More

    ನಗರ ಸೌಂದರೀಕರಣಕ್ಕೆ ಆದ್ಯತೆ ನೀಡುವುದಾಗಿ ಹೇಳಿದ ಪ್ರಭಾರ ಪೌರಾಯುಕ್ತ ಕೆ.ಆರ್.ಅಭಿಷೇಕ

    ಗಂಗಾವತಿ: ನಗರದ ವೃತ್ತಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಳಕೆ ಮಾಡುತ್ತಿದ್ದು, ಸೌಂದರೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಪ್ರಭಾರ ಪೌರಾಯುಕ್ತ ಕೆ.ಆರ್.ಅಭಿಷೇಕ ಹೇಳಿದರು.

    ನಗರದ ಗಾಂಧಿ ವೃತ್ತದಲ್ಲಿ ಕೈಗೆತ್ತಿಕೊಂಡ ವೃತ್ತ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದರು. ಗಾಂಧಿ ಮತ್ತು ರಾಣಾ ಪ್ರತಾಪ ಸಿಂಹ ವೃತ್ತದ ಅಲಂಕಾರಕ್ಕಾಗಿ 9ಲಕ್ಷ ರೂ. ಯೋಜನೆ ರೂಪಿಸಿದ್ದು, ಗ್ರಿಲ್ ಅಳವಡಿಕೆ, ಹುಲ್ಲು ಹಾಸು, ಕಾಂಕ್ರಿಟ್ ಕಾಮಗಾರಿ ಸೇರಿ ಕಾರಂಜಿ ವ್ಯವಸ್ಥೆ ಮಾಡಲಾಗುವುದು. ನಗರಸಭೆ ನಿರ್ವಹಣೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಗರೋತ್ಥಾನ, ಅಮೃತಸಿಟಿ ಸೇರಿ ವಿವಿಧ ಅನುದಾನದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳೂ ಭರದಿಂದ ಸಾಗಿದ್ದು, ಕೆಲವೊಂದು ಪೂರ್ಣಗೊಂಡಿವೆ. ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅನುದಾನ ಕ್ರೋಢಿಕರಿಸಲಾಗುತ್ತಿದೆ. ನಗರಸಭೆ ಹೊಸ ಕಟ್ಟಡ ಮುಕ್ತಾಯ ಹಂತದಲ್ಲಿದ್ದು, ಕೆಲ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗಿದ್ದು, ಟೆಂಡರ್ ಷರತ್ತಿನಂತೆ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದರು. ಜೆಇ ಶಂಕರಗೌಡ, ಗುತ್ತಿಗೆದಾರರಾದ ಗಂಗಾಧರ ಹೊಸ್ಕೇರಾ, ಸಾಬಯ್ಯ ಕಂಪ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts