More

    ರೈತರಿಗೆ ಸಹಾಯಧನದ ಮಾಹಿತಿ ನೀಡಿ

    ಗಂಗಾವತಿ: ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ಕೃಷಿ ಆತ್ಮಯೋಜನೆಯ ತಾಲೂಕು ಅನುಷ್ಠಾನ ಸಮಿತಿ ಮತ್ತು ರೈತ ಸಲಹಾ ಸಮಿತಿ ಸಭೆ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

    ಆತ್ಮ ಯೋಜನೆಯಡಿ ಕೈಗೆತ್ತಿಕೊಳ್ಳಬೇಕಿರುವ ಕಾರ್ಯಕ್ರಮಗಳ ಬಗ್ಗೆ ಕ್ರೀಯಾಯೋಜನೆ ಮತ್ತು ವಿವಿಧ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

    ಅರಣ್ಯ ಇಲಾಖೆಯಡಿ ರೈತರಿಗೆ ಸಸಿಗಳ ವಿತರಣೆ, ಮಣ್ಣಿನ ಸವಕಳಿ ನಿಯಂತ್ರಣಕ್ಕೆ ಗಿಡಗಳನ್ನು ಬೆಳೆಸುವುದು, ತೋಟಗಾರಿಕೆ ಇಲಾಖೆಯಡಿ ಹನಿ ನೀರಾವರಿ ಘಟಕ, ಕೃಷಿ ಯಾಂತ್ರೀಕರಣ, ಬದುವಿನ ಸುತ್ತ ತೆಂಗಿನ ಸಸಿ ನೆಡುವುದು, ರಿಯಾಯಿತಿ ದರದಲ್ಲಿ ಹಣ್ಣಿನ ಬೆಳೆಗಳ ಸಲಕರಣೆಗಳನ್ನು ಒದಗಿಸುವುದು, ಪಶು ಸಂಗೋಪನೆ ಇಲಾಖೆಯಡಿ ಕಾಲು ಬಾಯಿ ಲಸಿಕೆ, ರ‌್ಯಾಬಿಟ್ ವ್ಯಾಕ್ಸಿನ್, ಶೇ.50 ರಿಯಾಯಿತಿ ದರದಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆ, ಜಾನುವಾರುಗಳಿಗೆ ವಿಮೆ ಯೋಜನೆ, ರೇಷ್ಮೆ ಇಲಾಖೆಯಡಿ ಹನಿ ನೀರಾವರಿ ಘಟಕ, ರೇಷ್ಮೆ ಸಾಕಣೆ ಶೆಡ್‌ಗೆ ಸಹಾಯಧನದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಲಾಯಿತು.

    ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ ಮಾತನಾಡಿ, ಪ್ರಮುಖ ಯೋಜನೆಗಳಾದ ಕೃಷಿ ಯಂತ್ರೀಕರಣಕ್ಕೆ ಉತ್ತೇಜನ ನೀಡುವುದು, ಪಿಎಂ ಕಿಸಾನ್ ಇ ಕೆವೈಸಿ ಬಗ್ಗೆ ಜಾಗೃತಿ ಮೂಡಿಸಬೇಕು. ರೈತರ ಎ್ಐಡಿಗೆ ಪಹಣಿ ಜೋಡಣೆ ಬಗ್ಗೆ ತಿಳಿವಳಿಕೆ ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

    ಆತ್ಮ ಯೋಜನೆ ಉಪಯೋಜನಾ ನಿರ್ದೇಶಕ ಶಿವಪ್ಪ ನಾಯಕ, ತಾಂತ್ರಿಕ ವ್ಯವಸ್ಥಾಪಕ ಶಾರ್ೂಪಾಷಾ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರದೀಪಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರತಿನಿಧಿ ರ್ಇಾನ್ ಉಲ್ಲಾ, ವಿವಿಧ ಇಲಾಖೆ ಅಧಿಕಾರಿಗಳಾದ ಧರೆಪ್ಪ ಹೊನ್ನಮುಡಿ, ಶಿವಪ್ಪ ಹಳ್ಳಿ, ವಿದ್ಯಾವತಿ, ದೀಪಾ, ಪೂರ್ಣಿಮಾ, ರೈತ ಸಲಹಾ ಸಮಿತಿ ಸದಸ್ಯರಾದ ಬಿ.ಶೇಖರಪ್ಪ, ಗಾದಿಲಿಂಗಪ್ಪ ಚಳ್ಳೂರು, ಮಂಜುನಾಥ, ಅಮರನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts