More

    ಅಯ್ಯಪ್ಪ ಮಾಲಾಧಾರಿಗಳಿಂದ ಪಡಿ ಪೂಜೆ

    ಗಂಗಾವತಿ: ತಾಲೂಕಿನ ಢಣಾಪುರದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಇರುಮುಡಿ ಪೂಜೆ ಮತ್ತು ಶೋಭಾಯಾತ್ರೆ ಬುಧವಾರ ಅದ್ದೂರಿಯಾಗಿ ನಡೆಯಿತು.

    ಕಳೆದ 40 ದಿನಗಳಿಂದ ವ್ರತಕೈಗೊಂಡಿದ್ದ ಅಯ್ಯಪ್ಪಸ್ವಾಮಿ ಮಾಲಾಧಿಕಾರಿಗಳಿಂದ ಗ್ರಾಮದ ಶ್ರೀ ಮಾರುತೇಶ್ವರ ದೇವಾಲಯದಲ್ಲಿ ಪಡಿ ಪೂಜೆ ಮತ್ತು ಇರುಮುಡಿ ಕಟ್ಟುವ ಸೇವೆ ನೆರವೇರಿತು. ಮೂರ್ತಿಗೆ ಅಭಿಷೇಕ, ಪಾರಾಯಣ, ಅಯ್ಯಪ್ಪಸ್ವಾಮಿ ಗಾಯನ ಮತ್ತು ನಿರಂತರ ಭಜನೆ ನಡೆಯಿತು.

    ಮಾಲಾಧಾರಿಗಳಿಗೆ ಧಾರ್ಮಿಕ ಮುಖಂಡ ಶೇಖರಯ್ಯ ಮತ್ತು ತಂಡದವರು ಇರುಮುಡಿ ಕಟ್ಟುವ ಮೂಲಕ ವಾದ್ಯ, ವೇದೋಷಣಗಳೊಂದಿಗೆ ಅದ್ದೂರಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ನಂತರ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

    ಅಯ್ಯಪ್ಪ ಸ್ವಾಮಿ ವ್ರತಾಚರಣೆ ಮತ್ತು ದೈವ ಭಕ್ತಿ ಕುರಿತು ದೇವಸಮುದ್ರದ ಶೇಖರಯ್ಯಸ್ವಾಮಿ ಮಾತನಾಡಿದರು. ಮಾಲಾಧಾರಿಗಳಾದ ಶರಣಪ್ಪ, ಆಂಜನೇಯ, ಬಸವರಾಜ, ಪ್ರಶಾಂತ, ಪ್ರವೀಣ, ಹನುಮೇಶ, ರಾಹುಲ್, ವರದರಾಜ, ಮಣಿಕಂಠ, ಮುಖಂಡರಾದ ವೆಂಕಟೇಶ, ಜಗದೀಶ ಮುಸ್ಟೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts