More

    300 ಪ್ರಕರಣಗಳ ಇತ್ಯರ್ಥಪಡಿಸುವ ಗುರಿ- 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಜಿ.ಶಿವಳ್ಳಿ ಮಾಹಿತಿ

    ಗಂಗಾವತಿ: ಜೆಎಂಎ್ಸಿಯಲ್ಲಿ ೆ.11ರಂದು ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, 300 ಪ್ರಕರಣಗಳ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಜಿ.ಶಿವಳ್ಳಿ ಹೇಳಿದರು.

    ನಗರದ ಜೆಎಂಎ್ಸಿ ಆವರಣದಲ್ಲಿ ನಡೆದ ಸಭೆಯಲ್ಲಿ ಬುಧವಾರ ಮಾತನಾಡಿದರು. ಕೆಲ ಕ್ರಿಮಿನಲ್ ಪ್ರಕರಣ ಹೊರತುಪಡಿಸಿ ಸಿವಿಲ್ ವ್ಯಾಜ್ಯಗಳನ್ನು ಪರಸ್ಪರ ಸೌಹಾರ್ದತೆ ಮೇರೆಗೆ ಇತ್ಯರ್ಥಪಡಿಸಲಾಗುವುದು. ಅಲ್ಲದೆ ಬಹುದಿನಗಳಿಂದ ಬಾಕಿ ಉಳಿದಿರುವ ಪ್ರಕರಣಗಳಿಗೆ ಮುಕ್ತಿ ದೊರೆಯಲಿದೆ. ಇತ್ತೀಚಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆಗಳು ಹೆಚ್ಚುತ್ತಿವೆ. ನ್ಯಾಯಾಧೀಶರ ಕೊರತೆ, ವಿವಿಧ ಕಾರಣಗಳಿಂದ ವಿಲೇವಾರಿ ವಿಳಂಬವಾಗುತ್ತಿದೆ. ಪ್ರಕರಣಗಳಿಗೆ ಅಂತ್ಯ ಹಾಡಲು ಅದಾಲತ್ ಪರಿಣಾಮಕಾರಿಯಾಗಿದೆ ಎಂದರು.

    ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರಮೇಶ ಎಸ್.ಗಾಣಿಗೇರ್ ಮಾತನಾಡಿ, 917 ಚೆಕ್ ಬೌನ್ಸ್‌ಗಳ ಪ್ರಕರಣಗಳಿವೆ. ಜೆಎಂಎ್ಸಿಯ ನಾಲ್ಕು ಬೆಂಚ್‌ಗಳಲ್ಲಿ 7,846 ಕೇಸ್‌ಗಳು ಬಾಕಿ ಉಳಿದಿವೆ. ಆದಾಲತ್‌ನಲ್ಲಿ ದಾಂಪತ್ಯ ಕಲಹ, ಆಸ್ತಿ ಪಾಲು, ಜೀವನಾಂಶ, ವಿಚ್ಛೇದನ ಅರ್ಜಿದಾರರ ಒಗ್ಗೂಡುವಿಕೆ ವಿವಿಧ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದರು.

    ಪ್ರಕರಣಗಳ ವಿಲೇವಾರಿ ಮತ್ತು ರಾಜಿಸಂಧಾನ ಕುರಿತು ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರಬಾರೆ ಮಾಹಿತಿ ನೀಡಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಗೌರಮ್ಮ ಪಾಟೀಲ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts