More

    ಅವೈಜ್ಞಾನಿಕ ದಾರಿ ಬಂದ್ ಮಾಡಿ

    ಸಿಂಧನೂರು: ನಗರದ ಗಂಗಾವತಿ, ಕುಷ್ಟಗಿ ಹೆದ್ದಾರಿ ಮಾರ್ಗದಲ್ಲಿ ನಿರ್ಮಿಸಿರುವ ರಸ್ತೆ ವಿಭಜಕಗಳ ನಡುವೆ ಬಿಟ್ಟಿರುವ ಅವೈಜ್ಞಾನಿಕ ದಾರಿಗಳನ್ನು ಬಂದ್ ಮಾಡಿ, ಸಂಚಾರ ಸುಗಮಗೊಳಿಸಲು ಕ್ರಮಕೈಗೊಳ್ಳಬೇಕೆಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರರಿಗೆ ಕರವೇಯಿಂದ ಮನವಿ ಸಲ್ಲಿಸಲಾಯಿತು.

    ನಗರದಲ್ಲಿ ಅತೀ ವೇಗದ ವಾಹನ ಚಾಲನೆ, ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ಸರಣಿ ಅಪಘಾತಗಳು ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 150 ಬರುವ ನಗರದಲ್ಲಿ ರಸ್ತೆಗೆ ವಿಭಜಕ ನಿರ್ಮಾಣ ಮಾಡಿದ್ದು, ಮನಸ್ಸಿಗೆ ಬಂದಂತೆ ಅಲ್ಲಲ್ಲಿ ದಾರಿ ಮಾಡಿಕೊಟ್ಟಿರುವುದರಿಂದ ವಾಹನಗಳು, ಪಾದಚಾರಿಗಳು ರಸ್ತೆ ಕ್ರಾಸ್ ಮಾಡುವ ಸಂದರ್ಭ ಅಪಘಾತಗಳು ಸಂಭವಿಸುತ್ತಿವೆ.

    ಈಗಾಗಲೇ ಇದರಿಂದ ಮೂರ‌್ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ. ವಿಭಜಕಗಳ ಮಧ್ಯ ಭಾಗದಲ್ಲಿ ಅನವಶ್ಯಕವಾಗಿರುವ ದಾರಿಗಳನ್ನು ಬಂದ್ ಮಾಡಿ, ರಸ್ತೆಯ ಮುಖ್ಯ ತಿರವುಗಳ ಎರಡು ಕಡೆಗೆ ಮಾತ್ರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಕರವೇ ತಾಲೂಕು ಘಟಕ ಅಧ್ಯಕ್ಷ ಗಂಗಣ್ಣ ಡಿಶ್, ಉಪಾಧ್ಯಕ್ಷ ದೇವೇಂದ್ರಗೌಡ ಗುಂಜಳ್ಳಿ, ಜಿಲ್ಲಾ ಸಂಚಾಲಕ ರಾಮಕೃಷ್ಣ ಭಜಂತ್ರಿ, ಗೌರವಾಧ್ಯಕ್ಷ ಕಾಳಪ್ಪ ಮೇಸ್ತ್ರೀ, ಬಾಷಾಸಾಬ, ಶರಣಬಸವ ಮಲ್ಲಾಪುರ, ಸುರೇಶ, ಬಸವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts