More

    ಕರಡಿ ದಾಳಿಯಿಂದ ಮೂವರಿಗೆ ಗಾಯ; ಜಾಂಬವಂತನ ಸೇರೆಗೆ ಶಾಸಕ ಪರಣ್ಣ ಮುನವಳ್ಳಿ ಸೂಚನೆ

    ಗಂಗಾವತಿ: ನಗರದಲ್ಲಿ ಭಾನುವಾರ ಬೆಳಗಿನ ಜಾವ ಕಾಣಿಸಿಕೊಂಡ ಕರಡಿಯೊಂದು ಮೂವರು ವಾಯುವಿಹಾರಿಗಳನ್ನು ಕಚ್ಚಿ ಗಾಯಗೊಳಿಸಿದೆ.
    ಎಚ್‌ಆರ್‌ಎಸ್ ಕಾಲನಿಯ ನರ್ಮದಾಬಾಯಿ, ಈಶ್ವರಮ್ಮ ಮತ್ತು ಉದ್ಯಾನ ನಿರ್ವಹಣೆ ಕಾರ್ಮಿಕ ಖಾಸಿಂಸಾಬ್ ಗಾಯಗೊಂಡಿದ್ದು, ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹೊಸಳ್ಳಿ ರಸ್ತೆಯ ಸಾರಿಗೆ ಡಿಪೋ ಒಳಗಿನಿಂದ ನಗರ ಪ್ರವೇಶಿಸಿರುವ ಕರಡಿ ಬಳಿಗಾರ ಓಣಿಯ ಮೂಲಕ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಬಂದಿದೆ. ವಾಯುವಿಹಾರಿಗಳು ಗಾಬರಿಗೊಂಡು ಕೂಗಾಡಿದ್ದರಿಂದ ಹಳೇ ಪ್ರವಾಸಿ ಮಂದಿರದ ಕಾಂಪೌಂಡ್ ಹಾರಿ ಮಳೇಮಲ್ಲೇಶ್ವರ ಬೆಟ್ಟದತ್ತ ಓಡಿಹೋಗಿದೆ.

    ಈ ವೇಳೆ ಬಹಿರ್ದೆಸೆಗೆ ತೆರಳುತ್ತಿದ್ದ ನರ್ಮದಾಬಾಯಿ ಮೇಲೆರಗಿ ಗಾಯಗೊಳಿಸಿದೆ. ಬಳಿಕ ತಪ್ಪಿಸಿಕೊಳ್ಳುವ ಭರದಲ್ಲಿ ಎದುರಿಗೆ ಬಂದವರ ಮೇಲೆ ದಾಳಿ ನಡೆಸಿದೆ. ಕರಡಿ ಓಡಿಹೋಗುತ್ತಿರುವ ದೃಶ್ಯ ಸಾರಿಗೆ ಸಂಸ್ಥೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ನಗರದ ಉಪವಿಭಾಗ ಆಸ್ಪತ್ರೆಗೆ ಶಾಸಕ ಪರಣ್ಣ ಮುನವಳ್ಳಿ ಹಾಗೂ ತಾಲೂಕು ಅರಣ್ಯಾಧಿಕಾರಿ ಶಿವರಾಜ ಮೇಟಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಕರಡಿ ಸೆರೆ ಹಿಡಿಯುವಂತೆ ಶಾಸಕರು ಅರಣ್ಯಾಧಿಕಾರಿಗೆ ಸೂಚಿಸಿದರು. ಅರಣ್ಯ ರಕ್ಷಕರ ತಂಡ ಕರಡಿ ಹೆಜ್ಜೆ ಗುರುತು ಜಾಡು ಹಿಡಿದು ಸೆರೆಗೆ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts