More

    ಗೈರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ, ತಹಸೀಲ್ದಾರ್ ಯು.ನಾಗರಾಜ್ ಎಚ್ಚರಿಕೆ

    ಗಂಗಾವತಿ: ಮನೆಮನೆಯಲ್ಲೂ ತಿರಂಗ ಹಾರಿಸುವ ನಿಟ್ಟಿನಲ್ಲಿ ಸಂಘಟನೆಗಳು ನೆರವಾಗುವಂತೆ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಹೇಳಿದರು.

    ನಗರದ ತಾಪಂ ಮಂಥನ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ತಾಲೂಕಾಡಳಿತ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
    ತಹಸೀಲ್ದಾರ್ ಯು.ನಾಗರಾಜ್ ಮಾತನಾಡಿ, ಧ್ವಜಾರೋಹಣ ದಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಧಕರನ್ನು ಸನ್ಮಾನಿಸಲಾಗುವುದು. ಸಭೆಗೆ ಗೈರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ ಶಿಾರಸ್ಸು ಮಾಡಲಾಗುವುದು ಎಂದರು.

    ನಯೋಪ್ರಾ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಬಿಇಒ ಸೋಮಶೇಖರಗೌಡ ತಿಪ್ಪನಾಳ್, ತಾಪಂ ಲೆಕ್ಕ ಪರಿಶೋಧಕ ಚನ್ನಬಸವ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಪಂಪಣ್ಣನಾಯಕ, ರಮೇಶ ಕೋಟಿ, ವಿರೂಪಾಕ್ಷಗೌಡ ನಾಯಕ,ಚನ್ನಬಸವ ಜೇಕಿನ್, ರಾಜೇಶ ಅಂಗಡಿ ಸೇರಿ ತಾಲೂಕುಮಟ್ಟದ ಅಧಿಕಾರಿಗಳಿದ್ದರು.

    ಬಿಡಾಡಿ ದನಗಳ ನಿಯಂತ್ರಿಸಿ: ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಿದ್ದು ನಿಯಂತ್ರಿಸುವಂತೆ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದರು. ದನಗಳ ಮಾಲೀಕರು ಕೂಡಲೇ ಸುಪರ್ದಿಗೆ ಪಡೆಯಬೇಕು. ಎರಡು ದಿನ ಗಡುವು ನೀಡಲಾಗುತ್ತಿದ್ದು, ನಿರ್ಲಕ್ಷಿಸಿದರೆ ದನಗಳನ್ನು ವಶಕ್ಕೆ ತೆಗೆದುಕೊಂಡು, ಗೋಶಾಲೆಗೆ ರವಾನಿಸಲಾಗುವುದು ಎಂದು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳಿದರು. ಹರ ಘರ್ ತಿರಂಗಾ ಯೋಜನೆಯಡಿ ಧ್ವಜಗಳನ್ನು ನಗರಸಭೆಯಲ್ಲಿ ಮಾರಾಟ ಮಾಡುತ್ತಿದ್ದು, ಪ್ರತಿಯೊಂದಕ್ಕೆ 22 ರೂ. ನಿಗದಿಪಡಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts