More

    ಬಿದಿರಿನ ವಸ್ತುಗಳ ಬಳಕೆಗೆ ಆದ್ಯತೆ ನೀಡಿ: ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಸಲಹೆ

    ಗಂಗಾವತಿ: ಹೊಸ ವಿನ್ಯಾಸದ ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದ್ದು, ಶಿಬಿರಾರ್ಥಿಗಳು ಆಸಕ್ತಿವಹಿಸಿ ಕಲಿಕೆಯಬೇಕು ಎಂದು ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಹೇಳಿದರು.

    ನಗರದ ಬಂಬೂ ಬಜಾರ್ ಮೇದಾರ ಸಮುದಾಯ ಭವನದಲ್ಲಿ ನ್ಯಾಷನಲ್ ಹ್ಯಾಂಡಿಕ್ರ್‌ಟಾ ಡೆವಲಪ್‌ಮೆಂಟ್ ಪ್ರೋಗ್ರಾಮ್ ಯೋಜನೆಯಡಿ (ಎನ್‌ಎಚ್‌ಡಿಪಿ) ಕೇಂದ್ರ ಜವಳಿ ಸಚಿವಾಲಯ, ಮಂಗಳೂರಿನ ಕರಕುಶಲ ಸೇವಾ ಕೇಂದ್ರ ಆಯೋಜಿಸಿರುವ ಬಿದಿರಿನ ಕರಕುಶಲ ತಾಂತ್ರಿಕ ಅಭಿವೃದ್ಧಿ ತರಬೇತಿ ಕಾರ್ಯಾಗಾರದಲ್ಲಿ ಭಾನುವಾರ ಮಾತನಾಡಿದರು. ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ಪ್ರೇರಿತ ಅಲಂಕಾರಿಕ ವಸ್ತುಗಳನ್ನು ನಿಷೇಧಿಸಬೇಕಿದೆ. ಬಿದಿರಿನ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು. ಉತ್ಪನ್ನ ತಯಾರಿಕೆ ಜತೆಗೆ ಮಾರುಕಟ್ಟೆ ವ್ಯವಸ್ಥೆಗೆ ಮುಂದಾಗಬೇಕಿದ್ದು, ರಾಜ್ಯದ ಕರಕುಶಲ ಅಭಿವೃದ್ಧಿ ನಿಗಮದ ಗಮನಕ್ಕೆ ತರಲಾಗುವುದು ಎಂದರು.

    ಬಿದಿರು ಕಲೆ ವಿನ್ಯಾಸಗಾರ್ತಿ, ಉತ್ತರ ಪ್ರದೇಶ ಲಕ್ನೋದ ಮಾಧವಿ ಕಶ್ಯಪ್ ಮಾತನಾಡಿ, ಕರಕುಶಲ ವಲಯ ಉತ್ತೇಜಿಸಲು ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, 50 ದಿನಗಳ ತರಬೇತಿಯಲ್ಲಿ ಗೌರವಧನದೊಂದಿಗೆ ಉತ್ಪನ್ನಗಳ ತಯಾರಿಕೆ ತರಬೇತಿ ನೀಡಲಾಗುವುದು. ಶಿಬಿರಾರ್ಥಿಗಳಿಗೆ ಉತ್ಪನ್ನದ ಕಚ್ಚಾವಸ್ತು ಮತ್ತು ತಯಾರಿಕೆ ಸಲಕರಣೆಗಳನ್ನು ಉಚಿತ ನೀಡಲಾಗಿದೆ. ಸಂಪನ್ಮೂಲ ವ್ಯಕ್ತಿ ಪ್ರಕಾಶ ಮೇದಾರ್, ಮಾಲಾ ಹಾಗೂ 30 ಶಿಬಿರಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts