More

    ಸಾಮೂಹಿಕ ವಿವಾಹಗಳಿಂದ ಸಾಮರಸ್ಯ ಹೆಚ್ಚಳ

    ಗಂಗಾವತಿ: ಆರ್ಥಿಕ ವೆಚ್ಚ ತಗ್ಗಿಸುವ ಸಾಮೂಹಿಕ ಮದುವೆಗಳು ಎಲ್ಲ ವರ್ಗಕ್ಕೂ ಅನುಕೂಲದ ಜತೆಗೆ ಸಾಮರಸ್ಯ ಹೆಚ್ಚಿಸಲಿವೆ ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.

    ನಗರದ ಶ್ರೀ ಚನ್ನಮಲ್ಲಿಕಾರ್ಜುನ ಪುರಾಣ ಮಂಟಪದಲ್ಲಿ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿ ಮತ್ತು ಚನ್ನಬಸವ ಸ್ವಾಮಿ ಸೇವಾ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವರ್ಷದಿಂದ ವರ್ಷಕ್ಕೆ ಜೋಡಿಗಳ ಸಂಖ್ಯೆ ಹೆಚ್ಚಾಗಬೇಕಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಸಮಾಜಮುಖಿ ಚಟುವಟಿಕೆಗಳತ್ತ ಗಮನಹರಿಸಬೇಕು. ಸೇವಾ ಸಮಿತಿಯ ನಿರ್ಧಾರ ಔಚಿತ್ಯಪೂರ್ಣವಾಗಿದ್ದು, ಇನ್ನಷ್ಟು ಕ್ರಿಯಾಶೀಲ ಚಟುವಟಿಕೆ ನಡೆಯಲಿ ಎಂದರು.

    ಮೊದಲ ಬಾರಿಗೆ ಆಯೋಜಿಸಿದ್ದ ಸಾಮೂಹಿಕ ಮದುವೆಯಲ್ಲಿ 7 ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಮದುವೆಯ ಎಲ್ಲ ವೆಚ್ಚವನ್ನು ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿ ಭರಿಸಿದ್ದು, ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮಂಟಪ ಸಮಿತಿ ಸಾಥ್ ನೀಡಿತು.

    ಅರಳಹಳ್ಳಿ ಮಠದ ಗವಿಸಿದ್ದಯ್ಯಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ನಗರಸಭೆ ಸದಸ್ಯರಾದ ಮನೋಹರಸ್ವಾಮಿ ಹಿರೇಮಠ, ಉಮೇಶ ಸಿಂಗನಾಳ್, ಉದ್ಯಮಿಗಳಾದ ಕೆ.ಕಾಳಪ್ಪ, ಅಕ್ಕಿಕೊಟ್ರಪ್ಪ, ಶರಣಬಸವಸ್ವಾಮಿ ಅಯೋಧ್ಯಾ, ಸಿಂಗನಾಳ ಸುರೇಶ, ಟ್ರಸ್ಟ್ ಕಮಿಟಿ ಧರ್ಮದರ್ಶಿಗಳಾದ ಕೆ.ಚನ್ನಬಸಯ್ಯಸ್ವಾಮಿ, ಹೊಸಳ್ಳಿ ದೊಡ್ಡ ರಾಮಲಿಂಗಪ್ಪ, ಚಂದ್ರೇಗೌಡ ಪೊ.ಪಾಟೀಲ್, ಸೇವಾ ಸಮಿತಿ ಸದಸ್ಯರಾದ ಬರಗೂರು ನಾಗರಾಜ್, ವಿಜಯಮಹಾಂತೇಶ ಗಲಗಲಿ,ಶಾಂತಮಲ್ಲಯ್ಯಸ್ವಾಮಿ, ಲಿಂಗರಾಜ್ ತಿಮ್ಮಾಪುರ, ಸಂದೀಪ ಪಾಟೀಲ್, ವೀರೇಶ ಮಾ.ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts