ಬಾವಿಕಟ್ಟಿ ಬಸವರಾಜ್, ಸೋಮಶೇಖರ್ ಕಂಪ್ಲಿ, ಸಿದ್ಧಲಿಂಗೇಶ ಪೂಲಭಾವಿ, ಶಿವಪ್ರಕಾಶ ಅಕ್ಕಿ, ಪಂಪಾಪತಿ ಹುರಕಡ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts