More

    ಪ್ರಕರಣ ಇತ್ಯರ್ಥ ವಿಳಂಬದಿಂದ ತೊಂದರೆ


    ಗಂಗಾವತಿ: ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರದಲ್ಲಿ ಎರಡು ದಿನ ಕಲಾಪಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗುವುದು

    ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಹೇಳಿದರು.

    ನಗರ ವಕೀಲರ ಸಂಘದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಂಘದ ತುರ್ತು ಸಭೆಯಲ್ಲಿ ಮಾತನಾಡಿದರು. ಎಸಿ ಕಚೇರಿಯ ಪ್ರಕರಣಗಳನ್ನು ನಗರದಲ್ಲಿ ಕಲಾಪ ಆಯೋಜಿಸಲು ಒತ್ತಡ ಹಾಕಲಾಗುತ್ತಿದ್ದು, ವಾರದಲ್ಲಿ ಎರಡು ದಿನ ಕಡ್ಡಾಯಗೊಳಿಸಬೇಕು.

    ವಿಳಂಬದಿಂದ ವಕೀಲರಿಗೂ ಮತ್ತು ಕಕ್ಷಿದಾರರಿಗೂ ತೊಂದರೆಯಾಗುತ್ತಿದ್ದು, ಅನಗತ್ಯ ಹೊರೆಯಾಗಿದೆ. ಗಂಗಾವತಿಯಲ್ಲಿ ಕಲಾಪ ಆಯೋಜಿಸದಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದರು.

    ಎಸಿ ಕಚೇರಿಯಲ್ಲಾಗುತ್ತಿರುವ ಇತ್ಯರ್ಥ ವಿಳಂಬದ ಬಗ್ಗೆ ಹಿರಿಯ ಮತ್ತು ಕಿರಿಯ ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದರು. ಮೊದಲ ಹಂತದಲ್ಲಿ ಪತ್ರದ ಮೂಲಕ ಒತ್ತಡ ಹಾಕಲಾಗುತ್ತಿದ್ದು, ನಿರ್ಲಕ್ಷಿಸಿದರೆ ಹೋರಾಟದ ರೂಪುರೇಷೆ ಸಿದ್ದಪಡಿಸುವ ಬಗ್ಗೆ ಚರ್ಚಿಸಲಾಯಿತು.

    ಹಿರಿಯ ವಕೀಲರಾದ ಬಿ.ಮಲ್ಲಪ್ಪ, ವೈಜನಾಥಸ್ವಾಮಿ ಹಿರೇಮಠ, ಎಚ್.ಬಸನಗೌಡ, ಶರದ್ ದಂಡಿನ್, ಪ್ರೇಮಮೂರ್ತಿ ಹಿರೇಮಠ, ಕೆ.ಕೃಷ್ಣಪ್ಪ, ನಾಗರಾಜ್ ಜವಳಿ, ವಿ.ಎನ್.ಪಾಟೀಲ್, ಸೋಮನಾಥ ಪಟ್ಟಣಶೆಟ್ಟಿ,

    ಎ.ಸೋಮನಾಥ, ಪಿ.ಎಂ.ಕುಸುಬಿ, ಎಚ್.ಎನ್.ಕುಂಬಾರ, ಶ್ರೀಧರ ನಾಯಕ, ಸಂಘದ ಉಪಾಧ್ಯಕ್ಷ ಪರಸಪ್ಪ ನಾಯಕ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts