More

    ಜೀವ ಸಂಕುಲಗಳ ಉಳಿವಿಗೆ ಪರಿಸರ ರಕ್ಷಣೆ ಅಗತ್ಯ

    ಗಂಗಾವತಿ: ತಾಲೂಕಿನ ಆನೆಗೊಂದಿಯ ಮುಕ್ತಿಧಾಮದಲ್ಲಿ ಗ್ರೀನ್ ಕಿಷ್ಕಿಂಧಾ, ಸೇವ್ ಕಿಷ್ಕಿಂಧಾ ಸಂಸ್ಥೆಯಿಂದ ವನಮಹೋತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

    ಗ್ರಾಪಂ 15ನೇ ಹಣಕಾಸು ಯೋಜನೆಯಡಿ ಮಾದರಿ ಮುಕ್ತಿಧಾಮ ನಿರ್ಮಿಸಲಾಗಿದ್ದು, ವಿಶಿಷ್ಟವಾಗಿದೆ. ಸ್ಮಶಾನ ಎಂಬ ಭಾವನೆ ಬರದಂತೆ ನಿರ್ಮಿಸಲಾಗಿದ್ದು, ವಿವಿಧ ಬಗೆಯ ಸಸಿಗಳನ್ನು ನೆಡುವುದರ ಜತೆಗೆ ಬೆಳವಣಿಗೆ ಜವಾಬ್ದಾರಿ ನೀಡಲಾಯಿತು.

    ಸಸಿ ನೆಡುವ ಮೂಲಕ ಚಾಲನೆ ನೀಡಿದ ರಾಜವಂಶಸ್ಥೆ ಲಲಿತಾರಾಣಿ ರಾಯಲು ಮಾತನಾಡಿ, ಪ್ರಾಣಿ, ಪಕ್ಷಿ ಸಂಕುಲದ ಉಳಿವಿಗಾಗಿ ಪರಿಸರ ರಕ್ಷಣೆ ಮುಖ್ಯವಾಗಿದ್ದು, ಮರಗಳನ್ನು ಬೆಳೆಸುವ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಿದೆ. ಪರಿಸರ ಪ್ರೇಮಿ ಡಿ. ಸಿಂಧೂ ನೇತೃತ್ವದ ಸಂಸ್ಥೆ ಈಗಾಗಲೇ ಆನೆಗೊಂದಿ ಭಾಗದಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದೆ ಎಂದು ತಿಳಿಸಿದರು.

    ಗ್ರಾಪಂ ಸದಸ್ಯ ಕೆ.ವೆಂಕಟೇಶಬಾಬು ಮಾತನಾಡಿ, ಪ್ರಕೃತಿ ದೇಶದ ಸಂಪತ್ತಾಗಿದ್ದು, ಸಸಿ ನೆಡವುದರ ಜತೆಗೆ ಆರೈಕೆಗೂ ಸಾರ್ವಜನಿಕರು ಸಹಕರಿಸಬೇಕಿದೆ ಎಂದರು.

    ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ, ತಿಮ್ಮಪ್ಪ ಬಾಳಿಕಾಯಿ, ಚಿತ್ರನಟ ವಿಷ್ಣುತೀರ್ಥ ಜೋಶಿ, ಮುಖಂಡರಾದ ಯುವರಾಜ್, ವೆಂಕಟೇಶ, ನರಸಿಂಹಲು, ಚಂದ್ರಶೇಖರ್ ಭತ್ತದ್, ಅಂಬಿಗರ ಅಂಜಿನಪ್ಪ, ಮುಫ್ತಿಯಾರ್, ಸಂಸ್ಥೆ ಪದಾಧಿಕಾರಿಗಳಾದ ಡಿ.ಸಿಂಧೂ, ಲಕ್ಷ್ಮೀಪ್ರಿಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts