More

    ಬೋನಿಗೆ ಬಿದ್ದ 6 ವರ್ಷದ ಗಂಡು ಚಿರತೆ

    ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಉಪಟಳ ನೀಡುತ್ತಿದ್ದ ಚಿರತೆಯೊಂದು ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದ ಬಳಿ ಬೆಟ್ಟದಲ್ಲಿಟ್ಟಿದ್ದ ಬೋನಿಗೆ ಸೋಮವಾರ ಬಿದ್ದಿದೆ.

    ಅಂದಾಜು 6 ವರ್ಷದ ಗಂಡು ಚಿರತೆಯಾಗಿದ್ದು, ಆರೋಗ್ಯವಾಗಿದೆ. 2020ರ ಡಿ.17ರಂದು ಇದೇ ಬೋನಿಗೆ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿದ್ದು, ಮತ್ತೆ ತಿಂಗಳ ನಂತರ ಮತ್ತೊಂದು ಬೋನಿಗೆ ಬಿದ್ದಿದೆ. ಎಂದಿನಂತೆ ದೈನಂದಿನ ಪೂಜೆ ಕಾರ್ಯಕ್ರಮಕ್ಕಾಗಿ ವ್ಯವಸ್ಥೆಗೊಳಿಲು ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯಸ್ವಾಮೀಜಿ ಬಂದಾಗ ಬೋನಿನಲ್ಲಿ ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿದೆ.

    ಸ್ಥಳಕ್ಕೆ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದ ವೈದ್ಯರಾದ ವಾಣಿ ಮತ್ತು ರಮೇಶ ನೇತೃತ್ವದ ತಂಡ ಆಗಮಿಸಿ,ಅರವಳಿಕೆ ಚುಚ್ಚುಮದ್ದಿನ ಮೂಲಕ ಪ್ರಜ್ಞೆ ತಪ್ಪಿಸಿ ಬಲೆ ಮೂಲಕ ಮೃಗಾಲಯಕ್ಕೆ ಕೊಂಡಯ್ಯಲಾಯಿತು. ತಾಲೂಕು ಅರಣ್ಯಾಧಿಕಾರಿ ಶಿವರಾಜ ಮೇಟಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ರಮೇಶ ಇತರರಿದ್ದರು.

    ಆನೆಗೊಂದಿ, ವಿರುಪಾಪುರಗಡ್ಡಿ, ಹನುಮನಹಳ್ಳಿ, ಜಂಗ್ಲಿ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದು, ಸಂಗಾಪುರದವರಿಗೂ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿವೆ. ಅರಣ್ಯ ಪ್ರದೇಶ ಮತ್ತು ಬೆಟ್ಟದ ಭಾಗದಲ್ಲಿ ಒಬ್ಬಂಟಿಯಾಗಿ ತಿರುಗಾಡದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಕರಿಯಮ್ಮನಗಡ್ಡಿಯ ಯುವಕನ ಮೇಲೆ ಚಿರತೆ ದಾಳಿ ನಡೆದು ಹಲವು ದಿನಗಳಾಗಿದ್ದರಿಂದ, ಸೆರೆ ಸಿಕ್ಕ ಚಿರತೆ ನರಭಕ್ಷಕ ಎಂದು ಹೇಳಲಾಗಲ್ಲ.
    | ಡಾ.ಹರ್ಷಾಭಾನು, ಡಿಎ್ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts