More

    ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ: ಶಾಸಕ ಪರಣ್ಣ ಮುನವಳ್ಳಿ ಸೂಚನೆ

    ಗಂಗಾವತಿ: ಹನುಮಮಾಲೆ ವಿಸರ್ಜನೆ ಅಚ್ಚುಕಟ್ಟಾಗಿ ನಡೆಯಲು ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಸೂಚಿಸಿದರು.

    ತಾಪಂ ಮಂಥನ ಸಭಾಂಗಣದಲ್ಲಿ ಪೊಲೀಸ್ ಮತ್ತು ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಡಿ.3ರಿಂದ 5ರವರೆಗೆ ನಡೆಯಲಿರುವ ಹನುಮಮಾಲೆ ವಿಸರ್ಜನೆ ಶೋಭಾಯಾತ್ರೆಯಲ್ಲಿ ವಿವಿಧ ಜಿಲ್ಲೆಗಳ ಭಕ್ತರು ಭಾಗವಹಿಸಲಿದ್ದು, ವಸತಿ, ನೀರು, ಸ್ನಾನಗೃಹ, ಚಿಕಿತ್ಸೆ ವ್ಯವಸ್ಥೆ ಮಾಡಬೇಕಿದೆ. ರಾತ್ರಿ ಪಾದಯಾತ್ರೆಗೆ ಬೆಳಕಿನ ವ್ಯವಸ್ಥೆ, ದೇವಸ್ಥಾನಕ್ಕೆ ದೀಪಾಲಂಕಾರ, ಸ್ವಚ್ಛತೆ ಸೇರಿ ಇತರ ಕೆಲಸಗಳು ಸಮಿತಿ ಅಧಿಕಾರಿಗಳು ಮಾಡಬೇಕು. ಸಣಾಪುರ, ಆನೆಗೊಂದಿ, ಮಲ್ಲಾಪುರ ಪಿಡಿಒಗಳು 5 ದಿನ ಅಂಜನಾದ್ರಿಯಲ್ಲಿಯೇ ವಾಸ್ತವ್ಯ ಹೂಡಬೇಕು. 19 ಸ್ಥಳದಲ್ಲಿ ಪಾರ್ಕಿಂಗ್, ದೇವಸ್ಥಾನಕ್ಕೆ ಏರಲು ಏಕಮುಖ ಸಂಚಾರ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಸೂಚನಾ ಲಕಗಳನ್ನು ಹಾಕಬೇಕಿದ್ದು, ಸಂಘಟನೆ ಪದಾಧಿಕಾರಿಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಪಿಐಗಳಾದ ಟಿ.ವೆಂಕಟಸ್ವಾಮಿ, ಎನ್.ಮಂಜುನಾಥ, ಬಿಜೆಪಿ ಮುಖಂಡ ಸಂತೋಷ ಕೆಲೋಜಿ, ಹಿಂದುಪರ ಸಂಘಟನೆ ಪ್ರತಿನಿಧಿ ವಿನಯ್ ಪಾಟೀಲ್ ಇತರರಿದ್ದರು.

    ಅನ್ಯ ಕೋಮಿನವರಿಗೆ ಅವಕಾಶ ನೀಡದಿರಿ: ಹನುಮಮಾಲೆ ವಿಸರ್ಜನೆಗೆ ದಿನಗಣನೆ ಶುರುವಾಗುತ್ತಿದ್ದಂತೆ ಅಂಜನಾದ್ರಿ ಬೆಟ್ಟದ ಬಳಿ ಅನ್ಯ ಕೋಮಿನ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಹಿಂದು ಜಾಗರಣ ವೇದಿಕೆ ನಾಮಲಕ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಹಿಂದುಗಳಲ್ಲದ ವ್ಯಾಪಾರಿಗಳಿಗೆ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ವಹಿವಾಟು ಹೆಸರಿನಲ್ಲಿ ಮುಸ್ಲಿಮರು ಹಿಂದು ಧಾರ್ಮಿಕ ಸ್ಥಳಗಳ ಮಾಹಿತಿ ಕಲೆ ಹಾಕುತ್ತಿದ್ದಾರೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದು ಪೊಲೀಸರು ಗಂಭೀರ ಪರಿಗಣಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts