More

    ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಪ

    ಗಂಗಾವತಿ; ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ಹನುಮ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು.

    ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ, ಹನುಮಾನ್ ಚಾಲೀಸ ಪಾರಾಯಣ, ಪವಮಾನ ಹೋಮ, ಪೂರ್ಣಾಹುತಿ, ಹನುಮಮಾಲಾಧಾರಿಗಳ ಮಾಲೆ ವಿಸರ್ಜನೆ ಮತ್ತು ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ವಿವಿಧ ರಾಜ್ಯಗಳಿಂದ ಬಂದಿದ್ದ ಸಾಧು ಮತ್ತು ಸಂತರು ಭಜನೆಯಲ್ಲಿ ತೊಡಗಿದ್ದು, ಪಾದಯಾತ್ರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

    ದೇವಾಲಯದ ಕಾರ್ಯದರ್ಶಿ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಚುನಾವಣೆ ಕರ್ತವ್ಯಕ್ಕಾಗಿ ಜಿಲ್ಲೆಗೆ ಬಂದಿರುವ ಇಂಡಿಯನ್ ಟಿಬೆಟ್ ಬಾರ್ಡರ್ ಪ್ಲಟೂನ್ ಯೋಧರು ಹನುಮನ ದರ್ಶನ ಪಡೆದರು. ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ, ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಎಪಿಎಂಸಿ ಮಾಜಿ ಸದಸ್ಯ ರೆಡ್ಡಿ ಶ್ರೀನಿವಾಸ, ರಮೇಶನಾಯಕ ಭೇಟಿ ನೀಡಿದ್ದರು.
    ಯಾಜ್ಞವಲ್ಕೃ ದೇವಾಲಯ: ನಗರದ ಶ್ರೀಯೋಗೀಶ್ವರ ಯಾಜ್ಞವಕ್ಕೃ ದೇವಾಲಯದಲ್ಲಿ ಹನುಮ ಜಯಂತಿ ನಿಮಿತ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮೂರ್ತಿಗೆ ರಜತ ಕವಚ ಸಮರ್ಪಣೆ, ಅಭಿಷೇಕ, ಹೂವಿನ ಅಲಂಕಾರ, ಶ್ರೀ ಸತ್ಯನಾರಾಯಣ ಪೂಜೆ, ತೊಟ್ಟಿಲು ಸೇವೆ ಜರುಗಿತು. ದೇವಾಲಯ ಸಮಿತಿ ಅಧ್ಯಕ್ಷ ಮುರಳೀಧರ ಕುಲಕರ್ಣಿ, ಪದಾಧಿಕಾರಿಗಳಾದ ಶೇಷಗಿರಿ ಕುಲಕರ್ಣಿ, ತಿರುಮಲರಾವ್ ಆಲ್ಲಂಪಲ್ಲಿ, ವಟಗಲ್ ರಂಗನಾಥ, ಸತೀಶ ಕುಲ್ಕರ್ಣಿ, ವೆಂಕಟೇಶ, ಲೆಕ್ಕಿಹಾಳ್ ರಾಘವೇಂದ್ರರಾವ್, ಗುರುರಾಜ್ ವೆರ್ಣೇಕರ್, ಅರ್ಚಕ ಶ್ರೀನಿವಾಸ ಜೋಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts